ನವದೆಹಲಿ: Facebook Launched New Collab App: ನಿಮ್ಮೊಳಗೆ ಅಡಗಿರುವ ಪ್ರತಿಭೆಯನ್ನು ಜನರೊಂದಿಗೆ ಹಂಚಿಕೊಳ್ಳುವ ಕಾಲ ಇದೀಗ ಕೂಡಿ ಬಂದಿದೆ. ಹೌದು, ಈಗ ನೀವು ನಿಮ್ಮ ಪ್ರತಿಭೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳಬಹುದು. ಹಾಡುಗಳು ಅಥವಾ ಸಂಗೀತವನ್ನು ಹಾಡಲು ಇಷ್ಟಪಡುವವರಿಗೆ, ಫೇಸ್‌ಬುಕ್ (Facebook) ಹೊಸ ಕೊಲಾಬ್ (Collab) ಆ್ಯಪ್ ಅನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಅಮೇರಿಕಾದಲ್ಲಿ Collab App ಬಿಡುಗಡೆ
ಟೆಕ್ ಸೈಟ್ 'ದಿ ವರ್ಜ್'ನಲ್ಲಿ ಪ್ರಕಟಗೊಂಡ  ವರದಿಯ ಪ್ರಕಾರ ಇತ್ತೀಚೆಗಷ್ಟೇ ಫೇಸ್ ಬುಕ್ ತನ್ನ ಹೊಸ Collab App ಅನ್ನು ಅಮೇರಿಕಾದಲ್ಲಿ ಬಿಡುಗಡೆ ಮಾಡಿದೆ ಎನ್ನಲಾಗಿದೆ. ಫೇಸ್ ಬುಕ್ ನ ಮೂಲ ಆಪ್ ನೊಂದಿಗೆ ಈ ಆಪ್ ಅನ್ನು ಸೇರಿಸಲಾಗಿಲ್ಲ. ಆದರೆ, ಈ ಆಪ್ ಮೂಲಕ ತಯಾರಿಸಲಾಗಿರುವ ವಿಡಿಯೋ ಅನ್ನು ನೀವು ಇನ್ಸ್ಟಾಗ್ರಾಮ್ ಮೇಲೆ ಹಂಚಿಕೊಳ್ಳಬಹುದಾಗಿದೆ.


ಈ ಆಪ್ ನ ವಿಶೇಷತೆಗಳೇನು?
ಮೂಲಗಳು ನೀಡಿರುವ ಮಾಹಿತಿ ಪ್ರಕಾರ Collab App ನಲ್ಲಿ ಯಾವುದೇ ಒಂದು ಹಾಡಿನ ಧಾಟಿ ರಚಿಸಿ ಹಂಚಿಕೊಳ್ಳಬಹುದು. ಈ ಆಪ್ ಸಹಾಯದಿಂದ ನೀವು  ಹಲವು ಸಂಗೀತದ ಉಪಕರಣಗಳನ್ನು ಒಂದೇ ಕಾಲಕ್ಕೆ ಸಿಂಕ್ ಮಾಡಬಹುದು ಮತ್ತು ಹಾಡನ್ನು ಹಾಡಬಹುದು. ಈ ಆಪ್ ಇನ್ನೊಂದು ವಿಶೇಷತೆ ಎಂದರೆ ಇದರಲ್ಲಿ ಯಾವುದೇ ಧಾಟಿಯ ಹಾಡನ್ನು ಇತರೆ ಮ್ಯೂಸಿಕ್ ಜೊತೆಗೆ ಸೇರಿಸಿ ವಿಡಿಯೋ ಕೂಡ ತಯಾರಿಸಬಹುದು.


ಇದನ್ನು ಓದಿ- Instagram Reels New Feature: Reels ನಲ್ಲಿ ಬಹುನಿರೀಕ್ಷಿತ ವೈಶಿಷ್ಟ್ಯ ಪರಿಚಯಿಸಿದ Instagram


ಕಳೆದ ಕೆಲ ವರ್ಷಗಳಲ್ಲಿ ವಿಡಿಯೋ ಹಂಚಿಕೆಯ ಟ್ರೆಂಡ್ ನಲ್ಲಿ ಭಾರಿ ಹೆಚ್ಚಳವಾಗಿರುವುದು ಇಲ್ಲಿ ಉಲ್ಲೇಖನೀಯ. ಇದೆ ಕಾರಣಕ್ಕೆ TikTok ಭಾರಿ ಜನಪ್ರೀಯತೆಯನ್ನು ಪಡೆದುಕೊಂಡಿತು. ಆದರೆ, ಟಿಕ್ ಟಾಕ್ ಡಾನ್ಸ್ ವಿಡಿಯೋಗಳಿಗಾಗಿ ಖ್ಯಾತಿ ಪಡೆದಿದೆ. ಹಾಡಿಗಾಗಿ ಇತ್ತೀಚೆಗಷ್ಟೇ ಹಲವು ಆಪ್ ಗಳು ಬಿಡುಗಡೆಯಾಗಿವೆ. ಇದೇ ಸರಣಿಯಲ್ಲಿ ಫೇಸ್ ಬುಕ್ ಕೂಡ ತನ್ನ ನೂತನ ಆಪ್ ಬಿಡುಗಡೆ ಮಾಡಿದೆ.


ಇದನ್ನು ಓದಿ- Google New Search Feature: Covid-19 Vaccine ಮಾಹಿತಿಗಾಗಿ Google ನಿಂದ ಹೊಸ ಸರ್ಚ್ ವೈಶಿಷ್ಟ್ಯ