Self Balancing Electric Scooter : ಮುಂಬೈ ಮೂಲದ ಲಿಗರ್ ಮೊಬಿಲಿಟಿ 2019 ರಲ್ಲಿ  ಸೆಲ್ಫ್ ಬ್ಯಾಲೆನ್ಸಿಂಗ್  ಮತ್ತು ಸೆಲ್ಫ್ -ಪಾರ್ಕಿಂಗ್ ತಂತ್ರಜ್ಞಾನದೊಂದಿಗೆ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರಿಚಯಿಸಿತ್ತು. ಸೆಲ್ಫ್ ಬ್ಯಾಲೆನ್ಸಿಂಗ್  ಮತ್ತು ಸೆಲ್ಫ್ -ಪಾರ್ಕಿಂಗ್  ತಂತ್ರಜ್ಞಾನದೊಂದಿಗೆ ಸಿದ್ಧವಾಗಿರುವ ಎಲೆಕ್ಟ್ರಿಕ್ ಸ್ಕೂಟರ್ 2023 ರ ಆಟೋ ಎಕ್ಸ್‌ಪೋದಲ್ಲಿ ಜಾಗತಿಕವಾಗಿ ಪಾದಾರ್ಪಣೆ ಮಾಡಲಿದೆ ಎನ್ನುವುದನ್ನು ಇದೀಗ  ಕಂಪನಿ ದೃಢಪಡಿಸಿದೆ. ಕಂಪನಿಯು ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಅನಾವರಣಗೊಳಿಸುವ ಮೊದಲು ಅದರ ಎರಡು ಫೋಟೋಗಳನ್ನು ಬಿಡುಗಡೆ ಮಾಡಿದೆ. 


COMMERCIAL BREAK
SCROLL TO CONTINUE READING

ಆಟೋ ಮ್ಯಾಟಿಕ್ ಆಗಿ ಬ್ಯಾಲೆನ್ಸ್ ಮಾಡುತ್ತದೆ  ಈ ಸ್ಕೂಟರ್ :  
ಸೆಲ್ಫ್ ಬ್ಯಾಲೆನ್ಸಿಂಗ್ ತಂತ್ರಜ್ಞಾನವನ್ನು ಲಿಗರ್ ಮೊಬಿಲಿಟಿ ಸಂಪೂರ್ಣವಾಗಿ ಆಂತರಿಕವಾಗಿ ಅಭಿವೃದ್ಧಿಪಡಿಸಿದೆ. ಈ ತಂತ್ರಜ್ಞಾನದ ಸಹಾಯದಿಂದ ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಲೆನ್ಸ್ ಮಾಡಲು ಸಾಧ್ಯವಾಗುತ್ತದೆ. ಇದು ಸವಾರರ ಸುರಕ್ಷತೆ, ಸೌಕರ್ಯ ಮತ್ತು ಅನುಕೂಲತೆಯನ್ನು ಹೆಚ್ಚಿಸುತ್ತದೆ. ಆಟೋ ಬ್ಯಾಲೆನ್ಸಿಂಗ್ ತಂತ್ರಜ್ಞಾನವು ಅಭೂತಪೂರ್ವ ರೈಡಿಂಗ್ ಅನುಭವವನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಬಿಡುಗಡೆಗೊಳಿಸಲಾದ ಟೀಸರ್‌ನಲ್ಲಿ ಸ್ಕೂಟರ್ ಮ್ಯಾಟ್ ಕೆಂಪು ಬಣ್ಣದಲ್ಲಿ ಕಂಡುಬರುತ್ತದೆ. 


ಇದನ್ನೂ ಓದಿ : Computer Mouse ಅನ್ನು ಮೌಸ್ ಅಂತ ಏಕೆ ಕರೆಯುತ್ತಾರೆ? ಅದರ ಈ ಮೊದಲ ಹೆಸರುಗಳೇನು ನಿಮಗೆ ಗೊತ್ತಾ?


ಕ್ಲಾಸಿಕ್ ವೆಸ್ಪಾ ಮತ್ತು ಯಮಹಾ ಫ್ಯಾಸಿನೊದಿಂದ ಸ್ಫೂರ್ತಿ ಪಡೆದ ವಿನ್ಯಾಸ! :
ಸೆಲ್ಫ್ ಬ್ಯಾಲೆನ್ಸಿಂಗ್ ಲಿಗರ್ ಎಲೆಕ್ಟ್ರಿಕ್ ಸ್ಕೂಟರ್ ಆಧುನಿಕ ವೈಶಿಷ್ಟ್ಯಗಳು ಮತ್ತು ತಂತ್ರಜ್ಞಾನವನ್ನು ಒಳಗೊಂಡಿದೆ. ಆದರೂ ಇದರಲ್ಲಿ ರೆಟ್ರೊ ಶೈಲಿ ಕಾಣಿಸಲಿದೆ.  ಈ ವಿನ್ಯಾಸ ಸ್ಟೈಲಿಂಗ್ ಕ್ಲಾಸಿಕ್ ವೆಸ್ಪಾ ಮತ್ತು ಯಮಹಾ ಫ್ಯಾಸಿನೊದಿಂದ ಹೆಚ್ಚು ಪ್ರೇರಿತವಾದಂತೆ ತೋರುತ್ತದೆ. ಸ್ಕೂಟರ್‌ನ ಮುಂಭಾಗದ ಏಪ್ರನ್‌ನಲ್ಲಿ ಡೆಲ್ಟಾ ಆಕಾರದ ಎಲ್‌ಇಡಿ ಹೆಡ್‌ಲ್ಯಾಂಪ್ ಅನ್ನು ಅಳವಡಿಸಲಾಗಿದೆ. ಇದರ ಮುಂಭಾಗದಲ್ಲಿ, ಟಾಪ್ ಫೇರಿಂಗ್‌ನಲ್ಲಿ LED ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ನೀಡಲಾಗಿದೆ. 


ಲಿಗರ್ ಸೆಲ್ಫ್ ಬ್ಯಾಲೆನ್ಸಿಂಗ್ ಎಲೆಕ್ಟ್ರಿಕ್ ಸ್ಕೂಟರ್‌ನ ವೈಶಿಷ್ಟ್ಯಗಳು : 
ಇದರ ಎಲ್ಇಡಿ  ಟರ್ನ್ ಇಂಡಿಕೇಟರ್ ಅನ್ನು ಫ್ರಂಟ್ ಕೌಲ್ ನಲ್ಲಿ  ಅಳವಡಿಸಲಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಆಲ್-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್, ಎಲ್ಇಡಿ ಟೈಲ್-ಲೈಟ್, ಟೆಲಿಸ್ಕೋಪಿಕ್ ಫ್ರಂಟ್ ಸಸ್ಪೆನ್ಷನ್, ಅಗಲವಾದ ಸೀಟ್ ಮತ್ತು ಅಲಾಯ್ ವ್ಹೀಲ್ಸ್ ನಂಥಹ ವೈಶಿಷ್ಟ್ಯಗಳೊಂದಿಗೆ  ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಸ್ಕೂಟರ್‌ನ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‌ಗಳನ್ನು ನೀಡಲಾಗಿದೆ.


ಇದನ್ನೂ ಓದಿ : Jio Cheapest Recharge: ಜಿಯೋ ಕಂಪನಿ ಈ ರಿಚಾರ್ಜ್ ಯೋಜನೆಯಲ್ಲಿ ಎಲ್ಲವೂ ಅನ್ಲಿಮಿಟೆಡ್


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.