ಬೆಂಗಳೂರು : ಫ್ಲಿಪ್‌ಕಾರ್ಟ್ ಇನ್ನು ಮುಂದೆ ಕೇವಲ ಆನ್‌ಲೈನ್ ಶಾಪಿಂಗ್ ವೆಬ್‌ಸೈಟ್ ಆಗಿಲ್ಲ.ಈಗ ಫ್ಲಿಪ್‌ಕಾರ್ಟ್ ಅಪ್ಲಿಕೇಶನ್‌ನಲ್ಲಿ ಹಲವಾರು ರೀತಿಯ ಬಿಲ್‌ಗಳನ್ನು ಪಾವತಿಸಬಹುದು, ರೀಚಾರ್ಜ್ ಮಾಡಬಹುದು. ವಿದ್ಯುತ್ ಬಿಲ್ ಮತ್ತು ಮೊಬೈಲ್ ರೀಚಾರ್ಜ್ ಅನ್ನು ಕೂಡಾ ಈ ಆಪ್ ಮೂಲಕ ಮಾಡಬಹುದು. 


COMMERCIAL BREAK
SCROLL TO CONTINUE READING

ಈಗ Flipkart ಅಪ್ಲಿಕೇಶನ್‌ನಲ್ಲಿ ಈ ಬಿಲ್ ಗಳನ್ನೂ ಪಾವತಿಸಬಹುದು:
ಫಾಸ್ಟ್ಯಾಗ್ ರೀಚಾರ್ಜ್
DTH ರೀಚಾರ್ಜ್
ಲ್ಯಾಂಡ್‌ಲೈನ್ ಬಿಲ್
ಬ್ರಾಡ್‌ಬ್ಯಾಂಡ್ ಬಿಲ್
ಮೊಬೈಲ್ ಪೋಸ್ಟ್‌ಪೇಯ್ಡ್ ಬಿಲ್


ಇದನ್ನೂ ಓದಿ : ಗರ್ಭಿಣಿಯರಿಗೆ ಉಚಿತ ಆಟೋ ಸೇವೆ :ನಮ್ಮ ಅಟೋ ಆಪ್ ಮೂಲಕ ನೋಂದಣಿ ಮಾಡಿದರೆ ನೀವಿದ್ದಲ್ಲಿಗೆ ಬರುತ್ತದೆ ಆಟೋ


ಈ ಪೇಮೆಂಟ್ ಅನ್ನು ಸುಲಭವಾಗಿ ಮಾಡಲು Flipkart BillDesk ಕಂಪನಿಯ ಸಹಯೋಗ ಪಡೆದುಕೊಂಡಿದೆ. BillDesk ಭಾರತದಲ್ಲಿ ಪ್ರಸಿದ್ಧ ಪೇಮೆಂಟ್ ಕಂಪನಿಯಾಗಿದೆ.ಭಾರತ್ ಬಿಲ್ ಪಾವತಿ ವ್ಯವಸ್ಥೆ (ಬಿಬಿಪಿಎಸ್) ಸಹಯೋಗದಲ್ಲಿ ಫ್ಲಿಪ್‌ಕಾರ್ಟ್ ಈ ಹೊಸ ಸೇವೆಯನ್ನು ಆರಂಭಿಸಿದೆ.


ಫ್ಲಿಪ್‌ಕಾರ್ಟ್ ಕೂಡಾ ಈ ಆಫರ್ ತಂದಿದೆ :
ಈ ಹೊಸ ಸೇವೆಗಳನ್ನು ಉತ್ತೇಜಿಸಲು ಫ್ಲಿಪ್‌ಕಾರ್ಟ್ ವಿಶೇಷ ಕೊಡುಗೆಯನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್ UPI ಬಳಸಿ ಪೇಮೆಂಟ್ ಮಾಡಿದರೆ  ಸೂಪರ್‌ಕಾಯಿನ್‌ಗಳೊಂದಿಗೆ ಸಂಪೂರ್ಣ ಬಿಲ್‌ನಲ್ಲಿ ನೀವು 10% ವರೆಗೆ ರಿಯಾಯಿತಿ ಪಡೆಯಬಹುದು.ಆದರೆ ನೆನಪಿರಲಿ ಈ ಆಫರ್ ಸೀಮಿತ ಅವಧಿಗೆ ಮಾತ್ರ ಇರಲಿದೆ.


ಇದನ್ನೂ ಓದಿ : ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !


ಫ್ಲಿಪ್‌ಕಾರ್ಟ್ ತನ್ನ UPI ಸೇವೆಯನ್ನು ಪ್ರಾರಂಭಿಸಿದ್ದು, ಇದು ರೀಚಾರ್ಜ್ ಮತ್ತು ಬಿಲ್ ಪಾವತಿಗಳಿಗೆ ಸುರಕ್ಷಿತ ಮತ್ತು ಸುಲಭ ಮಾರ್ಗವಾಗಿದೆ.ಗ್ರಾಹಕರು ಈ ಸೇವೆಯನ್ನು ಬಳಸಿಕೊಂಡು SuperCoins ಮತ್ತು ಕ್ಯಾಶ್‌ಬ್ಯಾಕ್ ರೂಪದಲ್ಲಿ ಬಹುಮಾನಗಳನ್ನು ಗಳಿಸಬಹುದು. ಒಂದೇ ಕ್ಲಿಕ್‌ನಲ್ಲಿ ತ್ವರಿತ ಪಾವತಿಗಳನ್ನು ಪಡೆಯಬಹುದು.ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುತ್ತಿರಲಿ ಅಥವಾ ಬಿಲ್‌ಗಳನ್ನು ಪಾವತಿಸುತ್ತಿರಲಿ ಈ ಸೇವೆಯು ಸಂಪೂರ್ಣ ಡಿಜಿಟಲ್ ಪಾವತಿ ಅನುಭವವನ್ನು ಸುಧಾರಿಸುತ್ತದೆ.


https://bit.ly/3AClgDd


Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.