ಸ್ಟ್ರಾಂಗ್ ಬ್ಯಾಟರಿ ಮತ್ತು ದೊಡ್ಡ ಸ್ಕ್ರೀನ್ ನೊಂದಿಗೆ 4 ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ Oppo, ಬೆಲೆ ಮತ್ತು ಇತರ ಫೀಚರ್ ಗಳನ್ನು ತಿಳಿಯಿರಿ

OPPO A55 Starry Black ಮತ್ತು Rainbow Blue ಕಲರ್ ವೆರಿಯಂಟ್‌ಗಳಲ್ಲಿ ಬರುತ್ತದೆ. OPPO A55 ನ 4GB RAM + 64GB ಸ್ಟೋರೇಜ್ ಮಾದರಿಯ ಬೆಲೆ  15,490ರೂ. 6GB RAM + 128GB ಇಂಟರ್ನಲ್ ಸ್ಟೋರೇಜ್ ಮಾದರಿಯ ಬೆಲೆ 17,490  ರೂ.

Written by - Ranjitha R K | Last Updated : Oct 1, 2021, 07:28 PM IST
  • OPPO A55 ಸ್ಮಾರ್ಟ್‌ಫೋನ್ ಬಿಡುಗಡೆ
  • ಸ್ಮಾರ್ಟ್ಫೋನ್ 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ.
  • ಫೋನ್ 5000mAH ಬ್ಯಾಟರಿ ಮತ್ತು ದೊಡ್ಡಸ್ಕ್ರೀನ್ ಹೊಂದಿದೆ.
ಸ್ಟ್ರಾಂಗ್ ಬ್ಯಾಟರಿ ಮತ್ತು ದೊಡ್ಡ ಸ್ಕ್ರೀನ್ ನೊಂದಿಗೆ 4 ಕ್ಯಾಮೆರಾ ಇರುವ ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದ Oppo, ಬೆಲೆ ಮತ್ತು ಇತರ ಫೀಚರ್ ಗಳನ್ನು ತಿಳಿಯಿರಿ title=
OPPO A55 ಸ್ಮಾರ್ಟ್‌ಫೋನ್ ಬಿಡುಗಡೆ (photo zee news)

ನವದೆಹಲಿ : OPPO ಇಂದು ಭಾರತದಲ್ಲಿ OPPO A55 ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. OPPO A54 ನ ಯಶಸ್ಸಿನ ನಂತರ, OPPO A55 ಅನ್ನು ಪ್ರಾರಂಭಿಸಲಾಗಿದೆ. OPPO A55 6.5-ಇಂಚಿನ IPS LCD ಡಿಸ್‌ಪ್ಲೇ,  HD+ ರೆಸಲ್ಯೂಶನ್ ಅನ್ನು ಹೊಂದಿದೆ. ಸ್ಕ್ರೀನ್ ಮೇಲಿನ ಎಡ ಮೂಲೆಯಲ್ಲಿ ಪಂಚ್-ಹೋಲ್ ಇದ್ದು ಇದರಲ್ಲಿ ಸೆಲ್ಫಿ ಕ್ಯಾಮೆರಾ ಇದೆ. ಸ್ಮಾರ್ಟ್ಫೋನ್ 50MP ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. A55 ನ ಇತರ ಪ್ರಮುಖ ಲಕ್ಷಣಗಳೆಂದರೆ 6GB RAM, 16MP ಸೆಲ್ಫಿ ಕ್ಯಾಮೆರಾ ಮತ್ತು 5000mAh ಬ್ಯಾಟರಿ.  

ಭಾರತದಲ್ಲಿ OPPO A55 ಬೆಲೆ :
OPPO A55 Starry Black ಮತ್ತು Rainbow Blue ಕಲರ್ ವೆರಿಯಂಟ್‌ಗಳಲ್ಲಿ ಬರುತ್ತದೆ. OPPO A55 ನ 4GB RAM + 64GB ಸ್ಟೋರೇಜ್ ಮಾದರಿಯ ಬೆಲೆ  15,490ರೂ. 6GB RAM + 128GB ಇಂಟರ್ನಲ್ ಸ್ಟೋರೇಜ್ ಮಾದರಿಯ ಬೆಲೆ 17,490  ರೂ. ಒಪ್ಪೋ ಇಂಡಿಯಾ (Oppo India) ವೆಬ್‌ಸೈಟ್‌ನಲ್ಲಿ ಪ್ರಿ-ಆರ್ಡರ್‌ಗಾಗಿ ಈ ಸ್ಮಾರ್ಟ್‌ಫೋನ್‌ ಅನ್ನು ಪಟ್ಟಿ ಮಾಡಲಾಗಿದೆ.  ಅಮೆಜಾನ್ (Amazon) ಮತ್ತು ಒಪ್ಪೋ ವೆಬ್‌ಸೈಟ್ ಮೂಲಕ ಭಾರತದಲ್ಲಿ ಮಾರಾಟಕ್ಕೆ ಬರಲಿದೆ.

ಇದನ್ನೂ ಓದಿ : ಎರಡು ಫೋನ್ ಗಳನ್ನು ಬಿಡುಗಡೆ ಮಾಡಿದ Vivo, ವಯರ್ ಲೆಸ್ ಚಾರ್ಜಿಂಗ್, ಅದ್ಬುತ ಕ್ಯಾಮೆರಾದೊಂದಿಗೆ ಇರಲಿದೆ ಈ ವೈಶಿಷ್ಟ್ಯ

OPPO A55 ವಿಶೇಷತೆಗಳು :
OPPO A55 6.5-ಇಂಚಿನ IPS LCD ಡಿಸ್‌ಪ್ಲೇಯೊಂದಿಗೆ HD+ 720 x 1600 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಸ್ಕ್ರೀನ್ ನಲ್ಲಿ ಸರ್ಟಿಫೈಡ್ 60Hz ರಿಫ್ರೆಶ್ ರೇಟ್, 120Hz ಟಚ್ ಸ್ಯಾಂಪ್ಲಿಂಗ್ ರೇಟ್  ಮತ್ತು 550 nits ಬ್ರೈಟ್ನೆಸ್ ಹೊಂದಿದೆ. ಹುಡ್ ಅಡಿಯಲ್ಲಿ, A55 ಅನ್ನು Helio G35  ಚಿಪ್‌ಸೆಟ್‌ನಿಂದ ನಡೆಸಲಾಗುತ್ತದೆ. 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಅನ್ನು ಹೊಂದಿದೆ. ಸ್ಟೋರೇಜ್ ಅನ್ನು ಮತ್ತಷ್ಟು ಹೆಚ್ಚಿಸಲು, ಫೋನ್ ಮೈಕ್ರೊ ಎಸ್ಡಿ ಕಾರ್ಡ್ ಅನ್ನು ಸಪೋರ್ಟ್ ಮಾಡುತ್ತದೆ. 

OPPO A55 ಕ್ಯಾಮೆರಾ :
ಸ್ಮಾರ್ಟ್‌ಫೋನ್ (Smartphone) ಆಂಡ್ರಾಯ್ಡ್ 11 ಅನ್ನು ಔಟ್ ಆಫ್ ದಿ ಬಾಕ್ಸ್  ColorOS 11.1 ನೊಂದಿಗೆ ಬೂಟ್ ಮಾಡುತ್ತದೆ. ಫೋನ್ ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ.  ಇದರಲ್ಲಿ 50MP ಪ್ರಾಥಮಿಕ ಕ್ಯಾಮೆರಾ, 2MP ಡೆಪ್ತ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಲೆನ್ಸ್ ಇರುತ್ತದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಸ್ಮಾರ್ಟ್ಫೋನ್ 16MP ಕ್ಯಾಮೆರಾವನ್ನು ಹೊಂದಿದೆ . 

ಇದನ್ನೂ ಓದಿ : Motorola's Tablet: ಕಡಿಮೆ ಬೆಲೆಯಲ್ಲಿ ಸಿಗಲಿದೆ ಹಲವು ವೈಶಿಷ್ಟ್ಯಗಳು

OPPO A55 ಬ್ಯಾಟರಿ :
ಈ ಫೋನ್  5000mAh ಬ್ಯಾಟರಿ ಯನ್ನು ಒಳಗೊಂಡಿದೆ.  ಅದು 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಒಪ್ಪೋ A55 ಡ್ಯುಯಲ್-ಸಿಮ್ ಬೆಂಬಲವನ್ನು ಹೊಂದಿದೆ.  Wi-Fi 802.11 b/g/n/ac, ಬ್ಲೂಟೂತ್ 5.0, GPS, 3.5mm ಹೆಡ್‌ಫೋನ್ ಜ್ಯಾಕ್ ಮತ್ತು USB ಟೈಪ್-ಸಿ ಪೋರ್ಟ್ ಇದೆ.  ಸ್ಮಾರ್ಟ್ ಫೋನಿನಲ್ಲಿ ಸೈಡ್ ಮೌಂಟೆಡ್ ಫಿಂಗರ್ ಪ್ರಿಂಟ್ ಸೆನ್ಸರ್ ಮತ್ತು AI ಫೇಸ್ ಅನ್ ಲಾಕ್ ಇದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News