Flipkart Big Saving Day Sale: ಆಪಲ್ ಐಫೋನ್ ಅಭಿಮಾನಿಗಳು ಐಫೋನ್ 15  ಬಿಡುಗಡೆಗಾಗಿ ಕಾತುರರಾಗಿ ಕಾಯುತ್ತಿದ್ದಾರೆ. ಐಫೋನ್ 15 ಬಿಡುಗಡೆಗೂ ಮುನ್ನ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇ ಸೇಲ್ ನಲ್ಲಿ ಐಫೋನ್ 13, ಐಫೋನ್ 14ನಲ್ಲಿ ಭಾರೀ ಬಂಪರ್ ರಿಯಾಯಿತಿಗಳನ್ನು ಘೋಷಿಸಿದೆ. ಜುಲೈ 15ರಿಂದ ಆರಂಭವಾಗಿರುವ ಈ ಸೇಲ್ ಇಂದು ಕೊನೆಗೊಳ್ಳಲಿದ್ದು ನೀವು ಅಗ್ಗದ ದರದಲ್ಲಿ ಐಫೋನ್ ಖರೀದಿಸಲು ಬಯಸಿದರೆ ಇಂದೇ ಕೊನೆ ದಿನವಾಗಿದೆ. 


COMMERCIAL BREAK
SCROLL TO CONTINUE READING

ಪ್ರಸಿದ್ಧ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ತನ್ನ ಬಿಗ್ ಸೇವಿಂಗ್ ಡೇಸ್ ಮಾರಾಟದ ಭಾಗವಾಗಿ ಕೆಲವು ಹಳೆಯ ಐಫೋನ್‌ಗಳಲ್ಲಿ ರೂ. 11,401 ವರೆಗೆ ಭರ್ಜರಿ ರಿಯಾಯಿತಿಯನ್ನು ನೀಡುತ್ತಿದೆ. ಇವುಗಳಲ್ಲಿ Apple iPhone 13 128GB ಸ್ಟೋರೇಜ್ ಮಾದರಿ, Apple iPhone 14 ಮತ್ತು Apple iPhone 14 Plus ಕೂಡ ಸೇರಿವೆ. ಯಾವ ಮಾದರಿಯ ಐಫೋನ್‌ನಲ್ಲಿ ಎಷ್ಟು ರಿಯಾಯಿತಿ ಲಭ್ಯವಾಗಲಿದೆ ಎಂದು ನೋಡುವುದಾದರೆ... 


ಇದನ್ನೂ ಓದಿ- ಈ ಅಗ್ಗದ ಫ್ಯಾನ್ ಅನ್ನು ನಿಮ್ಮ ಸ್ಮಾರ್ಟ್‌ಫೋನ್ಗೆ ಅಳವಡಿಸಿ ತಂಪಾದ ಗಾಳಿ ಪಡೆಯಿರಿ


58,499 ರೂಗಳ ಆರಂಭಿಕ ಬೆಲೆಯಲ್ಲಿ ಲಭ್ಯವಾಗಲಿದೆ ಐಫೋನ್ 13: 
ಯಾವುದೇ ನಿಯಮಗಳು ಮತ್ತು ಷರತ್ತುಗಳಿಲ್ಲದೆ iPhone 13 ಆರಂಭಿಕ ಬೆಲೆ 58,499 ರೂ.ಗಳಿಗೆ ಪಟ್ಟಿಮಾಡಲಾಗಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಲ್ಲಿ ಹೆಚ್ಚುವರಿ 10 ಪ್ರತಿಶತ ರಿಯಾಯಿತಿಯೂ ಇದೆ, ಪರಿಣಾಮಕಾರಿಯಾಗಿ ಬೆಲೆಯನ್ನು ರ.ೂ 57,499 ಕ್ಕೆ ಇಳಿಕೆಯಾಗಲಿದೆ.   


ಇದನ್ನೂ ಓದಿ- ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿರುವ ದೇಶಗಳಿವು


Apple iPhone 14 ಡಿಸ್ಕೌಂಟ್ ಆಫರ್: 
79,900 ರೂ. ಮೌಲ್ಯದ ಐಫೋನ್ 14 ಅನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದಲ್ಲಿ 68,999ರೂ.ಗಳಿಗೆ ಪಟ್ಟಿ ಮಾಡಲಾಗಿದೆ.    ಇದಲ್ಲದೆ, ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಮಾರಾಟದ ಸಮಯದಲ್ಲಿ,128 GB ಸ್ಟೋರೇಜ್ ರೂಪಾಂತರದ  ಐಫೋನ್ 14 ಪ್ಲಸ್   ಅನ್ನು ರೂ. 73,999 ಗೆ ಮಾರಾಟ ಮಾಡಲಾಗುತ್ತಿದೆ.  iPhone 14 Pro Max ಬೆಲೆ  1,27,999  ರೂ. ಆಗಿದ್ದರೆ, ಪ್ರೊ ಮಾದರಿಯ ಬೆಲೆ 1,16,999  ರೂ. ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.