ನವದೆಹಲಿ: Facebook Business Suite-ಇತ್ತೀಚಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ದತ್ತಾಂಶ ಕಳ್ಳತನದ ಅಪಾಯ ಹೆಚ್ಚಾಗಿದೆ. ಪ್ರಸ್ತುತ ಈ ದಾಳಿಗೆ ಸಾಮಾಜಿಕ ಮಾಧ್ಯಮದ ದೈತ್ಯ ಕಂಪನಿ Facebook ತುತ್ತಾಗಿದೆ. ಫೇಸ್ಬುಕ್ ನಲ್ಲಿ ಪತ್ತೆಯಾದ ಒಂದು ಬಗ್ ನಿಂದ ಇನ್ಸ್ಟಾಗ್ರಾಮ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎನ್ನಲಾಗಿದೆ. ಸೋರಿಕೆಯಾದ ದತಾಂಶಗಳಲ್ಲಿ ಬಳಕೆದಾರರ ಜನನ ದಿನಾಂಕ ಹಾಗೂ ಇ-ಮೇಲ್ ಐಡಿಗಳು ಶಾಮೀಲಾಗಿವೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- Instagram Reels New Feature: Reels ನಲ್ಲಿ ಬಹುನಿರೀಕ್ಷಿತ ವೈಶಿಷ್ಟ್ಯ ಪರಿಚಯಿಸಿದ Instagram


ತಂತ್ರಜ್ಞಾನ ಮಾಹಿತಿ ನೀಡುವ ಸೈಟ್ 'ದಿ ವರ್ಜ್'ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ, ಫೇಸ್ಬುಕ್ ನಲ್ಲಿ ಪತ್ತೆಯಾದ ಒಂದು ಬಗ್ ನಿಂದ ಇನ್ಸ್ಟಾಗ್ರಾಮ್ ಬಿಸಿನೆಸ್ ಬಳಕೆ ಮಾಡುವ ಬಳಕೆದಾರರ ದತ್ತಾಂಶಗಳು ಸೋರಿಕೆಯಾಗಿವೆ. ಸಿಕ್ಯೋರಿಟಿ ತಜ್ಞ ಸೌಗತ್ ಪೋಖರೆಲ್ ಅವರು ಮೊದಲು ಈ ಬಗ್ ಅನ್ನು ಪತ್ತೆಹಚ್ಚಿದ್ದಾರೆ. ಇತ್ತೀಚೆಗಷ್ಟೇ ಫೇಸ್ಬುಕ್ ಸರ್ವರ್ ನಲ್ಲಿ ಬಗ್ ವೊಂದು ಸಿಕ್ಕಿದ್ದು, ಈ ಬಗ್ ಕಾರಣ ಇನ್ಸ್ಟಾಗ್ರಾಮ್ ಬಿಸಿನೆಸ್ ಖಾತೆದಾರರ ಇ-ಮೇಲ್ ಐಡಿ ಹಾಗೂ ಜನನ ದಿನಾಂಕ ಮಾಹಿತಿ ಲೀಕ್ ಆಗಿರುವ ಅಪಾಯ ಎದುರಾಗಿದೆ ಎಂದು ಅವರು ಹೇಳಿದ್ದರು. ಇನ್ಸ್ಟಾಗ್ರಾಮ್ ನ ಈ ಸೋರಿಕೆಯ ಲಾಭ ಸೈಬರ್ ಕಳ್ಳರು ಪಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಪೋಖರೆಲ್ ಹೇಳಿದ್ದರು.


ಇದನ್ನು ಓದಿ- Cyber Attack Alert...! Google Chrome ಹಾಗೂ Microsoft Edge ಬಳಕೆದಾರರಿಗೆ ಎಚ್ಚರಿಕೆ


Facebook Business Suit ನಲ್ಲಿ ತಾಂತ್ರಿಕ ದೋಷ
Facebook Business Suit ಟೂಲ್ ಮೇಲೆ ದಾಳಿ ನಡೆಸಲಾಗಿದೆ. ಒಂದು ವೇಳೆ ನಿಮ್ಮ Instagram ಖಾತೆ Facebook Business ಖಾತೆಯೊಂದಿಗೆ ಲಿಂಕ್ ಆಗಿದ್ದರೆ ಅಪಾಯ ಇನ್ನಷ್ಟು ಹೆಚ್ಚು ಎಂದು ವರದಿಯಲ್ಲಿ ಹೇಳಲಾಗಿದೆ. ಹೀಗಾಗಿ Facebook Business Suit ಟೂಲ್ ಬಳಕೆ ಮಾಡುವ ಯಾವುದೇ ವ್ಯಕ್ತಿ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಅತ್ಯಂತ ಸುಲಭವಾಗಿ ಪಡೆದುಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ.


ಇದನ್ನು ಓದಿ- PUBG Mobile India Relaunch:ರೀಲಾಂಚ್ ಕುರಿತು RTI ಗೆ ಉತ್ತರಿಸಿದ ಸರ್ಕಾರ ಹೇಳಿದ್ದೇನು?


ಈ ತಾಂತ್ರಿಕ ದೋಷದ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಫೇಸ್ಬುಕ್ ನ ವಕ್ತಾರರು, ಇತ್ತೀಚಿಗೆ ನಡೆದ ಪರೀಕ್ಷೆಯೊಂದರಲ್ಲಿ ಈ ತಾಂತ್ರಿಕ ದೋಷವನ್ನು ಗಮನಿಸಲಾಗಿದ್ದು, ಪ್ರಸ್ತುತ ಅದನ್ನು ಸರಿಪಡಿಸಲಾಗಿದೆ ಎಂದಿದ್ದಾರೆ. ಈ ತಾಂತ್ರಿಕ ದೋಷ ಕಂಡು ಹಿಡಿದ ತಜ್ಞರಿಗೆ ಬಹುಮಾನ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.