Amazon Great Indian Festival: ಕೇವಲ ರೂ. 649 ರೂ.ಗಳಲ್ಲಿ ಈ ರೀತಿ ಖರೀದಿಸಿ Realme ಕಂಪನಿಯ ಜಬರ್ದಸ್ತ್ ಫೋನ್

Amazon Great Indian Festival - Realme Narzo 50A ಮೇಲೆ ಭರ್ಜರಿ ಆಫರ್ ನಡೆಯುತ್ತಿದೆ. ನೀವು ಈ ಫೋನ್ ಅನ್ನು ರೂ.649 ಕ್ಕೆ ಖರೀದಿಸಬಹುದು. ಹೇಗೆ ಅಂತೀರಾ? ತಿಳಿಯೋಣ ಬನ್ನಿ.

Written by - Nitin Tabib | Last Updated : Oct 12, 2021, 09:05 PM IST
  • Realme Narzo 50A ಮೇಲೆ ಬಂಬಾಟ್ ಆಫರ್ ನಡೆಯುತ್ತಿದೆ.
  • Amazon Saleನಲ್ಲಿ ನೀವು ಇದನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ಖರೀದಿಸಬಹುದು.
  • Narzo 50A 6.5 ಇಂಚಿನ ಡಿಸ್ಪ್ಲೇ ಹೊಂದಿದೆ.
Amazon Great Indian Festival: ಕೇವಲ ರೂ. 649 ರೂ.ಗಳಲ್ಲಿ ಈ ರೀತಿ ಖರೀದಿಸಿ Realme ಕಂಪನಿಯ ಜಬರ್ದಸ್ತ್ ಫೋನ್  title=
Realme Narzo 50A Offers And Discount (File Photo)

Amazon Great Indian Festival - ಅಮೆಜಾನ್‌ನ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ (Great Indian Festival) ನಡೆಯುತ್ತಿದೆ. ಮಾರಾಟದ ಸಮಯದಲ್ಲಿ, ಸ್ಮಾರ್ಟ್ಫೋನ್ಗಳು ಮತ್ತು ಇತರ ಹಲವು ಉತ್ಪನ್ನಗಳ ಮೇಲೆ ಉತ್ತಮ ಕೊಡುಗೆಗಳಿವೆ (Great Indian Festival Offers). ಸೆಲ್‌ನಲ್ಲಿ ಬಹಳಷ್ಟು ಫೋನ್‌ಗಳನ್ನು ನೋಡಿದ ನಂತರ ಯಾವ ಫೋನ್ ಖರೀದಿಸಬೇಕು ಎಂದು ನಿಮಗೆ ಗೊಂದಲ ಉಂಟಾಗುತ್ತಿದ್ದರೆ, ನಾವು ನಿಮಗಾಗಿ ಅತ್ಯುತ್ತಮ ಆಯ್ಕೆಯನ್ನು ತಂದಿದ್ದೇವೆ. ಆಫರ್‌ಗಳ (Amazon Deals) ಮೂಲಕ, ನೀವು  Realme ಕಂಪನಿಯ ಜಬರ್ದಸ್ತ್  ಫೋನನ್ನು ರೂ.649 ಕ್ಕೆ ಖರೀದಿಸಬಹುದು. ನೀವು Realme Narzo 50A ಅನ್ನು ಅತ್ಯಂತ ಅಗ್ಗದ ಬೆಲೆಯಲ್ಲಿ ಹೇಗೆ ಖರೀದಿಸಬಹುದು ತಿಳಿಯೋಣ ಬನ್ನಿ .

Realme Narzo 50A Offers And Discount (Amazon Offers)
Realme Narzo 50A ಯ 4GB RAM+128GB ವೇರಿಯಂಟ್ ಅನ್ನು ಅಮೆಜಾನ್‌ನಲ್ಲಿ ರೂ 12,499 ಕ್ಕೆ ಮಾರಾಟ ಮಾಡಲಾಗುತ್ತಿದೆ. ಈ ಫೋನಿನಲ್ಲಿ ಎಕ್ಸ್ಚೇಂಜ್ ಆಫರ್ ನಡೆಯುತ್ತಿದೆ. ನಿಮ್ಮ ಹಳೆಯ ಫೋನ್ ಅನ್ನು ನೀವು ವಿನಿಮಯ ಮಾಡಿದರೆ, ನೀವು ರೂ 11,850 ವರೆಗೆ ರಿಯಾಯಿತಿ ಪಡೆಯಬಹುದು. ನೀವು ಸಂಪೂರ್ಣ ಆಫ್ ತೆಗೆದುಕೊಳ್ಳುವಲ್ಲಿ ಯಶಸ್ವಿಯಾದರೆ, ನೀವು ಈ ಫೋನ್ ಅನ್ನು ರೂ 649 ಕ್ಕೆ ಖರೀದಿಸಬಹುದು. ಕಾರ್ಡ್ ಆಫರ್‌ಗಳ ಕುರಿತು ಹೇಳುವುದಾದರೆ, ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನಿಂದ ಪಾವತಿಯ ಮೇಲೆ ಶೇ.10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಇದನ್ನೂ ಓದಿ-Reliance Jio ಗ್ರಾಹಕರಿಗೆ ಸಂತಸದ ಸುದ್ದಿ, Quizನಲ್ಲಿ ಪಾಲ್ಗೊಂಡು Free Internet ಹಾಗೂ ಇತರ ಬಹುಮಾನಗಳನ್ನು ಗೆಲ್ಲಿ

Narzo 50A ವೈಶಿಷ್ಟ್ಯಗಳು
Narzo 50A,  MediaTek Helio G85 ಪ್ರೊಸೆಸರ್ ಪ್ಯಾಕ್ ಅನ್ನು ಗೇಮಿಂಗ್‌ಗೆ ಹೊಂದುವಂತೆ ಮಾಡಲಾಗಿದೆ, ARM Mali G52 GPU ನೊಂದಿಗೆ ಇದು ಬರುತ್ತದೆ. ಈ ಫೋನ್ ದೊಡ್ಡ 6,000mAh ಬ್ಯಾಟರಿಯಿಂದ ನಿಯಂತ್ರಿಸಲ್ಪಡುತ್ತದೆ, ಇದು ರಿವರ್ಸ್ ಚಾರ್ಜ್ ಬೆಂಬಲದೊಂದಿಗೆ 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.  ಭದ್ರತೆಗಾಗಿ ಹಿಂಬದಿಯಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ರೀಡರ್ ಅನ್ನು ನೀಡುತ್ತದೆ ಮತ್ತು 256GB ವರೆಗಿನ ಮೆಮೊರಿ ವಿಸ್ತರಣೆಗಾಗಿ ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಇದರಲ್ಲಿ ನೀಡಲಾಗಿದೆ. 

ಇದನ್ನೂ ಓದಿ-BSNL ಗ್ರಾಹಕರಿಗೆ ದೀಪಾವಳಿ ಗಿಫ್ಟ್ , ಸಿಗಲಿದೆ ಸಣ್ಣ ರಿಚಾರ್ಜ್ ನ 30 ದಿನಗಳ ಪ್ಲಾನ್

ನಾರ್ಜೊ 50A 6.5 ಇಂಚಿನ ಡಿಸ್ಪ್ಲೇಯನ್ನು ಮುಂಭಾಗದಲ್ಲಿ ವಾಟರ್‌ಡ್ರಾಪ್ ನಾಚ್‌ನೊಂದಿಗೆ ಬರುತ್ತದೆ. ಮತ್ತು ಇದು 400 ನಿಟ್‌ಗಳ ಹೊಳಪು ಮತ್ತು 88.7 ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ನೀಡುತ್ತದೆ. ಹಿಂಭಾಗದಲ್ಲಿ, ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ, ಇದರಲ್ಲಿ 50 ಮೆಗಾಪಿಕ್ಸೆಲ್ ಎಐ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಪೋಟ್ರೇಟ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಸೆನ್ಸರ್ ಇದ್ದರೆ, ಮುಂಭಾಗದಲ್ಲಿ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಸಾಧನವು ಆಕ್ಸಿಜನ್ ಬ್ಲೂ ಮತ್ತು ಆಕ್ಸಿಜನ್ ಗ್ರೀನ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಫೋನಿನ ಎರಡು ರೂಪಾಂತರಗಳಿವೆ, ಒಂದು 4GB RAM + 64GB ಸಂಗ್ರಹಣೆಯೊಂದಿಗೆ ಬರುತ್ತದೆ ಮತ್ತು ಇನ್ನೊಂದು 4GB RAM + 128GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ.

ಇದನ್ನೂ ಓದಿ-Whatsapp New Feature: ಬದಲಾದ Voice Message ಪದ್ಧತಿ, ಭಾರಿ ಉತ್ಸಾಹದಲ್ಲಿ ಬಳಕೆದಾರರು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News