ಅಗ್ಗದ ದರದಲ್ಲಿ Redmi ಹೊರ ತಂದಿದೆ 32 ಇಂಚಿನ ಸ್ಮಾರ್ಟ್ ಟಿವಿ

Redmi ಬ್ರ್ಯಾಂಡ್ Amazon FireOS ಚಾಲಿತ ಸ್ಮಾರ್ಟ್ ಟಿವಿಯನ್ನ ಬಿಡುಗಡೆ ಮಾಡಿದೆ. ಇದು Mi.com ಮತ್ತು Amazon ಇಂಡಿಯಾ ಮೂಲಕ ಮಾರಾಟವಾಗಲಿದೆ. 

Written by - Ranjitha R K | Last Updated : Mar 14, 2023, 03:26 PM IST
  • Redmi ಬ್ರ್ಯಾಂಡ್ ಟಿವಿ ಬಿಡುಗಡೆ
  • Redmi Smart Fire TV 32 ವಿಶೇಷಣಗಳು
  • ಅಗ್ಗದ ಬೆಲೆಗೆ ಮಾರಾಟವಾಗಲಿದೆ ಈ ಟಿವಿ
ಅಗ್ಗದ ದರದಲ್ಲಿ Redmi ಹೊರ ತಂದಿದೆ 32 ಇಂಚಿನ ಸ್ಮಾರ್ಟ್ ಟಿವಿ  title=

ಬೆಂಗಳೂರು : Xiaomi ಇಂದು ಅಂದರೆ ಮಾರ್ಚ್ 14 ರಂದು Redmi ಬ್ರ್ಯಾಂಡ್ Amazon FireOS ಚಾಲಿತ ಸ್ಮಾರ್ಟ್ ಟಿವಿಯನ್ನ ಬಿಡುಗಡೆ ಮಾಡಿದೆ. ಸ್ಮಾರ್ಟ್ ಟಿವಿಯನ್ನು ರೆಡ್ಮಿ ಸ್ಮಾರ್ಟ್ ಫೈರ್ ಟಿವಿ ಎಂದು ಕರೆಯಲಾಗುತ್ತದೆ. ಟಿವಿ ಪ್ರಸ್ತುತ 32 ಇಂಚಿನ ರೂಪಾಂತರದೊಂದಿಗೆ ಬಿಡುಗಡೆಯಾಗಿದೆ. ಇದು Xiaomi ಬಿಡುಗಡೆ ಮಾಡುತ್ತಿರುವ ಮೊದಲ FireOS ಟಿವಿ ಅಲ್ಲ. ಈ ಹಿಂದೆ, ಕಂಪನಿಯು ತನ್ನ ಕೆಲವು ಮಾದರಿಗಳನ್ನು ಯುರೋಪ್‌ನಲ್ಲಿಯೂ ಬಿಡುಗಡೆ ಮಾಡಿದೆ. ಆದರೆ ಅವೆಲ್ಲವೂ  Xiaomi ಬ್ರಾಂಡ್‌ಗೆ ಸೇರಿದ್ದಾಗಿವೆ. 

Redmi Smart Fire TV 32 ವಿಶೇಷಣಗಳು :
Redmi Smart Fire TV 60hz ರಿಫ್ರೆಶ್  ರೇಟ್ ನೊಂದಿಗೆ 32 ಇಂಚಿನ LED-ಬ್ಯಾಕ್‌ಲಿಟ್ LCD ಪ್ಯಾನೆಲ್ ಅನ್ನು  ಹೊಂದಿರುತ್ತದೆ. ಇದರ ಡಿಸ್ಪ್ಲೇ  178°  ಡ್ಯುಯಲ್ ಆಂಗಲ್ ಅನ್ನು ಸಪೋರ್ಟ್ ಮಾಡುತ್ತದೆ.  ಇದು 1366 x 768 ಪಿಕ್ಸೆಲ್ ರೆಸಲ್ಯೂಶನೊಂದಿಗೆ ಬರುತ್ತದೆ.  20W (2 x 10W) ​​ಸ್ಪೀಕರ್‌ಗಳನ್ನು ಕೂಡಾ ನೀಡಲಾಗಿದೆ. ಟಿವಿಗೆ ಮೆಟಲ್ ಫ್ರೇಮ್ ನೀಡಲಾಗಿದೆ. ಆದರೆ ಸ್ಟ್ಯಾಂಡ್ ಸೇರಿದಂತೆ ದೇಹದ ಉಳಿದ ಭಾಗ ಪ್ಲಾಸ್ಟಿಕ್ ನದ್ದಾಗಿದೆ. 

ಇದನ್ನೂ ಓದಿ : ನಿಮ್ಮ ಕನಸಿನ Maruti Brezza SUV ಅನ್ನು ಕೇವಲ 3 ಲಕ್ಷಕ್ಕೆ ಮನೆಗೆ ತನ್ನಿ

ಸಿಲಿಕಾನ್ ಅನ್ನು 1GB RAM ಮತ್ತು 8GB ಸ್ಟೋರೇಜ್ ನೊಂದಿಗೆ ನೀಡಲಾಗಿದೆ. ಎಲ್ಲಾ ಪ್ರಮುಖ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳು, ಉಚಿತ ಲೈವ್ ಟಿವಿ ಚಾನೆಲ್‌ಗಳು, ಅಲೆಕ್ಸಾ, ಮಿರಾಕಾಸ್ಟ್ ಮತ್ತು ಆಪಲ್ ಏರ್‌ಪ್ಲೇಗೆ  ಸಪೋರ್ಟ್ ನೊಂದಿಗೆ ಇದು  Amazon Fire OS 7 ಅನ್ನು ಬೂಟ್ ಮಾಡುತ್ತದೆ. ರೆಡ್ಮಿ ಸ್ಮಾರ್ಟ್ ಫೈರ್ ಟಿವಿ ಡ್ಯುಯಲ್ ಬ್ಯಾಂಡ್ ವೈಫೈ ಮತ್ತು ಬ್ಲೂಟೂತ್ 5.0 ಸಂಪರ್ಕವನ್ನು ನೀಡುತ್ತದೆ. ಇದು 3.5mm ಹೆಡ್‌ಫೋನ್ ಜ್ಯಾಕ್, ಆಂಟೆನಾ ಮತ್ತು 2 x USB ಹೊಂದಿದೆ.

Redmi Smart Fire TV 32 ಬೆಲೆ : 
ಭಾರತದಲ್ಲಿ Redmi Smart Fire TV 32 ಬೆಲೆ 13,999 ರೂ. ಆದರೆ, ಸೀಮಿತ ಅವಧಿಗೆ ಈ ಟಿವಿ 12,999 ರೂ.ಗೆ ಮಾರಾಟವಾಗಲಿದೆ. ಬ್ಯಾಂಕ್ ಆಫರ್‌ಗಳನ್ನು ಪಡೆಯುವ ಮೂಲಕ ಟಿವಿಯನ್ನು 11,999 ರೂ.ಗೆ  ಖರೀದಿಸುವುದು ಕೂಡಾ ಸಾಧ್ಯವಾಗುತ್ತದೆ. ಟಿವಿ ಮಾರ್ಚ್ 21 ರಂದು ಮಧ್ಯಾಹ್ನ 12 ಗಂಟೆಗೆ ಖರೀದಿಗೆ ಲಭ್ಯವಿರುತ್ತದೆ. ಇದು Mi.com ಮತ್ತು Amazon ಇಂಡಿಯಾ ಮೂಲಕ ಮಾರಾಟವಾಗಲಿದೆ. 

ಇದನ್ನೂ ಓದಿ : ರಿಮೋಟ್ ಮೂಲಕ ಟಿವಿ ಆಫ್ ಮಾಡುವುದರಿಂದ ನಿಮಗಾಗುವ ನಷ್ಟ ಎಷ್ಟು ಗೊತ್ತಾ ?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News