ನವದೆಹಲಿ: ಫ್ಲಿಪ್‌ಕಾರ್ಟ್‌ನ ವಾರ್ಷಿಕ ಮಾರಾಟವಾದ ಬಿಗ್ ಬಿಲಿಯನ್ ಡೇಸ್ ಸೇಲ್ ಅನ್ನು ನೀವು ಮಿಸ್ ಮಾಡಿಕೊಂಡಿದ್ದೀರಾ? ಹಾಗಾದರೆ ನಿಮ್ಮ ನೆಚ್ಚಿನ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸಲು ಇನ್ನೊಂದು ಅವಕಾಶ ಬಂದಿದೆ. ಇಂದು ಅಂದರೆ ಅಕ್ಟೋಬರ್ 17 ರಿಂದ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್(Flipkart's Big Diwali Sale) ಅನ್ನು ಆರಂಭಿಸಿದೆ. ಈ ಮಾರಾಟದಲ್ಲಿ ನಿಮಗೆ ಎಲ್ಲಾ ರೀತಿಯ ಉತ್ಪನ್ನಗಳ ಮೇಲೆ ಅದ್ಭುತ ಕೊಡುಗೆಗಳನ್ನು ನೀಡಲಾಗುತ್ತಿದೆ. Infinix ಸ್ಮಾರ್ಟ್‌ಫೋನ್ ಗಳ ಮೇಲೆ ನಿಮಗೆ ಭರ್ಜರಿಗೆ ಡಿಸ್ಕೌಂಟ್ ಸಿಗುತ್ತಿದೆ.    


COMMERCIAL BREAK
SCROLL TO CONTINUE READING

ಕೇವಲ 549 ರೂ.ಗೆ Infinix Hot 10 Play ಖರೀದಿಸಿ


ಫ್ಲಿಪ್‌ಕಾರ್ಟ್‌ನ ದೀಪಾವಳಿ ಸೇಲ್ ನಲ್ಲಿ ಶೇ.22ರಷ್ಟು ರಿಯಾಯಿತಿ ಬಳಿಕ 9,999 ರೂ. ಬೆಲೆಯ ಈ ಸ್ಮಾರ್ಟ್‌ಫೋನ್‌(Smartphone) ಅನ್ನು ನೀವು 7,799 ರೂ.ಗೆ ಪಡೆಯಬಹುದು. ಈ ಡೀಲ್ ನಲ್ಲಿ ನೀವು ವಿನಿಮಯ ಕೊಡುಗೆ(Exchange Offer)ಯನ್ನು ಸಹ ಪಡೆಯಲಿದ್ದೀರಿ. ಇದರ ಪ್ರಯೋಜನ ಪಡೆದರೆ ನಿಮಗೆ 7,250 ರೂ. ರಿಯಾಯಿತಿ ಸಿಗಲಿದೆ. ಹೀಗಾಗಿ ನೀವು ಈ ಫೋನ್ ಕೊಳ್ಳಲು ಕೇವಲ 549 ರೂ. ಪಾವತಿಸಬೇಕಾಗುತ್ತದೆ. ಈ ಫೋನ್ 6,000mAh ಬ್ಯಾಟರಿ ಜೊತೆಗೆ ಅನೇಕ ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ.    


ಇದನ್ನೂ ಓದಿ: Whatsappನಲ್ಲಿ ಈಗ ಕೇವಲ ಒಂದು ಕ್ಲಿಕ್ ಮೂಲಕ ನಡೆದು ಹೋಗುತ್ತದೆ ಪೇಮೆಂಟ್


Infinix Hot 10Sನಲ್ಲಿ ಆಫರ್ ಲಭ್ಯವಿದೆ


ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿರುವ ಈ ಸ್ಮಾರ್ಟ್‌ಫೋನ್‌(Smartphone) ಆಂಡ್ರಾಯ್ಡ್ 11ನಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 6,000mAh ಬ್ಯಾಟರಿಯೊಂದಿಗೆ ಬರುತ್ತದೆ. ನೀವು ಈ ಸ್ಮಾರ್ಟ್‌ಫೋನ್‌ ಅನ್ನು ಫ್ಲಿಪ್ ಕಾರ್ಟ್ ನಿಂದ 10,499 ರೂ.ಗೆ ಖರೀದಿಸಬಹುದು. ಆದರೆ ಇದರ ಮೂಲ ಬೆಲೆ 13,999 ರೂ. ಆಗಿದೆ. ಇದರ ಮೇಲೆ ನಡೆಯುತ್ತಿರುವ ವಿನಿಮಯ ಕೊಡುಗೆ(Exchange Offer)ಯ ಸಂಪೂರ್ಣ ಲಾಭವನ್ನು ಪಡೆದರೆ ನೀವು 9,850 ರೂ.ವರೆಗೂ ಉಳಿಸಬಹುದು. ಹಾಗೆಯೇ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಬಳಕೆಗೆ ನೀವು ಶೇ.10ರಷ್ಟು ಅಂದರೆ ಗರಿಷ್ಠ 1,250 ರೂ.ವರೆಗೂ ಹೆಚ್ಚುವರಿ ರಿಯಾಯಿತಿ ಪಡೆಯುತ್ತೀರಿ.


Infinix Smart 5A ನಲ್ಲಿ ಭಾರೀ ರಿಯಾಯಿತಿ   


ಈ Infinix ಸ್ಮಾರ್ಟ್‌ಫೋನ್‌ 256GB ವಿಸ್ತರಿಸಬಹುದಾದ ಮೆಮೊರಿ, 5,000mAh ಬ್ಯಾಟರಿ ಮತ್ತು ಡ್ಯುಯಲ್ ಸೆನ್ಸರ್ ಕ್ಯಾಮೆರಾಗಳೊಂದಿಗೆ ಬರುತ್ತದೆ. ಶೇ.18ರಷ್ಟು ರಿಯಾಯಿತಿಯ ನಂತರ ನೀವು 7,999 ರೂ. ಬೆಲೆಯ ಈ ಫೋನ್ ಅನ್ನು 6,499 ರೂ.ಗೆ ಖರೀದಿಸಬಹುದು. ಹಾಗೆಯೇ ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಇದನ್ನು ಖರೀದಿಸಿದರ ನೀವು 5,950 ರೂ.ವರೆಗೆ ಉಳಿಸಬಹುದು. ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸಿದರೆ ಶೇ.10ರಷ್ಟು ಅಂದರೆ ಗರಿಷ್ಠ 1,250 ರೂ. ಹೆಚ್ಚುವರಿ ರಿಯಾಯಿತಿ ಪಡೆಯುತ್ತೀರಿ. ಫ್ಲಿಪ್‌ಕಾರ್ಟ್(Flipkart) ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವಾಗ ನೀವು ಶೇ.5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಪಡೆಯುತ್ತೀರಿ.


ಇದನ್ನೂ ಓದಿ: ಸ್ಟ್ರಾಂಗ್ ಬ್ಯಾಟರಿ ಮತ್ತು ದೊಡ್ಡ ಸ್ಕ್ರೀನ್ ನೊಂದಿಗೆ 4 ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ Oppo, ಬೆಲೆ ಮತ್ತು ಇತರ ಫೀಚರ್ ಗಳನ್ನು ತಿಳಿಯಿರಿ


ಕಡಿಮೆ ಬೆಲೆಗೆ Infinix Note 10 ಖರೀದಿಸಿ


ನೀವು 128GB ಇಂಟರ್ನಲ್ ಸ್ಟೋರೇಜ್, 5,000mAh ಬ್ಯಾಟರಿ ಮತ್ತು ಫುಲ್ HD + ಡಿಸ್ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್‌ ಅನ್ನು 14,999 ರೂ.ನ ಬದಲಾಗಿ 12,499 ರೂ.ಗಳಿಗೆ ಖರೀದಿಸಬಹುದು. ಈ ಡೀಲ್ ನಲ್ಲಿ ನೀವು ವಿನಿಮಯ ಕೊಡುಗೆಯ ಸೌಲಭ್ಯವನ್ನು ಸಹ ಪಡೆಯಬಹುದು. ಇದರಿಂದ ನೀವು 11,900 ರೂ. ವರೆಗೆ ಹೆಚ್ಚು ಉಳಿಸಬಹುದು. ಹಾಗೆಯೇ ನೀವು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಕೆಗೆ ಶೇ.10ರಷ್ಟು ಅಂದರೆ ಗರಿಷ್ಠ 1,250 ರೂ. ರಿಯಾಯಿತಿಯನ್ನು ಪಡೆಯುತ್ತೀರಿ. ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್(SBI Credit Card) ಬಳಸಿ ನೀವು ಶೇ.5ರಷ್ಟು ಅನಿಯಮಿತ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯುತ್ತೀರಿ. ಇಂತಹ ಆಫರ್ ಗಳನ್ನು ನೀವು Infinixನಲ್ಲಿ ಮಾತ್ರವಲ್ಲದೆ ಹಲವು ಉನ್ನತ ಸ್ಮಾರ್ಟ್‌ಫೋನ್‌ ಗಳಲ್ಲಿಯೂ ಕಾಣಬಹುದು. ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್ ಅಕ್ಟೋಬರ್ 23 ರವರೆಗೆ ಮುಂದುವರಿಯುತ್ತದೆ.   


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ