Free OTT: ಈ ಅಗ್ಗದ ರೀಚಾರ್ಜ್ ಯೋಜನೆಗಳಲ್ಲಿ ವರ್ಷವಿಡೀ ಫ್ರೀ ಆಗಿ ಸಿಗುತ್ತೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್
Free Netflix and Amazon Prime: ನೀವು ಅಗ್ಗದ ರೀಚಾರ್ಜ್ ರೀಚಾರ್ಜ್ ಯೋಜನೆಗಳ ಜೊತೆಗೆ ಕೆಲವು ಹೆಚ್ಚುವರಿ ಪ್ರಯೋಜನಗಳನ್ನು ಬಯಸಿದರೆ, ಇಂದು ನಾವು ನಿಮಗಾಗಿ ಅಂತಹ ಯೋಜನೆಗಳನ್ನು ತಂದಿದ್ದೇವೆ. ಇದರಲ್ಲಿ ನೀವು ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ಅನ್ನು ವರ್ಷವಿಡೀ ಉಚಿತವಾಗಿ ಆನಂದಿಸಬಹುದು.
Free Netflix and Amazon Prime: ನಿಮ್ಮ ಅಸ್ತಿತ್ವದಲ್ಲಿರುವ ಮೊಬೈಲ್ ಪ್ಲಾನ್‌ನಲ್ಲಿ ಮನರಂಜನೆ ಸೇರಿದಂತೆ ಇತರ ಪ್ರಯೋಜನಗಳ ಜೊತೆಗೆ ಹೆಚ್ಚಿನ ವೇಗದ ಇಂಟರ್ನೆಟ್ ಮತ್ತು ಅನಿಯಮಿತ ಕರೆಯನ್ನು ನೀವು ಬಯಸಿದರೆ, ಇಂದು ನಾವು ನಿಮಗಾಗಿ ಜಿಯೋದ ಕೆಲವು ಅತ್ಯುತ್ತಮ ಪೋಸ್ಟ್‌ಪೇಯ್ಡ್ ಯೋಜನೆಗಳನ್ನು ತಂದಿದ್ದೇವೆ. ವಾಸ್ತವವಾಗಿ, ಈ ಯೋಜನೆಗಳಲ್ಲಿ, ನೀವು ಇತರ ಯೋಜನೆಗಳಲ್ಲಿ ನೀಡಲಾದ ಅಸ್ತಿತ್ವದಲ್ಲಿರುವ ಪ್ರಯೋಜನಗಳನ್ನು ಮಾತ್ರ ಪಡೆಯುವುದಿಲ್ಲ, ಅದರ ಜೊತೆಗೆ ನೆಟ್‌ಫ್ಲಿಕ್ಸ್ ಮತ್ತು ಅಮೆಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆಯ ಪ್ರಯೋಜನವನ್ನೂ ಪಡೆಯಲಿದ್ದೀರಿ.
ಇದು ಅತ್ಯಂತ ಅಗ್ಗದ ಯೋಜನೆ:
ಜಿಯೋದ 399 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ ನಿಮಗೆ ಪ್ರತಿ ತಿಂಗಳು 75GB ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಉಚಿತ ಎಸ್ಎಂಎಸ್ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಯೋಜನೆಯು Netflix, Amazon Prime Video ಮತ್ತು Disney + Hotstar ಗೆ ಒಂದು ವರ್ಷದ ಉಚಿತ ಚಂದಾದಾರಿಕೆಯೊಂದಿಗೆ ಬರುತ್ತದೆ.
ಇದನ್ನೂ ಓದಿ- ಸಾಕೆಟ್‌ನಲ್ಲಿ ಈ ಡಿವೈಸ್ ಫಿಕ್ಸ್ ಮಾಡಿದ್ರೆ ಕರೆಂಟ್ ಇಲ್ಲದಿದ್ರೂ ವೈ-ಫೈ ಕಾರ್ಯನಿರ್ವಹಿಸುತ್ತೆ!
ಜಿಯೋದ 599 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯ ಪ್ರಯೋಜನಗಳು:
ಈ ಯೋಜನೆಯು ನಿಮಗೆ 100GB ಇಂಟರ್ನೆಟ್, 100 ದೈನಂದಿನ ಎಸ್ಎಂಎಸ್ ಮತ್ತು ಅನಿಯಮಿತ ಧ್ವನಿ ಕರೆಗಳನ್ನು ನೀಡುತ್ತದೆ. ಈ ಯೋಜನೆಯಲ್ಲಿ ನಿಮಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಒಂದು ವರ್ಷದ ಉಚಿತ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ.
ಜಿಯೋದ 799 ರೂ.ಗಳ ಪೋಸ್ಟ್‌ಪೇಯ್ಡ್ ಪ್ಲಾನ್:
ಜಿಯೋದ 799 ರೂ. ಬೆಲೆಯ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ 150GB ಡೇಟಾ ಮತ್ತು 200GB ರೋಲ್‌ಓವರ್ ಡೇಟಾವನ್ನು ನೀಡಲಾಗುತ್ತಿದೆ. ಇದು ಕುಟುಂಬ ಯೋಜನೆಯಾಗಿದ್ದು, ಇದರಲ್ಲಿ ಎರಡು ಹೆಚ್ಚುವರಿ ಸಿಮ್ ಕಾರ್ಡ್‌ಗಳು, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಕರೆ ಮತ್ತು ಅನಿಯಮಿತ ಎಸ್ಎಂಎಸ್ ಅನ್ನು ಒದಗಿಸಲಾಗುತ್ತಿದೆ. ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನ ಚಂದಾದಾರಿಕೆಯನ್ನು ಸಹ ನೀಡಲಾಗುತ್ತಿದೆ.
ಇದನ್ನೂ ಓದಿ- ಚಾರ್ಜರ್ ಬಿಡಿ! ನಿಮ್ಮ ಬಟ್ಟೆಯಿಂದಲೇ ಚಾರ್ಜ್ ಆಗುತ್ತೆ ಸ್ಮಾರ್ಟ್‌ಫೋನ್
ಇದು ಅತ್ಯಂತ ದುಬಾರಿ ಯೋಜನೆ:
ಜಿಯೋದ ಒಂದು ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ OTT ಯೋಜನೆಗಳ ಪಟ್ಟಿಯಲ್ಲಿ 999 ರೂ.ಗಳ ಪ್ಲಾನ್ ಅತ್ಯಂತ ದುಬಾರಿ ಯೋಜನೆಯಾಗಿದೆ. 999 ರೂ.ಗಳಿಗೆ ಲಭ್ಯವಿರುವ ಈ ಪೋಸ್ಟ್‌ಪೇಯ್ಡ್ ಯೋಜನೆಯಲ್ಲಿ 200GB ಹೈ ಸ್ಪೀಡ್ ಡೇಟಾ, 500GB ರೋಲ್‌ಓವರ್ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಎಸ್ಎಂಎಸ್ ಸೌಲಭ್ಯ ಮತ್ತು ಮೂರು ಸಿಮ್ ಕಾರ್ಡ್‌ಗಳನ್ನು ನೀಡಲಾಗುತ್ತಿದೆ. ಈ ಯೋಜನೆಗಳು Netflix, Amazon Prime Video ಮತ್ತು Disney + Hotstar ನ ಸದಸ್ಯತ್ವದೊಂದಿಗೆ ಬರುತ್ತವೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.