Cool Air: ಯಾವುದೇ ಋತುಮಾನವಿರಲಿ ಬಿಸಿಲಿನಲ್ಲಿ ಹೊರಗೆ ಹೋಗುವುದೆಂದರೆ ಬಿಸಿಲಿನ ಬೇಗೆಯನ್ನು ನೆನೆದರೆ ಅಬ್ಬಬ್ಬಾ ಸಾಕಪ್ಪಾ ಸಾಕು ಎನ್ನುವಂತೆ ಇರುತ್ತದೆ. ಮನೆಯಲ್ಲಿದ್ದರೆ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯಲು ಫ್ಯಾನ್, ಕೂಲರ್, ಎಸಿಯನ್ನು ಬಳಸಬಹುದು. ಆದರೆ, ಹೊರಗಿರುವಾಗ ಈ ಬಿಸಿಲಿನ ಬೇಗೆಯಿಂದ ಪರಿಹಾರ ಪಡೆಯುವುದು ಹೇಗೆ ಎಂದು ನೀವು ಯೋಚಿಸುತ್ತಿದ್ದರೆ ಇದಕ್ಕಾಗಿ ಮರುಕಟ್ಟೆಗೆ ಲಗ್ಗೆ ಇಟ್ಟಿದೆ ಸ್ಮಾರ್ಟ್ಫೋನ್ ಚಾಲಿತ ಫ್ಯಾನ್.
ಈ ಬಿರು ಬಿಸಿಲಿನಲ್ಲಿ ನೀವು ತಂಪಾದ ಗಾಳಿಯನ್ನು ಪಡೆಯಲು ಬಯಸಿದರೆ ಒಂದು ಪುಟ್ಟ ಫ್ಯಾನ್ ನಿಮಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತು ಪಡಿಸಲಿದೆ. ಅಯ್ಯೋ, ಫ್ಯಾನ್ ಅನ್ನು ಎಲ್ಲೆಲ್ಲೆ ಕೊಂಡೊಯ್ಯಲು ಸಾಧ್ಯ ಎಂದು ಹೆದರಬೇಡಿ. ಇದನ್ನು ನಿಮ್ಮ ಸ್ಮಾರ್ಟ್ಫೋನ್ನಲ್ಲಿ ಅಳವಡಿಸಿದರೆ ಅಷ್ಟೇ ಸಾಕು. ಇದರ ಬೆಲೆ ಕೂಡ ಕೇವಲ 140 ರೂ.ಗಳು ಮಾತ್ರ. ಇದರ ಬಹಳ ಪ್ರಮುಖ ವೈಶಿಷ್ಟ್ಯವೆಂದರೆ ಈ ಮಿನಿ ಫ್ಯಾನ್ ಅನ್ನು ನಿಮ್ಮ ಸ್ಮಾರ್ಟ್ಫೋನ್ನಿಂದಲೂ ಸುಲಭವಾಗಿ ಚಲಾಯಿಸಬಹುದು.
ಇದನ್ನೂ ಓದಿ- ನೀವೂ ಮ್ಯಾನುಯಲ್ ಕಾರ್ ಮಾಲೀಕರೇ? ಸದಾ ನೆನಪಿರಲಿ ಈ ನಾಲ್ಕು ವಿಷಯಗಳು
ಸ್ಮಾರ್ಟ್ಫೋನ್ ಚಾಲಿತ ಫ್ಯಾನ್:
ಈ ಫ್ಯಾನ್ ಹೆಸರು- ಬೈ ಶ್ಯೂರಿಟಿಯ ಮೈಕ್ರೋ ಯುಎಸ್ಬಿ ಮಿನಿ ಸ್ಮಾರ್ಟ್ಫೋನ್ ಫ್ಯಾನ್. ಕೈ ಮುಷ್ಟಿಯಷ್ಟಿರುವ ಈ ಫ್ಯಾನ್ ಯಾವುದೇ ಪ್ರದೇಶದಲ್ಲಿ ನಿಮಗೆ ತಂಪಾದ ಗಾಳಿಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಹೆಸರೇ ಸೂಚಿಸುವಂತೆ ಇದು ಸ್ಮಾರ್ಟ್ಫೋನ್ನಿಂದಲೇ ಚಲಾಯಿಸಬಲ್ಲ ಫ್ಯಾನ್ ಆಗಿದೆ. ನಿಮ್ಮ ಸ್ಮಾರ್ಟ್ಫೋನ್ನ ಚಾರ್ಜಿಂಗ್ ಪೋರ್ಟ್ಗೆ ಈ ಮಿನಿ ಫ್ಯಾನ್ ನ ಯುಎಸ್ಬಿ ಅನ್ನು ಪ್ಲಗ್ ಮಾಡಿದರೆ ಫ್ಯಾನ್ ಚಾಲಿತವಾಗುತ್ತದೆ.
ನಿಮ್ಮ ಯುಎಸ್ಬಿ ಚಾರ್ಜಿಂಗ್ ಪೋರ್ಟ್ಗೆ ಪ್ಲಗ್ ಮಾಡುವ ಮೂಲಕ ಇದನ್ನು ಸುಲಭವಾಗಿ ಬಳಸಬಹುದು. ಈ ಮಿನಿ ಸ್ಮಾರ್ಟ್ಫೋನ್ ಫ್ಯಾನ್ ಪ್ಲಾಸ್ಟಿಕ್ ಫ್ಯಾನ್ ಆಗಿದ್ದು ಅದು ತುಂಬಾ ಕಡಿಮೆ ತೂಕದ ಫ್ಯಾನ್ ಆಗಿದೆ. ಇದನ್ನು ಯಾವುದೇ ಸ್ಮಾರ್ಟ್ಫೋನ್, ಪವರ್ ಬ್ಯಾಂಕ್ ಮತ್ತು ಇತರ ಯುಎಸ್ಬಿ ಸಾಧನಗಳಿಗೆ ಸುಲಭವಾಗಿ ಸಂಪರ್ಕಿಸಬಹುದಾಗಿದೆ. ಇದರ ಕೂಲಿಂಗ್ ಯೂನಿಟ್ ಎರಡು ಪ್ಲಾಸ್ಟಿಕ್ ಬ್ಲೇಡ್ಗಳನ್ನು ಒಳಗೊಂಡಿದೆ ಮತ್ತು ಮೃದುವಾದ ಫೋಮ್ ಅನ್ನು ಅಳವಡಿಸಲಾಗಿದೆ.
ಇದನ್ನೂ ಓದಿ- WhatsApp New Scam: ವಾಟ್ಸಾಪ್ ನಲ್ಲಿ ಈ ಮೊಬೈಲ್ ನಂಬರ್ಗಳಿಂದ ಕರೆ ಬಂದರೆ ಹುಷಾರ್!
ಈ ಸ್ಮಾರ್ಟ್ಫೋನ್ ಚಾಲಿತ ಫ್ಯಾನ್ ಅನ್ನು ನೀವು ಆನ್ಲೈನ್ ಶಾಪಿಂಗ್ ಪ್ಲಾಟ್ಫಾರ್ಮ್ ಫ್ಲಿಪ್ಕಾರ್ಟ್ನಲ್ಲಿ ಖರೀದಿಸಬಹುದಾಗಿದೆ. ಪ್ಕಾರ್ಟ್ನಲ್ಲಿ ಈ ಮಿನಿ ಸ್ಮಾರ್ಟ್ಫೋನ್ ಫ್ಯಾನ್ ಅನ್ನು 70% ರಿಯಾಯಿತಿಯೊಂದಿಗೆ ಖರೀದಿಸಲು ಅವಕಾಶವಿದೆ. ಈ ಫ್ಯಾನ್ ಮೂಲ ಬೆಲೆ 500 ರೂ. ಆಗಿದ್ದು, ಶೇ. 70ರಷ್ಟು ದಿಸ್ಕೌಂಟ್ ಬಳಿಕ ಕೇವಲ 149 ರೂ.ಗಳಿಗೆ ನೀವು ಈ ಮಿನಿ ಫ್ಯಾನ್ ಅನ್ನು ಖರೀದಿಸಬಹುದಾಗಿದೆ. ಇದಲ್ಲದೆ,ನೀವು ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ಶಾಪಿಂಗ್ ಮಾಡಿದರೆ ಇದಕ್ಕೆ ಹೆಚ್ಚುವರಿಯಾಗಿ 5% ದಿಸ್ಕೌಂಟ್ ಕೂಡ ಲಭ್ಯವಾಗಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.