How to save on Electricity Bill using Electricity Saver Device: ಬೇಸಿಗೆ ಕಾಲ ಇರಲಿ ಅಥವಾ ಚಳಿಗಾಲ ಇರಲಿ ಪ್ರತಿ ತಿಂಗಳ ಕರೆಂಟ್ ಬಿಲ್ ಬಹುತೇಕರ ಬಜೆಟ್ ಗೆ ದುಬಾರಿ ಪರಿಣಮಿಸುತ್ತದೆ. ಬೇಸಿಗೆಯಲ್ಲಿ ಎಸಿ ಮತ್ತು ಚಳಿಗಾಲದಲ್ಲಿ ಹೀಟರ್ ಗಳು ವಿದ್ಯುತ್ ಬಿಲ್‌ನ ವೆಚ್ಚವನ್ನು ಹೆಚ್ಚಿಸುತ್ತವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ವಿದ್ಯುತ್ ಬಿಲ್‌ನಿಂದ ನೀವು ಕೂಡ ತೊಂದರೆಗೊಳಗಾಗಿದ್ದರೆ, ನಿಮ್ಮ ಸಮಸ್ಯೆಗೆ ನಮ್ಮ ಬಳಿ ಒಂದು ಪರಿಹಾರವಿದೆ. ಈ ಲೇಖನದಲಿ ನಾವು ಹೇಳುತ್ತಿರುವ ಉಪಾಯವನ್ನು ಅನುಸರಿಸಿ ನೀವು ಸಾವಿರಾರು ರೂಪಾಯಿ ವಿದ್ಯುತ್ ಬಿಲ್ ಅನ್ನು ಉಳಿಸಬಹುದು ಮತ್ತು ಅದಕ್ಕಾಗಿ ನೀವು ಎಸಿ ಇತ್ಯಾದಿಗಳ ಬಳಕೆಯನ್ನು ಕೂಡ ಕಡಿಮೆ ಮಾಡಬೇಕಾಗಿಲ್ಲ. ಇಂದು ನಾವು ನಿಮಗೆ ಸಾಧನವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ, ಈ ಸಾಧನವನ್ನು ನೀವು  ನಿಮ್ಮ ಮನೆಯ ವಿದ್ಯುತ್ ಮೀಟರ್ ಪಕ್ಕದಲ್ಲಿ ಅಳವಡಿಸಿದರೆ, ನಿಮ್ಮ ವಿದ್ಯುತ್ ಬಿಲ್‌ನ ಹೆಚ್ಚಾಗುವುದಿಲ್ಲ. ಈ ಸಾಧನಕ್ಕಾಗಿ ನಾವು ನಿಮಗೆ ಐದು ಆಯ್ಕೆಗಳನ್ನು ನೀಡುತ್ತಿದ್ದೇವೆ, ಅದರಲ್ಲಿ ಒಂದನ್ನು ನೀವು ಆಯ್ಕೆ ಮಾಡಬಹುದು.


COMMERCIAL BREAK
SCROLL TO CONTINUE READING

Maxx ಪವರ್ ಸೇವರ್ ಟರ್ಬೊ ವಿದ್ಯುತ್ ಉಳಿತಾಯ ಸಾಧನ
ಈ ಟರ್ಬೊ ಪವರ್ ಸೇವರ್ ಒಂದು ಉತ್ತಮ ಗುಣಮಟ್ಟದ ಸಾಧನವಾಗಿದ್ದು. ಇದು ನಿಮ್ಮ ವಿದ್ಯುತ್ ಬಿಲ್‌ ಅನ್ನು ಶೇ.40ರಷ್ಟು ಕಡಿತಗೊಳಿಸುತ್ತದೆ. ಇದು ನೋಡಲು ತುಂಬಾ ದೊಡ್ದದಾಗಿಲ್ಲ. ಹೀಗಾಗಿ ಇದನ್ನು ನೀವು ನಿಮ್ಮ ಮನೆಯ ಮುಖ್ಯ MCB ಬಾಕ್ಸ್‌ನ ಬಳಿ ಸುಲಭವಾಗಿ ಅಳವಡಿಸಿ ಪ್ಲಗ್-ಇನ್ ಮಾಡಬಹುದು ಮತ್ತು ವಿದ್ಯುತ್ ಬಿಲ್‌ನಲ್ಲಿ ಅದರ ಪರಿಣಾಮವನ್ನು ಗಮನಿಸಬಹುದು. ಇ-ಕಾಮರ್ಸ್ ತಾಣವಾಗಿರುವ Amazon ನಲ್ಲಿ 1,999 ರೂ. ಬೆಲೆಗೆ ಈ ಸಾಧನವನ್ನು ಪಟ್ಟಿಮಾಡಲಾಗಿದೆ. ಆದರೆ ಶೇ.83% ರಷ್ಟು ರಿಯಾಯಿತಿಯ ನಂತರ, ನೀವು ಇದನ್ನು ಕೇವಲ 349 ರೂಗಳಲ್ಲಿ ಖರೀದಿಸಬಹುದು.


ವೆಲ್ಬರ್ಗ್ ಪವರ್ ಸೇವರ್ ಹೊಸ ನವೀಕರಿಸಿದ ವಿದ್ಯುತ್ ಉಳಿತಾಯ ಸಾಧನ
ವೆಲ್‌ಬರ್ಗ್ ಪವರ್ ಸೇವರ್ ಹೊಸ ನವೀಕರಿಸಿದ ವಿದ್ಯುತ್ ಉಳಿತಾಯ ಸಾಧನ ಕೂಡ ಒಂದು ವಿದ್ಯುತ್ ಉಳಿತಾಯ ಸಾಧನವಾಗಿದ್ದು, ನೀವು ರೂ.500 ಕ್ಕಿಂತ ಕಡಿಮೆ ಬೆಲೆಗೆ ಇದನ್ನು ಖರೀದಿಸಬಹುದು. ಈ ಸೊಗಸಾಗಿ ಕಾಣುವ ಸಾಧನವನ್ನು ನೀವು ಅತ್ಯಂತ ಸುಲಭವಾಗಿ ಬಳಸಬಹುದು; ಇದು ವಿದ್ಯುತ್ ವೆಚ್ಚವನ್ನು ಕಡಿಮೆ ಮಾಡುವುದಲ್ಲದೆ, ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಲ್ಲಿ ವೋಲ್ಟೇಜ್ ಏರಿಳಿತದಿಂದ ಉಂಟಾಗುವ ಹಾನಿಯನ್ನು ತಪ್ಪಿಸುತ್ತದೆ. ಈ ಉತ್ತಮ ಗುಣಮಟ್ಟದ ಸಾಧನವನ್ನು ನೀವು ಅಮೆಜಾನ್‌ನಲ್ಲಿ ರೂ 999 ಬದಲಿಗೆ ರೂ 499 ಕ್ಕೆ ಖರೀದಿಸಬಹುದು.


HATIMI ಯ ಒರಿಜಿನಲ್ ಇಂಟೆಲಿಜೆಂಟ್ ಎಲೆಕ್ಟ್ರಿಸಿಟಿ/ಪವರ್/ಎನರ್ಜಿ ಉಳಿತಾಯ ಸಾಧನ
ಈ ಮಿನಿ ವಿದ್ಯುತ್ ಉಳಿತಾಯ ಸಾಧನವನ್ನು ನೀವು ಅಮೆಜಾನ್‌ನಿಂದ 599 ರೂ.ಗಳಿಗೆ ಖರೀದಿಸಬಹುದು. ಆದರೆ ಇದರ ಮೂಲ ಬೆಲೆ 1,699 ರೂ. ಆಗಿದೆ. HATIMI ಯ ಒರಿಜಿನಲ್ ಇಂಟೆಲಿಜೆಂಟ್ ಇಲೆಕ್ಟ್ರಿಸಿಟಿ/ಪವರ್/ಎನರ್ಜಿ ಸೇವರ್ ಸಾಧನವು 90V-250V ಯುನಿಟ್‌ನೊಂದಿಗೆ ಬರುತ್ತದೆ ಮತ್ತು ಇದನ್ನು ಬಳಸುವುದು ಕೂಡ ತುಂಬಾ ಸುಲಭವಾಗಿದೆ.  ನಿಮ್ಮ ವಿದ್ಯುತ್ ಬಿಲ್‌ನ ವೆಚ್ಚವನ್ನು ಕಡಿಮೆ ಮಾಡಲು, ನಿಮ್ಮ ಮನೆಯ ಮುಖ್ಯ ವಿದ್ಯುತ್ ಮಂಡಳಿಯ ಬಾಕ್ಸ್ ಪಕ್ಕದಲ್ಲಿ ನೀವು ಈ ಸಾಧನವನ್ನು ಪ್ಲಗ್ ಮಾಡಬಹುದು ಮತ್ತು ಇದು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ-ನೀವು ಬಳಸುವ ವೆಬ್‌ಸೈಟ್‌ ಅಸಲಿಯೋ ನಕಲಿಯೋ ನಿಮಿಷಗಳಲ್ಲಿ ಪತ್ತೆ ಹಚ್ಚಿ ..!


MD Proelektra (MDP08) ವಿದ್ಯುತ್ ಉಳಿತಾಯ ಸಾಧನ
ವಿದ್ಯುತ್ ಬಿಲ್ ಉಳಿತಾಯಕ್ಕೆ ನಿಮ್ಮ ಬಳಿ ಇದೊಂದು ಆಯ್ಕೆ ಇದೆ, ಇದನ್ನೂ ಕೂಡ ನೀವು ನಿಮ್ಮ ಮನೆಯಲ್ಲಿ ಬಳಸಬಹುದು ಮತ್ತು ವಿದ್ಯುತ್ ಬಿಲ್ ಮೇಲೆ ಅದರ ನೇರ ಪರಿಣಾಮವನ್ನು ಗಮನಿಸಬಹುದು. ನಾವು ಇಲ್ಲಿ MD Proelektra (MDP08) ವಿದ್ಯುತ್ ಉಳಿತಾಯ ಸಾಧನದ ಬಗ್ಗೆ ಮಾತನಾಡುತ್ತಿದ್ದೇವೆ, ಇದು ವಿದ್ಯುತ್ ಬಳಕೆಯನ್ನು ನಿಯಂತ್ರಿಸುತ್ತದೆ ಮತ್ತು ವೋಲ್ಟೇಜ್‌ ಫ್ಲಕ್ಚ್ಯುವೆಶನ್ನಿಂದ ಉಂಟಾಗುವ ಹಾನಿಯಿಂದ ಮನೆಯಲ್ಲಿರುವ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ರಕ್ಷಿಸುತ್ತದೆ. ಇದನ್ನು ನೀವು ಕಮರ್ಷಿಯಲ್ ಮತ್ತು ಪರ್ಸನಲ್ ಎರಡೂ ರೂಪದಲ್ಲಿ ಬಳಸಬಹುದು. ಇದರ ಮೂಲ ಬೆಲೆ 2200 ರೂಪಾಯಿ ಆಗಿದೆ. ಆದರೆ Amazon ನಿಂದ ಇದನ್ನು ನೀವು 799 ರೂಪಾಯಿಗೆ ಖರೀದಿಸಬಹುದು.


ಇದನ್ನೂ ಓದಿ-ಕಡಿಮೆ ವಿದ್ಯುತ್ ಬಳಕೆಯೊಂದಿಗೆ ಎಸಿ ಅಂತಹ ಹವಾ ನೀಡುವ ಫ್ಯಾನ್


ಏರೋಲೈಟ್ ಎಲೆಕ್ಟ್ರಿಕಲ್ ಪರಿಹಾರ
ಆರಂಭದಲ್ಲಿಯೇ ಹೇಳಿದಂತೆ, ನಾವು ನಿಮಗೆ ಒಟ್ಟು ಐದು ಅತ್ಯುತ್ತಮ ವಿದ್ಯುತ್ ಉಳಿತಾಯ ಸಾಧನಗಳ ಆಯ್ಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಈ ಸರಣಿಯಲ್ಲಿ ಈಗ ನಾವು ಐದನೇಯ ಸಾಧನದ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದೇವೆ. ರೂ 1790 ಮೌಲ್ಯದ ಏರೋಲೈಟ್ ಎಲೆಕ್ಟ್ರಿಕಲ್ ಸೊಲ್ಯೂಷನ್ ಸಾಧನ, ಪ್ರಸ್ತುತ ನೀಡಲಾಗಿರುವ ರಿಯಾಯಿತಿಯ ನಂತರ ರೂ 989 ಕ್ಕೆ ಮಾರಾಟವಾಗುತ್ತಿದೆ. ಕರೆಂಟ್ ಮತ್ತು ವೋಲ್ಟೇಜ್ ಅನ್ನು ನಿಯಂತ್ರಿಸುವ ಮತ್ತು ಸಮತೋಲನಗೊಳಿಸುವ ಈ ವಿದ್ಯುತ್ ಉಳಿತಾಯ ಸಾಧನವನ್ನು ಯಾವುದೇ ಬೋರ್ಡ್‌ಗೆ ಪ್ಲಗ್ ಮಾಡಬಹುದು ಮತ್ತು ಇದು ಇತರ ಎಲೆಕ್ಟ್ರಾನಿಕ್ ಸಾಧನಗಳ ಬಾಳಿಕೆಯನ್ನು ಹೆಚ್ಚಿಸುತ್ತದೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.