Google New Search Feature: Covid-19 Vaccine ಮಾಹಿತಿಗಾಗಿ Google ನಿಂದ ಹೊಸ ಸರ್ಚ್ ವೈಶಿಷ್ಟ್ಯ

Google New Search Feature: ಗೂಗಲ್ ನ ಈ ನೂತನ ವೈಶಿಷ್ಯದ ಸಹಾಯದಿಂದ ಕೊವಿಡ್-19 ವ್ಯಾಕ್ಸಿನ್ ಮಾಹಿತಿ ತಿಳಿದುಕೊಳ್ಳುವುದು ಇದೀಗ ಇನ್ನಷ್ಟು ಸುಲಭವಾಗಲಿದೆ.

Last Updated : Dec 12, 2020, 09:18 PM IST
  • ಕೊವಿಡ್-19 ವ್ಯಾಕ್ಸಿನ್ ಸರಿಯಾದ ಮಾಹಿತಿಗಾಗಿ ಬರಲಿದೆ ಗೂಗಲ್ ನ ಹೊಸ ವೈಶಿಷ್ಟ್ಯ.
  • ಕೊವಿಡ್ 19 ಲಸಿಕೆಗೆ ಅನುಮತಿ ನೀಡಿದ ದೇಶಗಳಲ್ಲಿ ಮೊದಲು ಬಿಡುಗಡೆಯಾಗಲಿದೆ.
  • ಇತರ ದೇಶಗಳಲ್ಲಿನ ಆರೋಗ್ಯ ಇಲಾಖೆ ಲಸಿಕೆಗೆ ಅನುಮತಿ ನೀಡಿದ ಬಳಿಕ ಅಲ್ಲಿಯೂ ಕೂಡ ಈ ವೈಶಿಷ್ಟ್ಯ ಬಿಡುಗಡೆಯಾಗಲಿದೆ
Google New Search Feature: Covid-19 Vaccine ಮಾಹಿತಿಗಾಗಿ Google ನಿಂದ ಹೊಸ ಸರ್ಚ್ ವೈಶಿಷ್ಟ್ಯ title=
Google New Search Feature

Google New Search Feature: ಗೂಗಲ್‌ನ ಈ ನೂತನ  ಸರ್ಚ್ ವೈಶಿಷ್ಟ್ಯದ ಸಹಾಯದಿಂದ, ಕೋವಿಡ್ -19 ಲಸಿಕೆ ಬಗ್ಗೆ ತಿಳಿದುಕೊಳ್ಳುವುದು ಮತ್ತಷ್ಟು ಸುಲಭವಾಗಲಿದೆ. ಈ ಹೊಸ ವೈಶಿಷ್ಟ್ಯದ ಸಹಾಯದಿಂದ, ಬಳಕೆದಾರರು ಸ್ಥಳೀಯ ಮಟ್ಟದಲ್ಲಿ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆದ ಎಲ್ಲಾ ಲಸಿಕೆಗಳ ಪಟ್ಟಿಯನ್ನು ಹುಡುಕಲು ಸಾಧ್ಯವಾಗಲಿದೆ. ಇದರೊಂದಿಗೆ, ಪ್ರತಿ ಲಸಿಕೆಯ ಬಗ್ಗೆಯೂ ಮಾಹಿತಿ ಸಿಗಲಿದೆ. ಯುರೋಪಿಯನ್ ಯೂನಿಯನ್ ತುರ್ತು ಪರಿಸ್ಥಿತಿಯಲ್ಲಿ ಬಳಸಲು ಫೈಜರ್ ಹಾಗೂ  ಬಯೋಟೆಕ್ ಅನ್ನು ಅನುಮೋದಿಸಿರುವುದರಿಂದ, ಈ ವೈಶಿಷ್ಟ್ಯವನ್ನು ಮೊದಲು ಯುಕೆ ನಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಬಳಿಕ ಇತರೆ ದೇಶಗಳಲ್ಲಿಯೂ ಕೂಡ ಅಲ್ಲಿನ ಆರೋಗ್ಯ ವಿಭಾಗ ಕೊವಿಡ್ ಲಸಿಕೆಯ ಸಾರ್ವಜನಿಕ ಬಳಕೆಗೆ ಅನುಮತಿ ನೀಡಿದ ನಂತರ ಆ ದೇಶಗಳಲ್ಲಿಯೂ ಕೂಡ ಈ ವೈಶಿಷ್ಟ್ಯ ಬಿಡುಗಡೆ ಮಾಡಲಾಗುವುದು ಎಂದು ಗೂಗಲ್ ಹೇಳಿದೆ.

ಈ ವೈಶಿಷ್ಟ್ಯ ಹೇಗೆ ಕಾರ್ಯನಿರ್ವಹಿಸಲಿದೆ?
ಈ ಹೊಸ ವೈಶಿಷ್ಟ್ಯದಲ್ಲಿ  ಕೊವಿಡ್ 19 ವ್ಯಾಕ್ಸಿನ್ ನ ಹುಡುಕಾಟ ನಡೆಸುವ ಬಳಕೆದಾರರಿಗೆ, ಇಂಜನ್ ಸರ್ಚ್ ರಿಜಲ್ತ್ ಮೇಲ್ಭಾಗದ ಬಾಕ್ಸ್ ನಲ್ಲಿ ವ್ಯಾಕ್ಸಿನ್ ಕುರಿತಾದ ಅಧಿಕೃತ ಮಾಹಿತಿ ಬಿತ್ತರಗೊಳ್ಳಲಿದೆ. ಇದರ ಜೊತೆಗೆ source ರೂಪದಲ್ಲಿ ಆ ದೇಶದ ಹೆಲ್ತ್ ಅಥಾರಿಟಿ ಸಂದರ್ಭ ಕೂಡ ನೀಡಲಾಗುವುದು. ಈ ಪ್ಯಾನೆಲ್ ನಲ್ಲಿ ಒಟ್ಟು ಎರಡು ಟ್ಯಾಬ್ ಗಳಿರಲಿವೆ. ಟ್ಯಾಬ್ 1 ರಲ್ಲಿ ವ್ಯಾಕ್ಸಿನ್ಗೆ ಸಂಬಂಧಿಸಿದ ಸುದ್ದಿಗಳಿರಲಿವೆ ಹಾಗೂ ಎರಡನೇ ಟ್ಯಾಬ್ ನಲ್ಲಿ ವ್ಯಾಕ್ಸಿನ್ ಗೆ ಸಂಬಂಧಿಸಿದ ವಿವರಣೆ ಮತ್ತು source ರೂಪದಲ್ಲಿ ಸರ್ಕಾರಿ ವೆಬ್ ಸೈಟ್ ಮಾಹಿತಿ ಇರಲಿದೆ.

ಈ ಹೊಸ ಸರ್ಚ್ ವೈಶಿಷ್ಟ್ಯ ಗೂಗಲ್ ಡಾಟ್ ಕಾಂ ನ ಮೇಲ್ಭಾಗದಲ್ಲಿರಲಿದೆ. ದೊಡ್ಡ ಮಟ್ಟದಲ್ಲಿ ಹರಡುತ್ತಿರುವ ಕೊವಿಡ್-19 ಕುರಿತಾದ ತಪ್ಪು ಮಾಹಿತಿಯನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿದೆ.

ಇದನ್ನು ಓದಿ-ಟಿಕ್‌ಟಾಕ್‌ಗೆ ಟಕ್ಕರ್ ನೀಡಲು ಮುಂದಾದ Youtube

YouTube ಮೇಲೆ ತಪ್ಪು ಮಾಹಿತಿ ಹರಡುವ ಆರೋಪ
ಈ ಮೊದಲು ಕೊವಿಡ್ ರೋಗವನ್ನು 5ಜಿ ನೆಟ್ವರ್ಕ್ ಜೊತೆಗೆ ಹೋಲಿಕೆ ಮಾಡುವ ವಿಡಿಯೋ ಅನ್ನು ಬಿತ್ತರಿಸಲು ಅನುಮತಿ ನೀಡಿದ ಆರೋಪ ಗೂಗಲ್ ನ ವಿಡಿಯೋ ಹಂಚಿಕೆ ಪ್ಲಾಟ್ಫಾರ್ಮ್ ಯುಟ್ಯೂಬ್ ಮೇಲೆ ಮಾಡಲಾಗಿತ್ತು.  ವೈದ್ಯಕೀಯವಾಗಿ ಇದೊಂದು ನಿರಾಧಾರ ಎಂದು ಹೇಳಲಾಗಿತ್ತು. ಬಳಿಕ ಅಕ್ಟೋಬರ್ ನಲ್ಲಿ ಕೊವಿಡ್-19 ಗೆ ಸಂಬಂಧಿಸಿದ ವದಂತಿಗಳನ್ನು ಬ್ಯಾನ್ ಮಾಡಲಾಗಿತ್ತು. ಅಧ್ಯಯನದ ಪ್ರಕಾರ ಆ ಸಮಯದಲ್ಲಿ ನೂತನ ಪಾಲಸಿಯ ಕಾರಣ ಹಲವಾರು ಆಂಟಿ-ವ್ಯಾಕ್ಸಿನ್ ವಿಡಿಯೋಗಳಿಗೆ ಯಾವುದೇ ಧಕ್ಕೆ ಉಂಟಾಗಿರಲಿಲ್ಲ.

ಇದನ್ನು ಓದಿ-ತನ್ನ ಭಾರತೀಯ ಬಳಕೆದಾರರಿಗೆ UPI PAYMENT ವೈಶಿಷ್ಟ್ಯ ಒದಗಿಸಿದ YouTube

ಆದರೆ ತಪ್ಪು ಮಾಹಿತಿ ಹರಡಿದ ಆರೋಪವನ್ನು ಗೂಗಲ್ ಗಂಭೀರವಾಗಿ ಪರಿಗಣಿಸಿಲ್ಲ. ಅಷ್ಟೇ ಅಲ್ಲ ಕೊವಿಡ್ -19 ಇನ್ಫರ್ಮೇಷನ್ ಪ್ಯಾನಲ್ ನಲ್ಲಿ ಕೇವಲ ಅಧಿಕೃತ ಮಾಹಿತಿ ಸಿಗುತ್ತಿದ್ದು, 400 ಬಿಲಿಯನ್ ಗೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ ಎಂಬ ಭರವಸೆ ವ್ಯಕ್ತಪಡಿಸಿದೆ.

Trending News