Facebookನಿಂದ TikTok ರೀತಿಯ ಆಪ್ ಬಿಡುಗಡೆ, ವೈಶಿಷ್ಟ್ಯ ಏನು ಗೊತ್ತಾ?

Facebook Launches BARS - ಸಾಮಾಜಿಕ ವೇದಿಕೆಗಳ ದೈತ್ಯ Facebook ಇತ್ತೀಚೆಗಷ್ಟೇ ನೂತನ ಆಪ್ ಬಿಡುಗಡೆ ಮಾಡಿದ್ದು ಇದಕ್ಕೆ BARS ಎಂದು ಹೆಸರಿಡಲಾಗಿದೆ.

Written by - Nitin Tabib | Last Updated : Feb 28, 2021, 07:17 PM IST
  • ಟಿಕ್ ಟಾಕ್ ರೀತಿಯ ಆಪ್ ಬಿಡುಗಡೆ ಮಾಡಿದ ಫೇಸ್ ಬುಕ್
  • ಈ ಆಪ್ ಗೆ BARS ಎಂದು ಹೆಸರಿಡಲಾಗಿದೆ.
  • ಇದಕ್ಕೂ ಮೊದಲು ಫೇಸ್ ಬುಕ್ Collab ಹೆಸರಿನ ಆಪ್ ಬಿಡುಗಡೆ ಮಾಡಿತ್ತು.
Facebookನಿಂದ TikTok ರೀತಿಯ ಆಪ್ ಬಿಡುಗಡೆ, ವೈಶಿಷ್ಟ್ಯ ಏನು ಗೊತ್ತಾ? title=
Facebook Launches New App (File Photo)

ನವದೆಹಲಿ: Facebook Launches BARS - ಫೇಸ್‌ಬುಕ್ (Facebook) ಇತ್ತೀಚೆಗೆ ಬಾರ್ಸ್ (BARS) ಹೆಸರಿನ ಹೊಸ ಆ್ಯಪ್ (App) ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಟಿಕ್‌ಟಾಕ್‌ (TikTok)ನಂತಿದೆ, ಆದರೆ Raperಗಳಿಗೆ ಮಾತ್ರ ಇದು ಉಪಯೋಗಕ್ಕೆ ಬರಲಿದೆ. ಈ ಅಪ್ಲಿಕೇಶನ್ ಅನ್ನು ಟೆಕ್ ಕಂಪನಿಯ ಆಂತರಿಕ ಸಂಶೋಧನೆ ಮತ್ತು ಅಭಿವೃದ್ಧಿ ಗುಂಪು ಪ್ರಾರಂಭಿಸಿದೆ, ಇದನ್ನು NPE ತಂಡ ಎಂದು ಹೆಸರಿಸಲಾಗಿದೆ. ಸಂಗೀತ ವಿಭಾಗದಲ್ಲಿ ಇದು ಕಂಪನಿಯ ಎರಡನೇ ವೆಂಚರ್ ಆಗಿದೆ. ರಾಪರ್‌ಗಳಿಗೆ ಒಂದು ವೇದಿಕೆಯನ್ನು ಒದಗಿಸುವುದು ಇದರ ಪ್ರಮುಖ ಗುರಿಯಾಗಿದೆ, ಅಲ್ಲಿ ಅವರು ತಮ್ಮ ರಾಪ್‌ಗಳನ್ನು ರಚಿಸಬಹುದು ಮತ್ತು ಇತರರೊಂದಿಗೆ ಹಂಚಿಕೊಳ್ಳಬಹುದು. ಇದರೊಂದಿಗೆ, ರಾಪರ್ ಗಳು ಈ ಅಪ್ಲಿಕೇಶನ್‌ನಲ್ಲಿ ವೃತ್ತಿಪರವಾಗಿ ತಯಾರಿಸಿದ ಬೀಟ್‌ಗಳನ್ನು ಸಹ ಪಡೆಯಲಿದ್ದಾರೆ.

ಈ ಆಪ್ ನಲ್ಲಿ ಸಾವಿರಾರು ಪ್ರೊಮೋಷನಲ್ ಬೀಟ್ಸ್ ಗಳಿವೆ
ಫೇಸ್ ಬುಕ್ ಈ ಮೊದಲು ಬಿಡುಗಡೆ ಮಾಡಿದ್ದ Collab ಉತ್ಪನ್ನದ ಗುರಿ ಇತರರ ಜೊತೆಗೆ ಸೇರಿ ಮ್ಯೂಸಿಕ್ ರಚಿಸುವುದಾಗಿದ್ದರೆ, ಇನ್ನೊಂದೆಡೆ BARS ರಾಪರ್ ಗಳಿಗೆ ತಮ್ಮ ಕೆಲಸವನ್ನು ಹಂಚಿಕೊಳ್ಳುವುದಾಗಿದೆ. ಇದರಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರಮೋಷನಲ್ ಬೀಟ್ಸ್ ಗಳಿವೆ ಇವುಗಳನ್ನು ರಾಪರ್ ಗಳು ಬಳಕೆ ಮಾಡಿ ತಮ್ಮ ರಾಪ್ ಗಳನ್ನು ಬರೆಯಬಹುದು. ಇದಾದ ಬಳಿಕ ಅವರು ತಮ್ಮ ವಿಡಿಯೋ ಅನ್ನು ಚಿತ್ರಿಸಬಹುದು.

ಈ ಆಪ್ ನಲ್ಲಿ ರಾಪರ್ ಗಳಿಗೆ ರೈಮಿಂಗ್ ಶಬ್ದಗಳ ಸಹಾಯ ಕೂಡ ಸಿಗಲಿದೆ. ಇದು ಬಳಕೆದಾರರು ರಾಪ್ ರಚಿಸುವಾಗ ಸಿಗುವ ಡಿಫಾಲ್ಟ್ ವೈಶಿಷ್ಟ್ಯವಾಗಿದೆ. ಇದಲ್ಲದೆ ವಿಡಿಯೋಗಾಗಿ ಆಡಿಯೋ ವಿಶುಯಲ್ ಫಿಲ್ಟರ್ ಹಾಗೂ ಆಟೋ ಟ್ಯೂನ್ ವೈಶಿಷ್ಟ್ಯಗಳು ಕೂಡ ಸಿಗಲಿವೆ.

ಇದನ್ನೂ ಓದಿ-Facebook Launched New Collab App: ನಿಮ್ಮಲ್ಲಿರುವ Music Talent ತೋರಿಸಲು ಬಂತು Facebook ನ ಹೊಸ ಆಪ್

ಈ ಆಪ್ ನ 'ಚಾಲೆಂಜ್ ಮೋಡ್' ವೈಶಿಷ್ಟ್ಯ ಅತ್ಯದ್ಭುತವಾಗಿದೆ
ಇವೆಲ್ಲವುಗಳ ಹೊರತಾಗಿ ಆಪ್ ನಲ್ಲಿ 'ಚಾಲೆಂಜ್ ಮೋಡ್' ಕೂಡ ನೀಡಲಾಗಿದೆ. ಇದು ಗೇಂ ರೀತಿಯಲ್ಲಿದೆ. ಇದರಲ್ಲಿ ಬಳಕೆದಾರರು ಶಬ್ದಗಳನ್ನು ರಚಿಸಿ ಫ್ರೀ ಸ್ಟೈಲ್ ಮಾಡಬಹುದು. ತಮ್ಮ ರಾಪ್ ಜೊತೆ ಜನರು ಎಂಜಾಯ್ ಮಾಡಬೇಕು ಎನ್ನುವುದು ಇದರ ಪ್ರಮುಖ ಉದ್ದೇಶ.

ಇದನ್ನೂ ಓದಿ- Facebook New Feature - Facebook ನಲ್ಲೂ ಬರಲಿದೆ ಈ ಅದ್ಭುತ ವೈಶಿಷ್ಟ್ಯ

ಈ ಆಪ್ ನಲ್ಲಿ ಬಳಕೆದಾರರು 60 ಸೆಕೆಂಡ್ ಗಳ ವಿಡಿಯೋ ಕೂಡ ತಯಾರಿಸಬಹುದು ಹಾಗೂ ಅದನ್ನು ಅವರು  ತಮ್ಮ ಕ್ಯಾಮೆರಾ ರೋಲ್ ನಲ್ಲಿ ಉಳಿಸಬಹುದು. ಈ ಆಪ್ ಸಹಾಯದಿಂದ ಬಳಕೆದಾರರು ತಮ್ಮ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೂ ಕೂಡ ಹಂಚಿಕೊಳ್ಳಬಹುದು. ಯಾವುದೇ ಒಂದು ವೇದಿಕೆಯ ಮೇಲೆ ರಾಪರ್ ಗಳು ತಮ್ಮ ಪ್ರಯೋಗಗಳನ್ನು ನಡೆಸಲು ಅನುವು ಮಾಡಿಕೊಡುವುದು ಈ ಆಪ್ ನ ಪ್ರಮುಖ ಉದ್ದೇಶವಾಗಿದ್ದು, ಮಹಾಮಾರಿಯ ಕಾಲದಲ್ಲಿ ಇವು ನಿಂತು ಹೋಗಿವೆ.

ಇದನ್ನೂ ಓದಿ- ಫೇಸ್‌ಬುಕ್‌ಗೆ TikTok ಜೊತೆಗೆ ಸ್ಪರ್ಧಿಸಲೂ ಸಾಧ್ಯವಾಗುತ್ತಿಲ್ಲ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News