WhatsApp down : ವಾಟ್ಸಪ್‌ಗೂ ತಟ್ಟಿತು ಗ್ರಹಣ ದೋಷ.. ಸೇವೆಗಳು ಸ್ಥಗಿತ..!

ವಾಟ್ಸಾಪ್ ಸೇವೆಗಳು ಸ್ಥಗಿತಗೊಂಡಿವೆ. ಬಳಕೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೆಸೆಜ್‌ಗಳು ರವಾನೆಯಾಗುತ್ತಿಲ್ಲ ಇದರಿಂದ ಜನರು ಪರದಾಡುತ್ತಿದ್ದಾರೆ. ಅಲ್ಲದೆ ನೆಟ್ ವರ್ಕ್ ಪ್ರಾಬ್ಲಮ್ ಇರ್ಬೋದು ಅಂತ ಚೆಕ್ ಮಾಡಿಕೊಳ್ಳುತ್ತಾರೆ. ನೆಟ್ ವರ್ಕ್ ಮಾರ್ಕ್‌ಗಳನ್ನು ಚೆಕ್ ಮಾಡುತ್ತಿದ್ದಾರೆ. ಮೆಸೆಜ್‌ಗಳು ಸೆಂಡ್ ಆಗುತ್ತಿಲ್ಲ.

Written by - Krishna N K | Last Updated : Oct 25, 2022, 01:40 PM IST
  • ವಾಟ್ಸಾಪ್ ಸೇವೆಗಳು ಸ್ಥಗಿತಗೊಂಡಿವೆ
  • ಬಳಕೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ
  • ಮೆಸೆಜ್‌ಗಳು ರವಾನೆಯಾಗುತ್ತಿಲ್ಲ ಇದರಿಂದ ಜನರು ಪರದಾಡುತ್ತಿದ್ದಾರೆ
WhatsApp down : ವಾಟ್ಸಪ್‌ಗೂ ತಟ್ಟಿತು ಗ್ರಹಣ ದೋಷ.. ಸೇವೆಗಳು ಸ್ಥಗಿತ..! title=

ಬೆಂಗಳೂರು :  ವಾಟ್ಸಾಪ್ ಸೇವೆಗಳು ಸ್ಥಗಿತಗೊಂಡಿವೆ. ಬಳಕೆದಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮೆಸೆಜ್‌ಗಳು ರವಾನೆಯಾಗುತ್ತಿಲ್ಲ ಇದರಿಂದ ಜನರು ಪರದಾಡುತ್ತಿದ್ದಾರೆ. ಅಲ್ಲದೆ ನೆಟ್ ವರ್ಕ್ ಪ್ರಾಬ್ಲಮ್ ಇರ್ಬೋದು ಅಂತ ಚೆಕ್ ಮಾಡಿಕೊಳ್ಳುತ್ತಾರೆ. 

ಜನಪ್ರೀಯ ಮೆಸೆಂಜ್‌ರ್‌ಗಳಲ್ಲಿ ಒಂದಾದ ವಾಟ್ಸಾಪ್‌ ಸೇವೆಗಳು ಸುಮಾರು 12:30 ರಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಸಂದೇಶಗಳು ಸೆಂಡ್ ಆಗುತ್ತಿಲ್ಲ. ಅಲ್ಲದೆ, ಸಾವಿರಾರು ಜನರು ವಾಟ್ಸಾಪ್ ಕೆಲಸ ಮಾಡುತ್ತಿಲ್ಲ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಪ್ರಪಂಚದಾದ್ಯಂತ ಅರ್ಧಗಂಟೆಯಿಂದ ವಾಟ್ಸಾಪ್ ಸೇವೆಗಳು ಸ್ಥಗಿತಗೊಂಡಿವೆ.

ಇದನ್ನೂ ಓದಿ: ಬುದ್ದಿ ತೋರಿದ ಭಾರತೀಯರು : ಗೂಗಲ್‌ನಲ್ಲಿ ಹೆಚ್ಚಿತು ರಿಷಿ ಸುನಕ್‌ ಜಾತಿ ಹುಡಕಾಟ..!

ಇನ್ನು ಮೆಟಾ-ಮಾಲೀಕತ್ವದ WhatsApp ಸೇವೆಗಳು ಸ್ಥಗಿತಗೊಂಡ ಹಿನ್ನೆಲೆ ಮೆಟಾ ವಕ್ತಾರರು 'ಸಾಧ್ಯವಾದಷ್ಟು ಬೇಗ' ಸೇವೆಗಳನ್ನು ಪುನಃಸ್ಥಾಪಿಸಲು ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇನ್ನು ವಾಟ್ಸಾಪ್‌ ಬಳಕೆದಾರು ತಮ್ಮ ಫೋನ್‌ ನೆಟ್‌ವರ್ಕ್‌ ಸಮಸ್ಯೆ ಏನಾದ್ರೂ ಇದ್ಯಾ ಅಂತ ನೋಡಿಕೊಳ್ಳುತ್ತಿದ್ದಾರೆ. ಪದೇ ಪದೇ ಫೋನ್‌ ಸ್ವಿಚ್‌ ಆಪ್‌ ಆಂಡ್‌ ಆನ್‌  ಮಾಡುತ್ತಿದ್ದಾರೆ.  ಈ ಮಧ್ಯ, ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌ಗಳು ಹೆಚ್ಚಾಗುತ್ತಿವೆ. ಕೆಲ ನೆಟ್ಟಿಗರು ಮೀಮ್‌ಗಳನ್ನು ಹಂಚಿಕೊಂಡು #Whatsappdown ಎಂಬ ಹ್ಯಾಷ್‌ ಟ್ಯಾಗ್‌ ಬಳಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News