ನವದೆಹಲಿ : ಫೋನ್ ಅನ್ನು ದಶಕಗಳ ಹಿಂದೆಯೇ ಕಂಡುಹಿಡಿಯಲಾಯಿತು. ಆದರೆ ಅದಕ್ಕೆ ಸಂಬಂಧಿಸಿದ ಒಂದು ಸಮಸ್ಯೆ ಮಾತ್ರ ಇನ್ನೂ ಕೂಡಾ ಮುಂದುವರೆದಿದೆ. ಅ ಸಮಸ್ಯೆಯೇ ಸರಿಯಾಗಿ ಸಿಗ್ನಲ್ (Smartphone signal) ಸಿಗದೇ ಇರುವುದು. ದೂರದ ಪ್ರದೇಶಗಳಿಗೆ ಹೋದಾಗ ಅಥವಾ ಕೆಲವೊಮ್ಮೆ ಮನೆಯ ಕೆಲ ಕೋಣೆಯಲ್ಲಿ ನೆಟ್‌ವರ್ಕ್‌ಗಳು ಸಿಗುವುದೇ ಇಲ್ಲ ಎನ್ನುವ ಸಮಸ್ಯೆಯನ್ನು ಸಾಮಾನ್ಯವಾಗಿ ಎದುರಿಸುತ್ತಿರುತ್ತೇವೆ. ಹೀಗಾದಾಗ ಕರೆಗಳನ್ನು ಸ್ವೀಕರಿಸಲು ಅಥವಾ ಸಂದೇಶಗಳನ್ನು ಕಳುಹಿಸಲು ಸಾಧ್ಯವಾಗುವುದಿಲ್ಲ. ಅನೇಕ ಕಂಪನಿಗಳು ಈ ಸಮಸ್ಯೆಗೆ ಪರಿಹಾರವನ್ನು ಹುಡುಕುತ್ತಲೇ ಇವೆ. ಆದರೆ ಇಲ್ಲಿಯವರೆಗೆ ಯಾವುದೇ ಪರಿಹಾರ ಮಾತ್ರ ಸಿಕ್ಕಿಲ್ಲ. ಈಗ ಮಾರುಕಟ್ಟೆಯಲ್ಲಿ ವಿಶೇಷ ಸ್ಟಿಕ್ಕರ್ ಅನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಇದು ಫೋನ್‌ನ ನೆಟ್‌ವರ್ಕ್ (Phone network) ಅನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
ನೆಟ್‌ವರ್ಕ್ ಬೂಸ್ಟರ್ ಸ್ಟಿಕ್ಕರ್‌ಗಳು :
ಈ ಉತ್ಪನ್ನದ ಹೆಸರು ನೆಟ್‌ವರ್ಕ್ ಬೂಸ್ಟರ್ ಸ್ಟಿಕ್ಕರ್ (Network booster sticker). ಇದನ್ನು ಸ್ಮಾರ್ಟ್‌ಫೋನ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗುತ್ತದೆ. . ಇದು ಸಾಮಾನ್ಯ ಸ್ಟಿಕ್ಕರಿನಂತೆ ಕಾಣುತ್ತದೆ. ಆದರೆ, ಇದನ್ನು ವಿಶೇಷ ಚಿಪ್ನಿಂದ ತಯಾರಿಸಲಾಗುತ್ತದೆ. ಇದು ಸ್ಮಾರ್ಟ್ ಫೋನ್ ಗೆ ಸಿಗ್ನಲ್ ಗಳನ್ನು (Smartphone signal) ಒದಗಿಸುತ್ತದೆ. ಈ ಸ್ಟಿಕ್ಕರ್ ಅನ್ನು ಫೋನ್‌ನ ಹಿಂಭಾಗದಲ್ಲಿ ಅಂಟಿಸಿದರೆ ಸಾಕು ಇನ್ನೇನು ಮಾಡಬೇಕಿಲ್ಲ. ಇದರ ನಂತರ, ನೀವು ಫೋನ್ ಅಥವಾ ಮೆಸೇಜ್ ಮಾಡುವಾಗ ಸ್ಟಿಕ್ಕರ್ ತನ್ನ ಕೆಲಸ ಮಾಡಲು ಪ್ರಾರಂಭಿಸುತ್ತದೆ.
ಇದನ್ನೂ ಓದಿ : BlackBerry: ನಾಳೆಯಿಂದ ಕಾರ್ಯನಿರ್ವಹಿಸಲ್ಲ ಈ ಫೋನ್, ಕರೆಗಳಿಂದ ಹಿಡಿದು ಸಂದೇಶಗಳವರೆಗೆ ಎಲ್ಲವೂ ಬಂದ್
ಆನ್‌ಲೈನ್‌ನಲ್ಲಿ ಭಾರೀ ಚರ್ಚೆಯಲ್ಲಿದೆ ನೆಟ್‌ವರ್ಕ್ ಬೂಸ್ಟರ್ ಸ್ಟಿಕ್ಕರ್‌ಗಳು :
ಇದು ಎಷ್ಟು ಪರಿಣಾಮಕಾರಿ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ. ಆದರೆ ಆನ್‌ಲೈನ್ (Online) ವೆಬ್‌ಸೈಟ್‌ಗಳಲ್ಲಿ ಮಾತ್ರ ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಸ್ಟಿಕ್ಕರ್ ಅನ್ನು ಹಲವು ವೆಬ್‌ಸೈಟ್‌ಗಳಲ್ಲಿ (website) ಕೂಡಾ ಪಟ್ಟಿ ಮಾಡಲಾಗಿದೆ.
ಬೆಲೆ ಎಷ್ಟು ? :
ಬೆಲೆಯ ಬಗ್ಗೆ ಹೇಳುವುದಾದರೆ, ಈ ನೆಟ್‌ವರ್ಕ್ ಬೂಸ್ಟರ್ ಸ್ಟಿಕ್ಕರ್‌ಗಳು ಸಾವಿರ ರೂಪಾಯಿಗೆ ಮಾರಾಟವಾಗುತ್ತಿದೆ. ಹಾಗಾಗಿ ಅದನ್ನು ಸುಲಭವಾಗಿ ಖರೀದಿಸಬಹುದು ಮತ್ತು ಪರೀಕ್ಷಿಸಬಹುದು.
ಇದನ್ನೂ ಓದಿ : Jio ಗ್ರಾಹಕರಿಗೆ ಭರ್ಜರಿ ಪ್ಲಾನ್ : ₹100 ಗಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ Free ಡೇಟಾ, ಅನಿಯಮಿತ ಕರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.