Ola Electric: ಕೇಸರಿ ಬಣ್ಣದ Ola S1ಸ್ಕೂಟರ್ ಬಿಡುಗಡೆ, ಸಂಪೂರ್ಣ ಚಾರ್ಜ್ ಮಾಡಿದ್ರೆ 181KM ಮೈಲೇಜ್!

ಓಲಾ ಎಲೆಕ್ಟ್ರಿಕ್ ಸ್ಕೂಟರ್: ಓಲಾ ಎಲೆಕ್ಟ್ರಿಕ್ ದೇಶದ ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಗಿದೆ. 2022ರಲ್ಲಿ ಕಂಪನಿಯು 1ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಂಪನಿಯು ಪ್ರಸ್ತುತ ತನ್ನ ಪೋರ್ಟ್‌ಫೋಲಿಯೊದಲ್ಲಿ Ola S1, Ola S1 Pro ಮತ್ತು Ola S1 Airನಂತಹ ಸ್ಕೂಟರ್‌ಗಳನ್ನು ಹೊಂದಿದೆ.

Written by - Puttaraj K Alur | Last Updated : Jan 8, 2023, 04:33 PM IST
  • ಕೇವಲ ಒಂದೇ ವರ್ಷದಲ್ಲಿ ದೇಶದ ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾದ ಓಲಾ ಎಲೆಕ್ಟ್ರಿಕ್
  • ಓಲಾ ಎಲೆಕ್ಟ್ರಿಕ್‍ನ S1 & S1 ಪ್ರೊ ಸ್ಕೂಟರ್‌ಗಳ ಕೇಸರಿ ಬಣ್ಣದ ಆವೃತ್ತಿ ಬಿಡುಗಡೆ
  • Ola S1 ಮತ್ತು S1 Pro ಇದೀಗ ಒಟ್ಟು 12 ಬಣ್ಣಗಳ ರೂಪಾಂತರಗಳಲ್ಲಿ ಲಭ್ಯವಿದೆ
Ola Electric: ಕೇಸರಿ ಬಣ್ಣದ Ola S1ಸ್ಕೂಟರ್ ಬಿಡುಗಡೆ, ಸಂಪೂರ್ಣ ಚಾರ್ಜ್ ಮಾಡಿದ್ರೆ 181KM ಮೈಲೇಜ್! title=
ಕೇಸರಿ ಬಣ್ಣದ Ola S1ಸ್ಕೂಟರ್

ನವದೆಹಲಿ: ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಕೇವಲ ಒಂದೇ ವರ್ಷದಲ್ಲಿ ಓಲಾ ಎಲೆಕ್ಟ್ರಿಕ್ ದೇಶದ ನಂ.1 ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯಾಯಿತು. 2022ರಲ್ಲಿ ಕಂಪನಿಯು 1 ಲಕ್ಷಕ್ಕೂ ಹೆಚ್ಚು ಯುನಿಟ್‌ಗಳನ್ನು ಮಾರಾಟ ಮಾಡಿದೆ. ಕಂಪನಿಯು ಪ್ರಸ್ತುತ ತನ್ನ ಪೋರ್ಟ್‌ಫೋಲಿಯೊದಲ್ಲಿ Ola S1, Ola S1 Pro ಮತ್ತು Ola S1 Airನಂತಹ ಸ್ಕೂಟರ್‌ಗಳನ್ನು ಹೊಂದಿದೆ.

ಓಲಾ ಎಲೆಕ್ಟ್ರಿಕ್ ತನ್ನ S1 ಮತ್ತು S1 ಪ್ರೊ ಸ್ಕೂಟರ್‌ಗಳ ಕೇಸರಿ(Ochre) ಬಣ್ಣದ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದಲ್ಲದೆ ಕಂಪನಿಯು S1ಗಾಗಿ 6 ಹೊಸ ಬಣ್ಣಗಳನ್ನು ಪರಿಚಯಿಸಿದೆ. ಈ ಹೊಸ ನವೀಕರಣದೊಂದಿಗೆ Ola S1 ಮತ್ತು S1 Pro ಎಲೆಕ್ಟ್ರಿಕ್ ಸ್ಕೂಟರ್‌ಗಳು ಈಗ ಒಟ್ಟು 12 ಬಣ್ಣಗಳಲ್ಲಿ ಲಭ್ಯವಿವೆ.

ಇದನ್ನೂ ಓದಿ: RBI New Rules : ಬ್ಯಾಂಕ್ ಗ್ರಾಹಕರ ಗಮನಕ್ಕೆ : ಬ್ಯಾಂಕ್ ಖಾತೆಗೆ ಆರ್‌ಬಿಐನಿಂದ ಹೊಸ ನಿಯಮ!

Ola S1 & S1 Pro ಬಣ್ಣದ ರೂಪಾಂತರಗಳು

Ola S1 ಮತ್ತು S1 Pro ಈಗ 12 ಬಣ್ಣ ರೂಪಾಂತರಗಳಲ್ಲಿ ಲಭ್ಯವಿದೆ: ಮ್ಯಾಟ್ ಬ್ಲಾಕ್, ಕೋರಲ್ ಗ್ಲಾಮ್, ಮಿಲೇನಿಯಲ್ ಪಿಂಕ್, Porcelain ವೈಟ್, ಮಿಡ್ನೈಟ್ ಬ್ಲೂ, ನಿಯೋ ಮಿಂಟ್, ಲಿಕ್ವಿಡ್ ಸಿಲ್ವರ್, ಜೆಟ್ ಬ್ಲಾಕ್, ಮಾರ್ಷ್ಮ್ಯಾಲೋ, ಆಂಥ್ರಾಸೈಟ್ ಗ್ರೇ, ಲಿಕ್ವಿಡ್ ಸಿಲ್ವರ್ ಮತ್ತು ಗೆರುವಾ ಆವೃತ್ತಿಯಲ್ಲಿ ಖರೀದಿಸಬಹುದು.

Ola S1 & S1 Pro ವಿಶೇಷಣಗಳು ಮತ್ತು ಬೆಲೆ

Ola S1 3kWh ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಬರುತ್ತದೆ. ಆದರೆ S1 Pro ದೊಡ್ಡ 4 kWh ಯುನಿಟ್ ಅನ್ನು ಪ್ಯಾಕ್ ಮಾಡುತ್ತದೆ. Ola S1 ಪೂರ್ಣ ಚಾರ್ಜ್‌ನಲ್ಲಿ 141 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಅದೇ ರೀತಿ Ola S1 Pro 181 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಬೆಲೆಯ ಕುರಿತು ಮಾತನಾಡುವುದಾದರೆ Ola S1 ಬೆಲೆ 99,999 ರೂ. ಆಗಿದ್ದು, S1 Pro ಬೆಲೆ 1.40 ಲಕ್ಷ ರೂ. (ಎಕ್ಸ್ ಶೋ ರೂಂ ದರ) ಆಗಿದೆ.

ಇದನ್ನೂ ಓದಿ: Petrol Price: ಪೆಟ್ರೋಲ್ ಮಾರಾಟದಿಂದ ತೈಲ ಕಂಪನಿಗೆ ಲೀಟರ್‌ಗೆ 10 ರೂ. ಲಾಭ!

ಹೊಸ ಬಣ್ಣಗಳ ಘೋಷಣೆಯ ಕುರಿತು ಮಾತನಾಡಿರುವ ಓಲಾ ಎಲೆಕ್ಟ್ರಿಕ್‌ನ CMO ಅನ್ಶುಲ್ ಖಂಡೇಲ್ವಾಲ್, ‘ಓಲಾ ತನ್ನ ಗ್ರಾಹಕರಿಗೆ ಎಲೆಕ್ಟ್ರಿಕ್ ವಾಹನಗಳನ್ನು ಕೈಗೆಟುಕುವಂತೆ ಮಾಡುವ ಮೂಲಕ ನಂ.1 ಸ್ಥಾನ ಗಳಿಸಿದೆ. ಇದರಿಂದ ನಮಗೆ ತುಂಬಾ ಖುಷಿಯಾಗಿದೆ. ಹೊಸ ಬಣ್ಣಗಳ ಸ್ಕೂಟರ್‍ಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಉತ್ಸುಕತೆ ಹೊಂದಿದ್ದಾರೆ’ ಎಂದು ತಿಳಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News