iPhone 12 ಮೇಲೆ 27 ಸಾವಿರ ರೂಪಾಯಿ ರಿಯಾಯಿತಿ..!
Flipkart Electronics Sale: ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಜುಲೈ 14 ರಿಂದ ಪ್ರಾರಂಭವಾಗಿದ್ದು, ಜುಲೈ 17 ರವರೆಗೆ ನಡೆಯಲಿದೆ.
Flipkart Electronics Sale : ಫ್ಲಿಪ್‌ಕಾರ್ಟ್‌ನಲ್ಲಿ ಎಲೆಕ್ಟ್ರಾನಿಕ್ಸ್ ಸೇಲ್ ನಡೆಯುತ್ತಿದೆ. ಈ ಸೇಲ್ ಇಂದಿನಿಂದ ಅಂದರೆ ಜುಲೈ 14 ರಿಂದ ಪ್ರಾರಂಭವಾಗಿದ್ದು, ಜುಲೈ 17 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು ಮತ್ತು ಅನೇಕ ಎಲೆಕ್ಟ್ರಾನಿಕ್ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಈ ಸೇಲ್ ನಲ್ಲಿ ಅತ್ಯಂತ ದುಬಾರಿ ಸ್ಮಾರ್ಟ್‌ಫೋನ್‌ಗಳು ಕೂಡಾ ಅಗ್ಗದ ಬೆಲೆಗೆ ಸಿಗುತ್ತಿವೆ. ಹೌದು iPhone 12ರ ಮೇಲೆ ಇಲ್ಲಿವರೆಗಿನ ಅತಿದೊಡ್ಡ ರಿಯಾಯಿತಿ ನೀಡಲಾಗುತ್ತಿದೆ. ಈ ಫೋನ್ ಅನ್ನು 27 ಸಾವಿರ ರೂಪಾಯಿ ರಿಯಾಯಿತಿ ದರಕ್ಕೆ ಮಾರಾಟ ಮಾಡಲಾಗುತ್ತಿದೆ.
ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಮಾರಾಟ: iPhone 12 ಕೊಡುಗೆಗಳು ಮತ್ತು ರಿಯಾಯಿತಿಗಳು :
iPhone 12 (64GB)ಯ ಲಾಂಚಿಗ್ ಪ್ರೈಸ್ 65,900 ರೂ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು 51,999 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಈ ಫೋನ್ ಮೇಲೆ 13,901 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ. ಫೋನ್‌ನಲ್ಲಿ ಅನೇಕ ಬ್ಯಾಂಕ್ ಮತ್ತು ವಿನಿಮಯ ಕೊಡುಗೆಗಳನ್ನು ಕೂಡಾ ನೀಡಲಾಗುತ್ತಿದೆ.
ಇದನ್ನೂ ಓದಿ : ಸ್ಟೇಟಸ್ ಅಪ್ಡೇಟ್ ಕುರಿತಾದ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿರುವ WhatsApp
ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್: iPhone 12 ಬ್ಯಾಂಕ್ ಆಫರ್ :
iPhone 12 ಅನ್ನು ಖರೀದಿಸಲು SBI ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 750 ರೂಪಾಯಿಗಳ ರಿಯಾಯಿತಿ ಸಿಗಲಿದೆ. ಇದರ ನಂತರ ಫೋನ್ ಬೆಲೆ 51,249 ರೂ. ಆಗಿರಲಿದೆ.
ಫ್ಲಿಪ್‌ಕಾರ್ಟ್ ಎಲೆಕ್ಟ್ರಾನಿಕ್ಸ್ ಸೇಲ್: iPhone 12 ಎಕ್ಸ್‌ಚೇಂಜ್ ಆಫರ್ :
iPhone 12 ನಲ್ಲಿ 12,500 ರೂಪಾಯಿಗಳ ಎಕ್ಸ್‌ಚೇಂಜ್ ಆಫರ್ ಕೂಡಾ ನೀಡಲಾಗುತ್ತಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಂಡರೆ ತುಂಬಾ ರಿಯಾಯಿತಿ ಪಡೆಯಬಹುದು. ಆದರೆ ಎಕ್ಸ್ಚೇಂಜ್ ಮಾಡುವ ಫೋನ್‌ನ ಸ್ಥಿತಿ ಉತ್ತಮವಾಗಿದ್ದರೆ ಮತ್ತು ಮಾಡೆಲ್ ಇತ್ತೀಚಿನದಾಗಿದ್ದರೆ ಮಾತ್ರ 12,500 ರೂ. ರಿಯಾಯಿತಿ ಪಡೆಯಬಹುದು. ಈ ರೀತಿ ಪೂರ್ಣ ಆಫ್ ಪಡೆಯುವುದು ಸಾಧ್ಯವಾದಾಗ ಮಾತ್ರ ಫೋನ್‌ನ ಬೆಲೆ 38,749 ರೂ. ಆಗಿರಲಿದೆ. ಅಂದರೆ ಈ ಫೋನ್ ಅನ್ನು ಬರೋಬ್ಬರಿ 27 ಸಾವಿರ ರೂಪಾಯಿ ರಿಯಾಯಿತಿ ದರದೊಂದಿಗೆ ಖರೀದಿಸಬಹುದು.
ಇದನ್ನೂ ಓದಿ : ಮಳೆಗಾಲದಲ್ಲಿ ಸೊಳ್ಳೆ ಮತ್ತು ಕೀಟಗಳ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ.!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ