ಸ್ಟೇಟಸ್ ಅಪ್ಡೇಟ್ ಕುರಿತಾದ ಹೊಸ ವೈಶಿಷ್ಟ್ಯ ಪರಿಚಯಿಸುತ್ತಿರುವ WhatsApp

WhatsApp Update Voice Notes on Status : ಇತ್ತೀಚಿನ ವರದಿಯ  ಅನುಸಾರ, WhatsApp ಹೊಸ ವೈಶಿಷ್ಟ್ಯವನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ವೈಶಿಷ್ಟ್ಯವು WhatsApp ಸ್ಟೇಟಸ್ ಅಪ್ಡೇಟ್ ಗೆ ಸಂಬಂಧಿಸಿದ್ದಾಗಿದೆ.   

Written by - Ranjitha R K | Last Updated : Jul 14, 2022, 09:12 AM IST
  • ಜನಪ್ರಿಯ ಚಾಟಿಂಗ್ ಅಪ್ಲಿಕೇಶನ್ WhatsApp
  • ಬರುತ್ತಿದೆ ಹೊಸ ವೈಶಿಷ್ಟ್ಯ
  • ಬಳಕೆದಾರರ ನಿರೀಕ್ಷೆಗೆ ಸದ್ಯದಲ್ಲೇ ಬೀಳಲಿದೆ ತೆರೆ
ಸ್ಟೇಟಸ್ ಅಪ್ಡೇಟ್ ಕುರಿತಾದ  ಹೊಸ ವೈಶಿಷ್ಟ್ಯ ಪರಿಚಯಿಸುತ್ತಿರುವ  WhatsApp title=
WhatsApp Update Voice Notes on Status (file photo)

WhatsApp Update Voice Notes on Status : ಅನೇಕ ಚಾಟಿಂಗ್ ಅಪ್ಲಿಕೇಶನ್‌ಗಳು ಮತ್ತು ಪ್ಲಾಟ್‌ಫಾರ್ಮ್‌ಗಳನ್ನು ಬಳಸಲಾಗುತ್ತಿದೆ. ಆದರೂ ಬಹುತೇಕ ಎಲ್ಲರೂ ಬಳಸುವ ಒಂದು ಜನಪ್ರಿಯ ಅಪ್ಲಿಕೇಶನ್ ಎಂದರೆ ಅದು ವಾಟ್ಸ್ ಆಪ್.  WhatsApp ತನ್ನ ಬಳಕೆದಾರರಿಗೆ ಅನೇಕ ಆಕರ್ಷಕ ವೈಶಿಷ್ಟ್ಯಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಅದೇ ರೀತಿ, ಈಗ ಬಂದಿರುವ ಮಾಹಿತಿ ಪ್ರಕಾರ,  ವಾಟ್ಸಾಪ್‌ನಲ್ಲಿ ಮತ್ತೊಂದು ಹೊಸ ವೈಶಿಷ್ಟ್ಯವನ್ನು ಬಿಡುಗಡೆ ಮಾಡಲಾಗುತ್ತಿದೆ. 

WhatsApp ಜೊತೆಗೆ ಬರುತ್ತಿದೆ  ಹೊಸ ಫೀಚರ್  :
ಇತ್ತೀಚಿನ ವರದಿಯ  ಅನುಸಾರ, WhatsApp ಹೊಸ ವೈಶಿಷ್ಟ್ಯವನ್ನು ಹೊರತರುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ವೈಶಿಷ್ಟ್ಯವು WhatsApp ಸ್ಟೇಟಸ್ ಅಪ್ಡೇಟ್ ಗೆ ಸಂಬಂಧಿಸಿದ್ದಾಗಿದೆ. ಅದೇನೆಂದರೆ  ಇನ್ನು ಬಳಕೆದಾರರು ಫೋಟೋಗಳು ಮತ್ತು ವೀಡಿಯೊಗಳನ್ನು ಮತ್ತು ಆಡಿಯೊ ನೋಟ್ ಗಳನ್ನು WhatsApp ಸ್ಟೇಟಸ್ ನಲ್ಲಿ ಹಂಚಿಕೊಳ್ಳುವುದು ಸಾಧ್ಯವಾಗುತ್ತದೆ.  

ಇದನ್ನೂ ಓದಿ : ಮಳೆಗಾಲದಲ್ಲಿ ಸೊಳ್ಳೆ ಮತ್ತು ಕೀಟಗಳ ಸಮಸ್ಯೆಯಿಂದ ಸಂಪೂರ್ಣ ಮುಕ್ತಿ.!

ವಾಟ್ಸಾಪ್ ಸ್ಟೇಟಸ್‌ನಲ್ಲಿ ಆಡಿಯೋ ನೋಟ್‌ಗಳನ್ನು ಕೂಡಾ ಹಾಕಬಹುದು :
ಹೊಸ ಅಪ್ಡೇಟ್ ನಂತರ, WhatsApp ಸ್ಟೇಟಸ್ ಅನ್ನು ಹಾಕುವಾಗ  ಅದರಲ್ಲಿ ಫೋಟೋಗಳು ಮತ್ತು ವೀಡಿಯೊಗಳ ಜೊತೆಗೆ  ಆಡಿಯೋ ನೋಟ್ ಗಳನ್ನೂ ಕೂಡಾ ಬಳಸಬಹುದು. ಸ್ಟೇಟಸ್‌ನಲ್ಲಿ ಹಂಚಿಕೊಳ್ಳಲಾದ  ಆಡಿಯೋ ನೋಟ್  ಅನ್ನು 'ವಾಯ್ಸ್ ಸ್ಟೇಟಸ್' ಎಂದು ಕರೆಯಬಹುದು. 

ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ? :
WABetaInfo ವರದಿಯಲ್ಲಿ, ಈ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸ್ಕ್ರೀನ್‌ಶಾಟ್‌ಗಳ ಮೂಲಕ ವಿವರವಾಗಿ ಹೇಳಲಾಗಿದೆ. ಸ್ಕ್ರೀನ್‌ಶಾಟ್ ಪ್ರಕಾರ,  ಸ್ಟೇಟಸ್ ಟ್ಯಾಬ್‌ನ ಕೆಳಭಾಗದಲ್ಲಿ ಹೊಸ ಆಯ್ಕೆ ಅಥವಾ ಐಕಾನ್ ಇರುತ್ತದೆ. ಇದರ ಮೂಲಕ ಬಳಕೆದಾರರು  ಸ್ಟೇಟಸ್ ಅಪ್ಡೇಟ್ ಗಳಲ್ಲಿ ವಾಯ್ಸ್ ನೋಟ್ ಗಳನ್ನು ಬಳಸಬಹುದು. 

ಇದನ್ನೂ ಓದಿ : ಏಳು ಸಾವಿರಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿದೆ OnePlus 5G Smartphone ..!

ಈ ವೈಶಿಷ್ಟ್ಯದ ಮೇಲೆ ಕಂಪನಿ ಇನ್ನು ಕೂಡಾ ಕಾರ್ಯ ನಿರ್ವಹಿಸುತ್ತಿದೆ. ಇದು ಬಿಡುಗಡೆಯಾಗುವುದಕ್ಕೆ ಎಷ್ಟು ಸಮಯ ತೆಗೆದುಕೊಳ್ಳಬಹುದು ಎಂಬ ಬಗ್ಗೆ ಯಾವುದೇ ರೀತಿಯ ಮಾಹಿತಿ ಲಭ್ಯವಾಗಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News