ನವದೆಹಲಿ : ಇಂದು ಅಂದರೆ ಜನವರಿ 27 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ವಿಶೇಷವಾದ 'ಎಲೆಕ್ಟ್ರಾನಿಕ್ಸ್ ಸೇಲ್' (Electronics sale) ಪ್ರಾರಂಭವಾಗಿದೆ. ಇದರಲ್ಲಿ ಸ್ಮಾರ್ಟ್‌ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಸ್ಮಾರ್ಟ್   ಟಿವಿಗಳು, ಫ್ರಿಜ್‌ಗಳು ಮತ್ತು ಎಸಿಗಳವರೆಗೆ ಪ್ರತಿಯೊಂದರ ಮೇಲೆ ಭಾರೀ  ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್ ಸೇಲ್ ನಲ್ಲಿ  (flipkart sale) Moto G60 ಅನ್ನು 21,999 ರೂಗಳ ಬದಲಿಗೆ ಕೇವಲ 149 ರೂ. ಗಳಿಗೆ ಖರೀದಿಸಬಹುದು. 


COMMERCIAL BREAK
SCROLL TO CONTINUE READING

Moto G60 ಮೇಲೆ ಬಂಪರ್ ರಿಯಾಯಿತಿಗಳು :
Moto g60 ಮಾರುಕಟ್ಟೆಯಲ್ಲಿ 21,999 ರೂ.ಗೆ ಲಭ್ಯವಿದೆ. 128GB ಇಂಟರ್ನಲ್ ಸ್ಟೋರೇಜ್ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನ ಎಲೆಕ್ಟ್ರಾನಿಕ್ಸ್ ಸೇಲ್ ನಲ್ಲಿ (flipkart electronic sale) ಖರೀದಿಸಿದರೆ,   22% ರಿಯಾಯಿತಿ ಸಿಗಲಿದೆ. ಅನದರೆ ಈ ಫೋನ್ 16,999 ರೂ.ಗೆ ಸಿಗಲಿದೆ.   ಇನ್ನು ಇದನ್ನು ಖರೀದಿಸುವಾಗ,  ಸಿಟಿ ಬ್ಯಾಂಕ್ ನ ಕ್ರೆಡಿಟ್ ಕಾರ್ಡ್ (credit card) ಅಥವಾ ಡೆಬಿಟ್ ಕಾರ್ಡ್ (debit card) ಬಳಸಿದರೆ 10% ಅಂದರೆ ಒಂದು ಸಾವಿರ ರೂಪಾಯಿಗಳ ತ್ವರಿತ ರಿಯಾಯಿತಿ ಪಡೆಯಬಹುದು. 


ಇದನ್ನೂ ಓದಿ : ವಾಟ್ಸಾಪ್‌ನಲ್ಲಿ ಯಾರಾದರೂ ನಿಮ್ಮನ್ನು Block ಮಾಡಿದ್ದಾರಾ? Unblock ಮಾಡುವ ಟ್ರಿಕ್ ಇಲ್ಲಿದೆ ನೋಡಿ


ಈ ರೀತಿ ಮಾಡಿದರೆ ಕೇವಲ 149 ರೂ.ಗೆ ಖರೀದಿಸಬಹುದು ಫೋನ್ : 
ಈ ಸ್ಮಾರ್ಟ್ ಫೋನ್ (smartphone) ಮೇಲೆ ಎಕ್ಸ್ ಚೇಂಜ್ ಆಫರ್ (exchange offer) ಕೂಡ ನೀಡಲಾಗುತ್ತಿದೆ. ಹಳೆಯ ಸ್ಮಾರ್ಟ್‌ಫೋನ್ ಅನ್ನು ಬದಲಾಯಿಸುವ ಮೂಲಕ, ಈ ಸ್ಮಾರ್ಟ್‌ಫೋನ್ ಖರೀದಿಸಿದರೆ  18,850 ರೂ. ವರೆಗೆ ರಿಯಾಯಿತಿಯನ್ನು (discount) ಪಡೆಯಬಹುದು. ಈ ಎಕ್ಸ್ಚೇಂಜ್ ಆಫರ್ ನ  ಸಂಪೂರ್ಣ ಪ್ರಯೋಜನ ಪಡೆಯುವುದು ಸಾಧ್ಯವಾದರೆ, ಈ ಫೋನ್ ಅನ್ನು 21,999 ರೂ . ಬದಲಿಗೆ ಕೇವಲ 149 ರೂ.ಗಳಿಗೆ ಖರೀದಿಸಬಹುದು. 


ಈ ಮೊಟೊರೊಲಾ ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು  :
Moto g60 4G ಸ್ಮಾರ್ಟ್‌ಫೋನ್ ಆಗಿದ್ದು,  6GB RAM ಮತ್ತು 128GB ಆಂತರಿಕ ಸ್ಟೋರೇಜ್ ನೊಂದಿಗೆ ಬರುತ್ತದೆ. Qualcomm Snapdragon 732G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ಈ ಸ್ಮಾರ್ಟ್‌ಫೋನ್ 6.78-ಇಂಚಿನ Full HD + IPS LCD ಡಿಸ್ಪ್ಲೇ ಮತ್ತು 6,000mAh ಪ್ರಬಲ ಬ್ಯಾಟರಿಯೊಂದಿಗೆ ಬರುತ್ತದೆ. ಈ ಫೋನ್‌  ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೊಂದಿಗೆ ಬರಲಿದೆ. ಈ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ 32MP ಫ್ರಂಟ್ ಕ್ಯಾಮೆರಾದೊಂದಿಗೆ ಬರುತ್ತದೆ. 


ಇದನ್ನೂ ಓದಿ : Reliance Jio: ಕೈಗೆಟುಕುವ ದರದಲ್ಲಿ ಶೀಘ್ರದಲ್ಲೇ ಮಾರುಕಟ್ಟೆಗೆ ಲಗ್ಗೆ ಇಡಲಿದೆ 5G JioPhone


ಫ್ಲಿಪ್‌ಕಾರ್ಟ್‌ನ ಈ ಎಲೆಕ್ಟ್ರಾನಿಕ್ಸ್ ಸೇಲ್ ಇಂದಿನಿಂದ ಜನವರಿ 31 ರವರೆಗೆ ಇರಲಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.