ನವದೆಹಲಿ: New Facebook Update - ಶಾರ್ಟ್ ವಿಡಿಯೋ ಸೆಗ್ಮೆಂಟ್ ಅನ್ನು Facebook ಇದೀಗ ಗಂಭೀರವಾಗಿ ಪರಿಗಣಿಸುತ್ತಿದೆ. ಭಾರತೀಯ ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಫೇಸ್ಬುಕ್ ವಿಶೇಷ ವೈಶಿಷ್ಟ್ಯವನ್ನು ಪರಿಚಯಿಸಿದೆ. ಈ ವೈಸಿಷ್ಟ್ಯದ ಒಳ್ಳೆಯ ಸಂಗತಿ ಎಂದರೆ, ಈ ವೈಶಿಷ್ಟ್ಯದಿಂದ Instagram ಬಳಕೆದಾರರಿಗೆ ಲಾಭ  ಉಂಟಾಗಲಿದೆ.


COMMERCIAL BREAK
SCROLL TO CONTINUE READING

Instagram Reels ವೈಶಿಷ್ಟ್ಯ ಇದೀಗ Facebookನಲ್ಲಿ ಕಾಣಿಸಿಕೊಳ್ಳಲಿದೆ
ರಾಯಿಟರ್ಸ್ ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ Facebook ಭಾರತೀಯ ಬಳಕೆದಾರರಿಗೆ ನೂತನ ವೈಶಿಷ್ಟ್ಯ ಬಿಡುಗಡೆಗೊಳಿಸಿದೆ. ಹೌದು, ಇದೀಗ ಫೇಸ್ ಬುಕ್ ಬಳಕೆದಾರರು ನ್ಯೂಸ್ ಫೀಡ್ ನಲ್ಲಿ Instagram Reels ಶಾರ್ಟ್ ವಿಡಿಯೋ ಕೂಡ ವಿಕ್ಷೀಸಬಹುದು.


ಕ್ರಾಸ್ ಪ್ಲಾಟ್ಫಾರ್ಮ್ ಕಂಟೆಂಟ್ ಗೆ ಸಿಗಲಿದೆ ಉತ್ತೇಜನ
ವರದಿಗಳ ಪರಕಾರ ಭಾರತದಲ್ಲಿ ಕೆಲ ಇನ್ಸ್ಟಾಗ್ರಾಮ್ ಬಳಕೆದಾರರು ತಮ್ಮ 30 ಸೆಕೆಂಡ್ ಅವಧಿಯ Reels ವಿಡಿಯೋಗಳನ್ನು Facebook Feed ನಲ್ಲಿ ಹಂಚಿಕೊಳ್ಳಲು ಆಪ್ಶನ್ ಒದಗಿಸಲಾಗಿದೆ. ಆದರೆ ಪ್ರಸ್ತುತ ಈ ಹೊಸ ವೈಶಿಷ್ಟ್ಯ ಟೆಸ್ಟ್ ಮೋಡ್ ನಲ್ಲಿದೆ. ಶೀಘ್ರದಲ್ಲಿಯೇ ಅದನ್ನು ಎಲ್ಲಾ ಬಳಕೆದಾರರಿಗೆ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.


ಇದನ್ನೂ ಓದಿ-Facebookನಿಂದ TikTok ರೀತಿಯ ಆಪ್ ಬಿಡುಗಡೆ, ವೈಶಿಷ್ಟ್ಯ ಏನು ಗೊತ್ತಾ?


TikTok ಸ್ಥಾನ ಕಬಳಿಸಲು ಯತ್ನಿಸುತ್ತಿದೆ Instagram Reels
ಳೆದ ವರ್ಷ ಭಾರತ ಸರ್ಕಾರ TikTok ಅನ್ನು ನಿರ್ಬಂಧಿಸಿದ ಬಳಿಕ ಭಾರತದ Short Video ಸೆಗ್ಮೆಂಟ್ ಅನ್ನು ತೆಕ್ಕೆಗೆ ಸೆಳೆದುಕೊಳ್ಳಲು Facebook ಯತ್ನಿಸುತ್ತಿದೆ. ಇದೆ ಕಾರಣದಿಂದ ಕಳೆದ ವರ್ಷ ತರಾತುರಿಯಲ್ಲಿ ಫೇಸ್ ಬುಕ್ ಕಳೆದ ವರ್ಷವೇ Instagram Reels ಬಿಡುಗಡೆಗೊಳಿಸಿತ್ತು. ಆದರೆ, ಇದುವರೆಗೂ ಕೂಡ Reels ಹೆಚ್ಚಿನ ಬಳಕೆದಾರರಲ್ಲಿ ಪಾಪ್ಯುಲರ್ ಆಗಿಲ್ಲ.


ಇದನ್ನೂ ಓದಿ-Facebook New Feature - Facebook ನಲ್ಲೂ ಬರಲಿದೆ ಈ ಅದ್ಭುತ ವೈಶಿಷ್ಟ್ಯ


ಈ ಕುರಿತು ತಜ್ಞರು ಹೇಳುವ ಪ್ರಕಾರ TikTok ಅನ್ನು ಬ್ಯಾನ್ ಮಾಡಿದ ಬಳಿಕವೂ ಕೂಡ Instagram Reels ಅಷ್ಟೊಂದು ಖ್ಯಾತಿ ಪಡೆದಿಲ್ಲ. Facebook Feed ನಲ್ಲಿ Reels ವಿಡಿಯೋಗಳನ್ನು ಹಂಚಿಕೊಳ್ಳುವುದರ ಹಿಂದೆ ಈ ಸೆಗ್ಮೆಂಟ್ ನಲ್ಲಿ ಪ್ರಭುತ್ವ ಸಾಧಿಸುವ ಯತ್ನ Facebook ನಡೆಸುತ್ತಿದೆ ಎನ್ನುತ್ತಾರೆ.


ಇದನ್ನೂ ಓದಿ-ಫೇಸ್‌ಬುಕ್‌ಗೆ TikTok ಜೊತೆಗೆ ಸ್ಪರ್ಧಿಸಲೂ ಸಾಧ್ಯವಾಗುತ್ತಿಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.