ವಿಜಯಪುರ : ರಾಜ್ಯ ಸರ್ಕಾರ ಶಕ್ತಿ ಯೋಜನೆ ಅಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಭಾಗ್ಯ ಕಲ್ಪಿಸಿದೆ.ಇನ್ನೊಂದೆಡೆ, ಚಿಕಿತ್ಸೆಗೆಂದು ಆಸ್ಪತ್ರೆಗೆ ತೆರಳುವ ಗರ್ಭಿಣಿಯರಿಗಾಗಿ ರಾಜ್ಯದಲ್ಲಿ ಉಚಿತ ಆಟೋ ಭಾಗ್ಯ ಕೂಡಾ ಕಲ್ಪಿಸಲಾಗಿದೆ. ಮನೆಯಲ್ಲಿ ಗರ್ಭಿಣಿಯಿದ್ದರೆ ಆಸ್ಪತ್ರೆಗೆ ಉಚಿತವಾಗಿ ದಾಖಲಾಗಲು ಕೇವಲ ಒಂದು ಫೋನ್ ಕಾಲ್ ಅಥವಾ ಆಪ್ ಮೂಲಕ ನೋಂದಾಯಿಸಿದರೆ ಸಾಕು ನಿಮ್ಮ ಮನೆ ಮುಂದೆ ಆಟೋ ಬಂದು ನಿಲ್ಲುತ್ತದೆ.
ನಮ್ಮ ಅಟೋ ಆಪ್ :
ನಮ್ಮ ಅಟೋ ಆಪ್ ಮೂಲಕ ಈ ಉಚಿತ ಆಟೋ ಸೇವೆಯ ಲಾಭವನ್ನು ಪಡೆಯಬಹುದು. ಅಥವಾ 7483869896 ಟೋಲ್ ಫ್ರೀ ನಂಬರ್ ಗೆ ಡಯಲ್ ಮಾಡಿ ಕೂಡಾ ಗರ್ಭಿಣಿಯರಿಗೆ ಉಚಿತ ಆಟೋ ಸೌಲಭ್ಯ ಪಡೆದುಕೊಳ್ಳಬಹುದು. ನಮ್ಮ ಅಟೋ ಅನ್ನುವ ಆಪ್ ಮೂಲಕ ನರೇಂದ್ರ ನಂದಿಕೋಲಮಠ ಈ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದ್ದಾರೆ.
ಇದನ್ನೂ ಓದಿ : ಕಾರಿನ ಪ್ರಯಾಣದಲ್ಲಿ ವಾಂತಿಯಾಗುವ ಸಮಸ್ಯೆ ನಿಮಗೂ ಇದೆಯಾ ? ಆಪಲ್ ನ ಈ ಟ್ರಿಕ್ ನಿಮಗೂ ತಿಳಿದಿರಲಿ !
ಗರ್ಭಿಣಿಯರಿಗೆ ಉಚಿತ ಆಟೋ :
ವಿಜಯಪುರ ನಗರದಲ್ಲಿನ ಗರ್ಭಿಣಿಯರಿಗೆ ಈ ಸೌಲಭ್ಯವನ್ನ ಕಲ್ಪಿಸಿ ಕೊಡಲಾಗಿದೆ. ಸ್ಟಾರ್ಟ್ ಅಪ್ ಯೋಜನೆ ಸದ್ಬಳಕೆ ಮಾಡಿಕೊಂಡು ಏಳು ಯಂತ್ರ ಚಾಲಿತ ಆಟೋಗಳನ್ನ ಖರೀದಿಸಿ ಆಟೋದ ಮೇಲುಗಡೆ ಟೋಲ್ ಫ್ರೀ ನಂಬರ್ ಹಾಗೂ ಗರ್ಭಿಣಿಯರಿಗೆ ಉಚಿತ ಆಟೋ ಸೇವೆ ಎನ್ನುವ ಬ್ಯಾನರ್ ಸಹ ಹಾಕಿದ್ದಾರೆ.ಈಗಾಗಲೇ ವಿಜಯಪುರ ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಗರ್ಭಿಣಿಯರಿಗೆ ಉಚಿತ ಆಟೋ ಸೌಲಭ್ಯ ದೊರಕುತ್ತಿದ್ದು ವಿಜಯಪುರ ನಗರ ಹಾಗೂ ಸುತ್ತಿಲಿನ 10 ಕಿಲೋಮೀಟರ್ ದೂರದಲ್ಲಿ ಗರ್ಭಿಣಿಯರು ಆಸ್ಪತ್ರೆಗೆ ತೆರಳಬಹುದು. ಇನ್ನು ಗರ್ಭಿಣಿಯರ ಜೊತೆಗೆ ಸಂಬಂಧಿಕರಿಗೆ ಕೂಡಾ ರಿಯಾಯಿತಿ ದರದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.
ವಿಜಯಪುರ ನಗರದಲ್ಲಿ ಇದೊಂದು ವಿನೂತನ ಪ್ರಯತ್ನಕ್ಕೆ ನರೇಂದ್ರ ನಂದಿಕೋಲಮಠ ಎನ್ನುವ ಯುವಕ ಕೈ ಹಾಕಿದ್ದಾರೆ. ತನ್ನ ಸ್ನೇಹಿತನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ದಾಖಲು ಮಾಡುವ ವೇಳೆ ಆದಂತಹ ಕಹಿ ಅನುಭವ ಹಿನ್ನೆಲೆಯಲ್ಲಿಅವರು ಉಚಿತ ಆಟೋ ಸೇವೆ ಒದಗಿಸಲು ಸಂಕಲ್ಪ ತೊಟ್ಟಿದ್ದಾರೆ.ಉಚಿತ ಆಟೋ ಸೇವೆಗಾಗಿ ಲಕ್ಷಾಂತರ ಖರ್ಚು ಮಾಡಿ ನಮ್ಮ ಅಟೋ ಆಪ್ ಅಭಿವೃದ್ಧಿಪಡಿಸಿ ಏಳು ಆಟೋಗಳನ್ನು ಖರೀದಿಸಿದ್ದಾರೆ.7 ಆಟೋ ಜೊತೆಗೆ 9 ಆಟೋ ಚಾಲಕರು ಕೈಜೋಡಿಸಿ ಒಟ್ಟು 16 ಆಟೋಗಳು ಫೀಲ್ಡ್ ನಲ್ಲಿ ಸೇವೆ ನೀಡುತ್ತಿವೆ.
ಇದನ್ನೂ ಓದಿ : Hyundai Creta: ಭರ್ಜರಿ ಸೇಲ್ ಆಗುತ್ತಿರುವ ಹೊಸ ಹುಂಡೈ ಕ್ರೆಟಾದ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.