ಬೆಂಗಳೂರು : ಫೋಟೋ ಮತ್ತು ವೀಡಿಯೊ ಶೇರಿಂಗ್ ಅಪ್ಲಿಕೇಶನ್‌ ವಿಚಾರ  ಬಂದಾಗ, Instagram ಹೆಸರು ಮೊದಲು ಬರುತ್ತದೆ. ಫೋಟೋ ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಇನ್ಸ್ಟಾಗ್ರಾಂ ಅನ್ನು ಹೆಚ್ಚಾಗಿ ಬಳಸಲಾಗುತ್ತದೆ. ಇಲ್ಲಿ ಫೋಟೋ ವಿಡಿಯೋ ಶೇರ್ ಮಾಡುವುದು ಮಾತ್ರವಲ್ಲ ಇನ್ಸ್ಟಾಗ್ರಾಂ ಬಳಕೆ ಮೂಲಕ  ಹಣ ಸಂಪಾದಿಸುವುದು ಕೂಡಾ ಸಾಧ್ಯವಾಗುತ್ತದೆ. ಇದರೊಂದಿಗೆ ಪ್ರತಿ ತಿಂಗಳು 30 ಸಾವಿರ ರೂಪಾಯಿ ಗಳಿಸಬಹುದು. 


COMMERCIAL BREAK
SCROLL TO CONTINUE READING

ಇನ್ಸ್ಟಾಗ್ರಾಂ ರೀಲ್ಸ್ ಪ್ಲೇ ಬೋನಸ್ : 
ಇನ್ಸ್ಟಾಗ್ರಾಂನಲ್ಲಿ ಹೊಸ ಪ್ರೋಗ್ರಾಂ ಬಂದಿದೆ. ಅದುವೇ ಪ್ಲೇ ಬೋನಸ್ ಪ್ರೋಗ್ರಾಂ. ಇದರ ಸಹಾಯದಿಂದ ಹಣವನ್ನು ಗಳಿಸುವುದು ಸಾಧ್ಯವಾಗುತ್ತದೆ. ರೀಲ್ ಕಂಟೆಂಟ್ ಮೇಲೆ ಇಲ್ಲಿ ಹಣ ಗಳಿಸುವುದು ಸಾಧ್ಯವಾಗುತ್ತದೆ. ಈ ಪ್ರೋಗ್ರಾಮ್ ಮೂಲಕ ಕಂಟೆಂಟ್ ಕ್ರಿಯೇಟರ್ ಗೆ  ಇನ್ಸೆಂಟಿವ್ ನೀಡಲಾಗುತ್ತದೆ.  ಇದಕ್ಕಾಗಿ ಮೊದಲು ಅರ್ಜಿ ಸಲ್ಲಿಸಬೇಕಾಗುತ್ತದೆ. 


ಇದನ್ನೂ ಓದಿ : ಹ್ಯುಂಡೈನ ಈ ಕಾರಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ! ಶೋರೂಮ್‌ನಲ್ಲಿ ಹೆಚ್ಚುತ್ತಿದೆ ಗ್ರಾಹಕರ ಸಂಖ್ಯೆ


ಅಪ್ಲಿಕೇಶನ್‌ನಲ್ಲಿಯೇ ರೀಲ್ಸ್ ಪ್ಲೇ ಬೋನಸ್ ಕುರಿತು ಮಾಹಿತಿ ಸಿಗುತ್ತದೆ.  ಆದರೆ, ಇಲ್ಲಿ ಸಿಗುವ ಬೋನಸ್ ಒಂದೇ ರೀತಿ ಇರುವುದಿಲ್ಲ. ಬೋನಸ್ ಸಮಯಕ್ಕೆ ಅನುಗುಣವಾಗಿ ಹೆಚ್ಚೂ ಆಗಬಹುದು, ಕಡಿಮೆಯೂ ಆಗಬಹುದು.  ಕಂಟೆಂಟ್ ಆಧಾರದ ಮೇಲೆ ಬೋನಸ್ ಹೆಚ್ಚು ಅಥವಾ ಕಡಿಮೆ ಇರಲಿದೆ. 


ರೀಲ್ ಅನ್ನು ಅಪ್‌ಲೋಡ್ ಮಾಡಿದ 24 ಗಂಟೆಗಳ ಒಳಗೆ ಪ್ಲೇ ಬೋನಸ್‌ಗಾಗಿ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಬೋನಸ್ ಪುಟಕ್ಕೆ ಹೋಗಬೇಕು. ಪೋಸ್ಟ್‌ನಲ್ಲಿ  ಪ್ರೊಗ್ರಾಮ್ ಗಾಗಿ ಟ್ಯಾಗ್ ಮಾಡಬೇಕು.  ಇದಲ್ಲದೆ, ಇಲ್ಲಿ ನೀವು ಪಾಲಿಸಿಯನ್ನು ಕೂಡಾ ಅನುಸರಿಸಬೇಕು. ಈ ಪಾಲಿಸಿಯನ್ನು ಉಲ್ಲಂಘಿಸಿದರೆ, ಬೋನಸ್ ಸಿಗುವುದಿಲ್ಲ. 


ಇದನ್ನೂ ಓದಿ : iPhone 15 ಬಿಡುಗಡೆಯಾಗುವ ಮೊದಲೇ ಬೆಲೆ ಲೀಕ್.! ಫೀಚರ್ಸ್‌ ತಿಳಿದ್ರೆ ಶಾಕ್​ ಆಗ್ತೀರಾ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ