ನವದೆಹಲಿ : ಪ್ರಸ್ತುತ ಪೆಟ್ರೋಲ್ ಬೆಲೆಗಳು (Petrol  Price) ಮುಗಿಲು ಮುಟ್ಟುತ್ತಿವೆ. ತೈಲ ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಬಜೆಟ್ ಕೂಡಾ ಹದಗೆಟ್ಟಿದೆ ಎಂದರೆ  ತಪ್ಪಾಗದು. ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಬೈಕುಗಳನ್ನು ಬಳಸುತ್ತಾರೆ. ಬೈಕ್ ಎಷ್ಟು ಮೈಲೇಜ್ (Bike mileage)  ಕೊಡುತ್ತಿದೆ ಎನ್ನುವುದು ಕೂಡಾ ಮುಖ್ಯವಾಗಿರುತ್ತದೆ. ಪ್ರತಿಯೊಬ್ಬರೂ ತಮ್ಮ ಬೈಕು ಗರಿಷ್ಠ ಮೈಲೇಜ್ ನೀಡಬೇಕೆಂದುಕೊಳ್ಳುತ್ತಾರೆ.  ಬೈಕ್ ಹೆಚ್ಚು ಮೈಲೇಜ್ ಕೊಟ್ಟಷ್ಟು ಜೇಬಿನ ಹೊರೆ ಕಡಿಮೆಯಾಗುತ್ತದೆ.  ಕೆಲವೊಮ್ಮೆ ನಿಮ್ಮ ಬೈಕು ಸವಾರಿ ಶೈಲಿಯು ಕೂಡಾ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ.


COMMERCIAL BREAK
SCROLL TO CONTINUE READING

ಕೆಲವು ಸುಲಭವಾದ ಮಾರ್ಗಗಳನ್ನು ಅನುಸರಿಸುವ ಮೂಲಕ ನಿಮ್ಮ ಬೈಕಿನ ಮೈಲೇಜ್ ಅನ್ನು ಹೆಚ್ಚಿಸಬಹುದು.


ಬ್ರೇಕ್ ಮತ್ತು ಏಕ್ಸಲೇಟರ್ ಗಳನ್ನು ಸರಿಯಾಗಿ ಬಳಸಿ :
ಅತಿಯಾದ ವೇಗದಲ್ಲಿ ಬೈಕ್ ಓಡಿಸಿದರೆ, ಅದರ ಮೈಲೇಜ್ (Bike mileage) ಕಡಿಮೆಯಾಗುತ್ತದೆ. ವಿಶೇಷವಾಗಿ ನೀವು ಪದೇ ಪದೇ ಬ್ರೇಕ್ ಮತ್ತು  ಏಕ್ಸಲೇಟರ್ ಗಳನ್ನು ಬಳಸುತ್ತಿದ್ದರೆ ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕೆಟ್ಟ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವಾಗ, ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳುವುದು ಒಳ್ಳೆಯದು. 


ಇದನ್ನೂ ಓದಿ : Samsung: ಭಾರತದಲ್ಲಿ ಬಿಡುಗಡೆಯಾಗಿದೆ ಸ್ಯಾಮ್‌ಸಂಗ್‌ನ 'ನೆವರ್ ಬ್ಯಾಡ್' ಫೋನ್, ಇದರ ವೈಶಿಷ್ಟ್ಯಗಳಿವು


ಸಮಯಕ್ಕೆ ಸರಿಯಾಗಿ ಸರ್ವಿಸ್ ಮಾಡಿಸಿಕೊಳ್ಳಿ : 
ಬೈಕನ್ನು (Bike) ಕಾಲಕಾಲಕ್ಕೆ ಸರ್ವಿಸ್ ಮಾಡುತ್ತಿದ್ದರೆ, ಅದರ ಮೈಲೇಜ್ ಅನ್ನು ಹೆಚ್ಚಿನ ಪ್ರಮಾಣದಲ್ಲಿ ನಿರ್ವಹಿಸಬಹುದು. ಸರ್ವಿಸ್ ಸಮಯದಲ್ಲಿ ನಿಮ್ಮ ಬೈಕಿನ ಎಂಜಿನ್ ಆಯಿಲ್ ಬದಲಾಯಿಸಲಾಗುತ್ತದೆ. ಏನಾದರು ನ್ಯೂನತೆಗಳಿದ್ದರೆ ಸುಧಾರಿಸಲಾಗುತ್ತದೆ.  ನಿಯಮಿತ ಸರ್ವಿಸ್  ಬೈಕ್‌ನ (Bike service) ಇಂಜಿನ್‌ನ ಲೈಫ್ ಅನ್ನು ಹೆಚ್ಚಿಸುತ್ತದೆ.


ಉತ್ತಮ ಗುಣಮಟ್ಟದ ಇಂಧನವನ್ನು ಬಳಸಿ : 
ಉತ್ತಮ ಗುಣಮಟ್ಟದ ಇಂಧನವನ್ನು ಬಳಸದೆ ಇದ್ದರೂ, ಕೆಲವೊಮ್ಮೆ ಬೈಕಿನ ಮೈಲೇಜ್ ಹಾಳಾಗುತ್ತದೆ.  ಉತ್ತಮ ಗುಣಮಟ್ಟದ ಇಂಧನವು ಬೈಕಿನ ಮೈಲೇಜ್ ಸುಧಾರಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ : ಮೊಬೈಲ್ ಬಳಕೆದಾರರಿಗೆ ಈ ತಿಂಗಳಿನಿಂದ ಬದಲಾಗಲಿದೆ ನಿಯಮ , ನಿಮ್ಮ ಜೇಬಿನ ಮೇಲೆ ಯಾವ ಪರಿಣಾಮ ಬೀರಲಿದೆ ತಿಳಿಯಿರಿ


ಸಿಗ್ನಲ್ ನಲ್ಲಿ ಬೈಕ್ ಆಫ್ ಮಾಡಿ:
ಸಿಗ್ನಲ್ ನಲ್ಲಿ 1 ನಿಮಿಷಕ್ಕಿಂತ ಹೆಚ್ಚು ಸಮಯ ಕಾಯಬೇಕಾದರೆ, ಬೈಕ್ ಅನ್ನು ಆಫ್  ಮಾಡಬೇಕು. ಈ ನಿಯಮವನ್ನು ಪಾಲಿಸಿದರೂ, ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ಆದರೆ ಈ ಬಗ್ಗೆ ಜನರು ಗಮನ ಹರಿಸುವುದಿಲ್ಲ.


ಉತ್ತಮ ಗುಣಮಟ್ಟದ ಟೈರ್‌ಗಳನ್ನು ಬಳಸಿ :
ಯಾವಾಗಲೂ ಬೈಕ್‌ನಲ್ಲಿ ಉತ್ತಮ ಗುಣಮಟ್ಟದ ಟೈರ್‌ಗಳನ್ನು (tire)  ಬಳಸಿ. ಉತ್ತಮ ಗುಣಮಟ್ಟದ ಟೈರುಗಳೊಂದಿಗೆ ಮೈಲೇಜ್ ಕೂಡಾ ಉತ್ತಮವಾಗಿರುತ್ತದೆ. ಈ ಸಣ್ಣ ಸಣ್ಣ ವಿಷಯಗಳನ್ನು ನೋಡಿಕೊಳ್ಳುವ ಮೂಲಕ, ನೀವು ಮೈಲೇಜ್ ಅನ್ನು  ಸುಧಾರಿಸಬಹುದು. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ