Flipkart Shopping Sale: ಮೊದಲೆಲ್ಲಾ ಯಾವುದೇ ಒಂದು ವಸ್ತುವನ್ನು ಖರೀದಿಸಲು ಸಹ ಮಾರುಕಟ್ಟೆಗೆ ಹೋಗಬೇಕಿತ್ತು. ತಂತ್ರಜ್ಞಾನ ಬದಲಾದಂತೆ ಎಲ್ಲವೂ ಕೂಡ ನಮ್ಮ ಬೆರಳ ತುದಿಯಲ್ಲಿಯೇ ಲಭ್ಯವಾಗುತ್ತಿದೆ. ಇ-ಕಾಮರ್ಸ್ ವೆಬ್‌ಸೈಟ್‌ಗಳು ಬಂದ ನಂತರ ಜನರು ಆನ್‌ಲೈನ್‌ನಲ್ಲಿಯೇ ಹೆಚ್ಚು ಶಾಪಿಂಗ್ ಮಾಡುತ್ತಾರೆ.  ಭಾರತದ ಅತಿದೊಡ್ಡ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಒಂದಾಗಿರುವ ಫ್ಲಿಪ್‌ಕಾರ್ಟ್‌ನಿಂದಲೂ ಸಹ ನೀವು ನಿಮ್ಮ ಅಗತ್ಯ ವಸ್ತುಗಳನ್ನು ನೀವಿರುವ ಜಾಗಕ್ಕೆ ಆರ್ಡರ್ ಮಾಡಬಹುದು. ಅದೂ ಕೂಡ ಫ್ಲಿಪ್‌ಕಾರ್ಟ್‌ನಿಂದ ನೀವು ಉಚಿತವಾಗಿ ಶಾಪಿಂಗ್ ಮಾಡಬಹುದು ಎಂದು ನಿಮಗೆ ತಿಳಿದಿದೆಯೇ? ಅಯ್ಯೋ, ಈ ದುಬಾರಿ ದುನಿಯಾದಲ್ಲಿ ಉಚಿತವಾಗಿ ಶಾಪಿಂಗ್ ಮಾಡಲು ಹೇಗೆ ಸಾಧ್ಯ ಎಂದು ಯೋಚಿಸುತ್ತೀದ್ದೀರಾ... ಇಲ್ಲಿದೆ ಅದರ ಸುಲಭ ವಿಧಾನ.


COMMERCIAL BREAK
SCROLL TO CONTINUE READING

ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀ ಶಾಪಿಂಗ್ ಮಾಡುವುದು ಹೇಗೆ?
ಫ್ಲಿಪ್‌ಕಾರ್ಟ್‌ನಲ್ಲಿ ಉಚಿತ ಶಾಪಿಂಗ್ ಎಂದೊಡನೆ ನೀವು ನಿಮ್ಮಿಷ್ಟದ ಎಲ್ಲಾ ಸರಕುಗಳನ್ನು ಉಚಿತವಾಗಿ ಕೊಳ್ಳಬಹುದು ಎಂದರ್ಥವಲ್ಲ. ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ ಕೆಲವು ಆಯ್ದ ಸರಕುಗಳ ಮೇಲೆ ಈ ಭರ್ಜರಿ ಕೊಡುಗೆಯನ್ನು ನೀಡಲಾಗುತ್ತಿದೆ. ಇದಕ್ಕಾಗಿ ನೀವು ಸೂಪರ್‌ಕಾಯಿನ್ ಎಂಬ ಆಯ್ಕೆಯನ್ನು ಬಳಸಬೇಕಾಗುತ್ತದೆ. ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್‌ಗಳಿಂದ ಉಚಿತವಾಗಿ ಶಾಪಿಂಗ್ ಮಾಡುವಾಗ, ನೀವು ಕೇವಲ 1 ರೂಪಾಯಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ. ವಿಶೇಷವೆಂದರೆ ನೀವು ಈ ಒಂದು ರೂಪಾಯಿಯನ್ನು ಸಹ ಡೆಲಿವರಿ ಸಮಯದಲ್ಲಿ ಪಾವತಿಸಬಹುದಾಗಿದೆ. 


ಲಭ್ಯವಿರುವ ಮಾಹಿತಿಗಳ ಪ್ರಕಾರ, ಸದ್ಯ ಫ್ಲಿಪ್‌ಕಾರ್ಟ್‌ನಿಂದ ನೀವು ಎಸಿ, ಫ್ರೀಜ್, ಟಿವಿ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸೂಪರ್‌ಕಾಯಿನ್‌ಗಳಿಂದ ಕೇವಲ ಒಂದು ರೂಪಾಯಿ ಪಾವಟಿಸುವ ಮೂಲಕ ಫ್ರೀ ಆಗಿ ಆರ್ಡರ್ ಮಾಡಬಹುದಾಗಿದೆ. ಉಳಿದ ಹಣವನ್ನು ಸೂಪರ್‌ಕಾಯಿನ್‌ನಿಂದ ಪಾವತಿಸಬೇಕಾಗುತ್ತದೆ. ಉದಾಹರಣೆಗೆ ನೀವು ಒಂದು ಸಾವಿರ ರೂಪಾಯಿ ಮೌಲ್ಯದ ಉತ್ಪನ್ನವನ್ನು ಖರೀದಿಸಿದ್ದೀರಿ ಎಂದು ಭಾವಿಸೋಣ. ಅದಕ್ಕಾಗಿ ನೀವು ಕೇವಲ ಒಂದು ರೂಪಾಯಿಯನ್ನು ಪಾವತಿಸಿದರೆ, ಇನ್ನುಳಿದ 999 ರೂ.ಗಳನ್ನು ಸೂಪರ್‌ಕಾಯಿನ್‌ಗಳ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಹಾಗಿದ್ದರೆ, ಏನೀ ಸೂಪರ್‌ಕಾಯಿನ್‌ಗಳು, ಸೂಪರ್‌ಕಾಯಿನ್‌ಗಳನ್ನು ಪಡೆಯುವುದು ಹೇಗೆ ಎಂದು ತಿಳಿಯೋಣ.


ಇದನ್ನೂ ಓದಿ- ನಿಮ್ಮ ಕನಸಿನ Maruti Brezza SUV ಅನ್ನು ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ


ಏನಿದು ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್? 
ಜನಪ್ರಿಯ ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್ ಕೆಲವು ವರ್ಷಗಳ ಹಿಂದೆಯೇ ತನ್ನ ಗ್ರಾಹಕರಿಗಾಗಿ ಸೂಪರ್‌ಕಾಯಿನ್ ಅನ್ನು ಪ್ರಾರಂಭಿಸಿತು. ಈ ಸೂಪರ್‌ಕಾಯಿನ್ ಸಹಾಯದಿಂದ ನೀವು  ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರಾಗಬಹುದು. ಇದರ ಪ್ರಮುಖ ಪ್ರಯೋಜನವೆಂದರೆ ಇದರಿಂದ ನೀವು ಯಾವುದೇ ಸೇಲ್ ನಲ್ಲಿ ಮೊದಲ ಪ್ರವೇಶವನ್ನು ಪಡೆಯಬಹುದು. ಮಾತ್ರವಲ್ಲ, ಉಚಿತ ಡೆಲಿವರಿ ಕೂಡ ಲಭ್ಯವಿರಲಿದೆ. ಅಷ್ಟೇ ಅಲ್ಲ, ಈ  ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ ಮೂಲಕ ನಿಮ್ಮ ಮೊಬೈಲ್ ರೀಚಾರ್ಜ್ ಕೂಡ ಸಾಧ್ಯವಾಗುತ್ತದೆ. 


ಫ್ಲಿಪ್‌ಕಾರ್ಟ್ ಸೂಪರ್‌ಕಾಯಿನ್ ಪ್ರಯೋಜನವನ್ನು ಪಡೆಯಲು ನೀವು ಯಾವಾಗಲೂ ಫ್ಲಿಪ್‌ಕಾರ್ಟ್‌ನಲ್ಲಿ ಶಾಪಿಂಗ್ ಮಾಡುತ್ತಿರಬೇಕು. 400  ರೂ.ಮೌಲ್ಯದ ಸರಕುಗಳ ಖರೀದಿಯ ಮೇಲೆ 12 ಸೂಪರ್‌ಕಾಯಿನ್‌ಗಳು ಲಭ್ಯವಾಗುತ್ತವೆ. ಅಂದರೆ 100 ರೂಪಾಯಿಗಳ ಆರ್ಡರ್‌ನಲ್ಲಿ 4 ಸೂಪರ್‌ಕಾಯಿನ್‌ಗಳು ಲಭ್ಯವಿವೆ. ಅದೇ ರೀತಿ, 10,000 ರೂ.ಗಳ ಶಾಪಿಂಗ್‌ನಲ್ಲಿ 100  ಸೂಪರ್‌ಕಾಯಿನ್‌ಗಳು ಲಭ್ಯವಾಗಲಿವೆ. ಈ ಸೂಪರ್‌ಕಾಯಿನ್‌ಗಳ ಸಹಾಯದಿಂದ ನೀವು ಫ್ರೀ ಶಾಪಿಂಗ್ ಮಾಡಲು ಕೂಡ ಸಾಧ್ಯವಾಗುತ್ತದೆ. 


ಇದನ್ನೂ ಓದಿ- ಅಗ್ಗದ ದರದಲ್ಲಿ Redmi ಹೊರ ತಂದಿದೆ 32 ಇಂಚಿನ ಸ್ಮಾರ್ಟ್ ಟಿವಿ


ಸೂಪರ್‌ಕಾಯಿನ್ ಅನ್ನು ಹೇಗೆ ಖರೀದಿಸುವುದು? ಇದಕ್ಕೆ ತಗಲುವ ವೆಚ್ಚವೆಷ್ಟು?
ಒಂದು ಸೂಪರ್‌ಕಾಯಿನ್‌ನ ಬೆಲೆ ಕೇವಲ 1 ರೂಪಾಯಿ. ಅದನ್ನು ಖರೀದಿಸುವ ಹಂತ-ಹಂತದ ಪ್ರಕ್ರಿಯೆ ಇಲ್ಲಿದೆ... 
ಹಂತ 1: ಸೂಪರ್‌ಕಾಯಿನ್ ಪಡೆಯಲು ಮೊದಲು Google Play Store ಗೆ ಹೋಗಿ ಅಲ್ಲಿ ಫ್ಲಿಪ್‌ಕಾರ್ಟ್ ಅನ್ನು ಇನ್ಸ್ಟಾಲ್ ಮಾಡಿ.  
ಹಂತ 2: ಬಳಿಕ ಅಪ್ಲಿಕೇಶನ್ ತೆರೆದು,  ಫ್ಲಿಪ್‌ಕಾರ್ಟ್‌ನಲ್ಲಿ ಖಾತೆಯನ್ನು ರಚಿಸಿ.
ಹಂತ 3: ಖಾತೆ ಆಯ್ಕೆಯು ಕಾಣಿಸಿಕೊಳ್ಳುತ್ತದೆ, ವರ್ಗಗಳ ಮೇಲೆ ಕ್ಲಿಕ್ ಮಾಡಿ.
ಹಂತ 4: Supercoin ನ ಆಯ್ಕೆಯು ಕೆಳಭಾಗದಲ್ಲಿ ಕಾಣಿಸುತ್ತದೆ.
ಹಂತ 5: ಪುಟ ತೆರೆದ ತಕ್ಷಣ, ನೀವು 1 ರೂ. ಪಾವತಿಸಿ ಸೂಪರ್ ಸ್ಟೋರ್ ಆಯ್ಕೆಯನ್ನು ಪಡೆಯುತ್ತೀರಿ ಎಂಬ ಆಯ್ಕೆ ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
ಹಂತ 6: ನೀವು 500 ಸೂಪರ್‌ಕಾಯಿನ್‌ಗಳನ್ನು ಸೇರಿಸಿದ್ದೀರಿ ಎಂದು ಭಾವಿಸೋಣ. ಯಾವುದೇ ವಸ್ತುವು ರೂ.501 ಆಗಿದ್ದರೆ, ನೀವು ಅದನ್ನು ಒಂದು ರೂಪಾಯಿ ಪಾವತಿಸಿ ಆರ್ಡರ್ ಮಾಡಬಹುದು. ಉಳಿದ ಹನವನ್ನು ಸೂಪರ್‌ಕಾಯಿನ್ ಮೂಲಕ ಡಿಡಕ್ಟ್ ಮಾಡಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.