ಸಾಕೆಟ್‌ನಲ್ಲಿ ಈ ಡಿವೈಸ್ ಫಿಕ್ಸ್ ಮಾಡಿದ್ರೆ ಕರೆಂಟ್ ಇಲ್ಲದಿದ್ರೂ ವೈ-ಫೈ ಕಾರ್ಯನಿರ್ವಹಿಸುತ್ತೆ!

Wi-Fi Router Tips: ಪವರ್ ಕಟ್ ಆದ ನಂತರ ವೈ-ಫೈ ಕೂಡ ಆಫ್ ಆಗುತ್ತೆ. ಇದರಿಂದಾಗಿ ಬಹುತೇಕ ಸಂದರ್ಭಗಳಲ್ಲಿ ಮನೆಯಲ್ಲಿ ವೈ-ಫೈ ಇದ್ದರೂ ಸಹ ನಮಗೆ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದರೆ, ಸಾಕೆಟ್‌ನಲ್ಲಿ ಒಂದು ಅಗ್ಗದ ಸಾಧನವನ್ನು ಅಳವಡಿಸುವುದರಿಂದ ನಿಮ್ಮ ಈ ಸಮಸ್ಯೆಗೆ ಪರಿಹಾರ ಸಿಗಲಿದೆ. ಯಾವುದಾ ಡಿವೈಸ್ ಎಂದು ತಿಳಿಯೋಣ...

Written by - Yashaswini V | Last Updated : Oct 27, 2022, 12:58 PM IST
  • ಮನೆಯಿಂದ ಕೆಲಸ ಮಾಡಲು ವೈ-ಫೈ ಬಹಳ ಮುಖ್ಯ.
  • ಆದರೆ ವಿದ್ಯುತ್ ಕಡಿತವಾದಾಗ ವೈ-ಫೈ ಕೂಡ ಆಫ್ ಆಗುತ್ತದೆ.
  • ಈ ಸಂದರ್ಭದಲ್ಲಿ ಕೆಲಸ ಸ್ಥಗಿತಗೊಳ್ಳುವುದರಿಂದ ನೀವು ಸಮಸ್ಯೆ ಎದುರಿಸುವಂತಾಗುತ್ತದೆ
ಸಾಕೆಟ್‌ನಲ್ಲಿ ಈ ಡಿವೈಸ್ ಫಿಕ್ಸ್  ಮಾಡಿದ್ರೆ ಕರೆಂಟ್ ಇಲ್ಲದಿದ್ರೂ ವೈ-ಫೈ ಕಾರ್ಯನಿರ್ವಹಿಸುತ್ತೆ! title=
Wifi router tips

Wi-Fi Router Tips: ಕರೋನಾದಿಂದಾಗಿ ಎಲ್ಲೆಡೆ ವರ್ಕ್ ಫ್ರಮ್ ಹೋಂ ಸಂಸ್ಕೃತಿ ಹೆಚ್ಚಾಗಿದೆ. ಮನೆಯಿಂದ ಕೆಲಸ ಮಾಡಲು ವೈ-ಫೈ ಬಹಳ ಮುಖ್ಯ. ಆದರೆ ವಿದ್ಯುತ್ ಕಡಿತವಾದಾಗ ವೈ-ಫೈ ಕೂಡ ಆಫ್ ಆಗುತ್ತದೆ.  ಪವರ್ ಆನ್ ಆದ ಕೆಲವೇ ನಿಮಿಷಗಳಲ್ಲಿ ವೈ-ಫೈ ಮತ್ತೆ ಆನ್ ಆಗುತ್ತದೆ.  ಇದರಿಂದಾಗಿ ಕೆಲಸ ಮಾಡಲು ತೊಂದರೆ ಆಗುತ್ತದೆ. ನೀವೂ ಸಹ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ, ಒಂದು ಸಣ್ಣ ಕೆಲಸ ಮಾಡುವುದರಿಂದ ನೀವು ಈ ಸಮಸ್ಯೆಗೆ ಪರಿಹಾರ ಪಡೆಯಬಹುದು. 

ವಾಸ್ತವವಾಗಿ, ಪವರ್ ಕಟ್ ಆದ ಸಂದರ್ಭದಲ್ಲಿ Wi-Fi  ಅಡಚಣೆಯನ್ನು ತಪ್ಪಿಸಲು ಅನೇಕ ಜನರು ಇನ್ವರ್ಟರ್ ಅನ್ನು ಬಳಸುತ್ತಾರೆ. ಆದರೆ ಎಲ್ಲರಿಗೂ ಅಷ್ಟು ಸೌಕರ್ಯವಿರುವುದಿಲ್ಲ. ಆದರೆ ನಿಮ್ಮ ಈ ಸಮಸ್ಯೆಯಿಂದ ಪಾರಾಗಲು ಒಂದು ಡಿವೈಸ್ ನಿಮಗೆ ಸಹಾಯಕವಾಗಬಹುದು. ಇದು ವೈ-ಫೈ ರೂಟರ್‌ನೊಂದಿಗೆ ಕಾರ್ಯನಿರ್ವಹಿಸುವ ಮಿನಿ ಯುಪಿಎಸ್ ಆಗಿದೆ. ಈ ಸಾಧನದ ಬಗ್ಗೆ ತಿಳಿಯೋಣ...

ಇದನ್ನೂ ಓದಿ- ಚಾರ್ಜರ್ ಬಿಡಿ! ನಿಮ್ಮ ಬಟ್ಟೆಯಿಂದಲೇ ಚಾರ್ಜ್ ಆಗುತ್ತೆ ಸ್ಮಾರ್ಟ್‌ಫೋನ್

ರೂಟರ್‌ಗಾಗಿ ಜಿಂಕ್ ಯುಪಿಎಸ್:
ಈ ಸಾಧನದ ಹೆಸರು Zinq UPS for Router. ಅದರ ಬೆಲೆ 2,999 ರೂ. ಆಗಿದ್ದರೂ, ಇದನ್ನು ಅಮೆಜಾನ್ ನಿಂದ ಅಗ್ಗವಾಗಿ ಖರೀದಿಸಬಹುದು. ಅಮೆಜಾನ್ನಲ್ಲಿ ಇದನ್ನು 53% ರಿಯಾಯಿತಿಯೊಂದಿಗೆ 1,399 ರೂ.ಗಳಿಗೆ ಖರೀದಿಸಬಹುದು. ಇದು Wi-Fi ರೂಟರ್ ಬ್ರಾಡ್‌ಬ್ಯಾಂಡ್ ಮೋಡೆಮ್ ಆಗಿದೆ. ಇದು ಸಾಕಷ್ಟು ಲೈಟ್ ಮತ್ತು ಸಾಂದ್ರವಾಗಿರುತ್ತದೆ.

ಇದನ್ನೂ ಓದಿ- WhatsApp Rules: ವಾಟ್ಸಾಪ್‌ನಲ್ಲಿ ಮಿಸ್ ಆಗಿ ಇಂತಹ ಸಂದೇಶ ಕಳುಹಿಸಿದರೂ ಜೈಲು ಪಾಲಾಗುತ್ತೀರಿ, ಹುಷಾರ್!

ರೂಟರ್‌ಗಾಗಿ ಜಿಂಕ್ ಯುಪಿಎಸ್: ಇದು ಹೇಗೆ ಕೆಲಸ ಮಾಡುತ್ತದೆ?
ಇದು ಮಿನಿ ಯುಪಿಎಸ್ ಆಗಿದೆ, ಇದು 12V ವೈಫೈ ರೂಟರ್ ಬ್ರಾಡ್‌ಬ್ಯಾಂಡ್ ಮೋಡೆಮ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ವಿದ್ಯುತ್ ಸ್ಥಗಿತಗೊಂಡ ನಂತರ ಸುಮಾರು 4 ಗಂಟೆಗಳ ಪವರ್ ಬ್ಯಾಕಪ್ ನೀಡುತ್ತದೆ. ಇದು ನಿಮ್ಮ ಅಸ್ತಿತ್ವದಲ್ಲಿರುವ ಅಡಾಪ್ಟರ್‌ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ ಚಾರ್ಜಿಂಗ್ ತನ್ನ UPS ಬ್ಯಾಟರಿಯನ್ನು ಬ್ಯಾಟರಿ ನಿರ್ವಹಣೆಯೊಂದಿಗೆ ಸ್ವಯಂಚಾಲಿತವಾಗಿ ಚಾರ್ಜ್ ಮಾಡುತ್ತದೆ. ಇದರ ಅನುಸ್ಥಾಪನೆಯು ಸಾಕಷ್ಟು ಸುಲಭವಾಗಿದೆ. ಅಲ್ಲದೆ ಇದು ಒಂದು ವರ್ಷದ ವಾರಂಟಿಯೊಂದಿಗೆ ಬರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

Trending News