G-7 Global Corporate Tax: Google, Facebook ಗಳಂತಹ ಕಂಪನಿಗಳ ಮೇಲೆ ಶೇ.15 ರಷ್ಟು ತೆರಿಗೆ, G-7 ದೇಶಗಳ ಮಧ್ಯೆ ಐತಿಹಾಸಿಕ ಒಪ್ಪಂದ
G-7 Global Corporate Tax: G-7 ಶೃಂಗಸಭೆಯಲ್ಲಿ ಈ ಒಪ್ಪಂದದ ಮೇಲೆ ಅಧಿಕೃತ ಮುದ್ರೆ ಬೀಳಲಿದೆ. ಬ್ರಿಟಿಶ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅಧ್ಯಕ್ಷತೆಯಲ್ಲಿ ಕಾರ್ನ್ ವಾಲ್ ನಲ್ಲಿ ಜೂನ್ 11 ರಿಂದ 13 ರವರೆಗೆ ಈ ಶೃಂಗಸಭೆ ನಡೆಯಲಿದೆ.
ಲಂಡನ್: G-7 Global Corporate Tax - ವಿಶ್ವದ ಏಳು ಶ್ರೀಮಂತ ರಾಷ್ಟ್ರಗಳು ತಂತ್ರಜ್ಞಾನ ಕ್ಷೇತ್ರದ ದೈತ್ಯ ಕಂಪನಿಗಳ ಮೇಲೆ ಹೆಚ್ಚುವರಿ ತೆರಿಗೆ ವಿಧಿಸುವ ನಿರ್ಣಯ ಕೈಗೊಂಡಿವೆ. G-7 ಒಕ್ಕೂಟ (G-7 Group), ಗೂಗಲ್ (Google), ಫೇಸ್ಬುಕ್ (Facebook), ಆಪಲ್ (Apple) ಹಾಗೂ ಅಮೆಜಾನ್ (Amazon) ಗಳಂತಹ ಅತಿ ದೊಡ್ಡ ಅಮೇರಿಕನ್ ಕಂಪನಿಗಳ ಮೇಲೆ ಶೇ.15ರಷ್ಟು ತೆರಿಗೆ ವಿಧಿಸುವ ಐತಿಹಾಸಿಕ ಜಾಗತಿಕ ಒಪ್ಪಂದಕ್ಕೆ ಸಹಿ ಹಾಕಿವೆ. ಬ್ರಿಟನ್, ಅಮೇರಿಕಾ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ ಹಾಗೂ ಜಪಾನ್ ದೇಶಗಳು ಈ G-7 ಗುಂಪಿಗೆ ಸೇರುತ್ತವೆ.
ಜಿ-7 ಒಕ್ಕೂಟ ದೇಶಗಳ ಹಣಕಾಸು ಸಚಿವರುಗಳು ಲಂಡನ್ ನಲ್ಲಿ ನಡೆದ ಸಭೆಯ (G-7 Group Finance Ministers Meet) ಎರಡನೇ ಹಾಗೂ ಅಂತಿಮ ದಿನದಂದು ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಬ್ರಿಟನ್ ವಿತ್ತ ಸಚಿವ ಋಷಿ ಸುನಕ್ (Rishi Sunak) ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಸುನಕ್, , “ಹಲವು ವರ್ಷಗಳ ಸುದೀರ್ಘ ಚರ್ಚೆಯ ಬಳಿಕ, ಜಿ -7 ರಾಷ್ಟ್ರಗಳ ಹಣಕಾಸು ಸಚಿವರುಗಳು ಇಂದು ಜಾಗತಿಕ ತೆರಿಗೆ ವ್ಯವಸ್ಥೆಯನ್ನು ಸುಧಾರಿಸಲು ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಹೇಳಲು ನಾನು ಖುಷಿಪಡುತ್ತೇನೆ. ಇದರಿಂದ ಸರಿಯಾದ ಕಂಪನಿಗಳು (Multinational Companies) ಸರಿಯಾದ ಸ್ಥಾನದಲ್ಲಿ ಸರಿಯಾದ ತೆರಿಗೆಯನ್ನು ಪಾವತಿಸುತ್ತಿವೆ ಎಂಬುದು ಸುನಿಶ್ಚಿತಗೊಳ್ಳಲಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ- ನಿಮ್ಮ WhatsApp account ಸಕ್ರೀಯವಾಗಿಲ್ಲದಿದ್ದರೆ ಡಿಲಿಟ್ ಆಗಲಿದೆಯೇ?
ಅಮೆರಿಕಾದ ವಿತ್ತ ಸಚಿವೆ ಜೈನಟ್ ಎಲೆನ್ (Janet Yellen) ಕೂಡ ಲಂಡನ್ ನಲ್ಲಿ ನಡೆದ ಈ ಸಭೆಯಲ್ಲಿ ಶಾಮೀಲಾಗಿದ್ದರು. ಈ ಕುರಿತು ಮಾತನಾಡಿರುವ ಎಲೆನ್, ಈ ಒಪ್ಪಂದ ಜಾಗತಿಕ ತೆರಿಗೆ ದರವನ್ನು ಶೇ.15ಕ್ಕೆ ಕೊಂಡೊಯ್ಯುವ ಪ್ರಕ್ರಿಯೆಗೆ ವೇಗ ನೀಡಲಿದೆ. ಅದಲ್ಲದೆ, ಇದು ತೆರಿಗೆ (Tax) ಕಡಿತಗೊಳಿಸುವ ವಿಲೋಮ ಸ್ಪರ್ಧೆಗೆ ತಡೆಯೊಡ್ಡಲಿದೆ. ಇದರ ಜೊತೆಗೆ ಇದರಿಂದ ಅಮೇರಿಕಾ ಹಾಗೂ ವಿಶ್ವದ ಇತರೆ ದೇಶಗಳಲ್ಲಿ ವಾಸಿಸುವ ಮಧ್ಯಮವರ್ಗ ಹಾಗೂ ನೌಕರ ವರ್ಗಕ್ಕೆ ನ್ಯಾಯ ಸುನಿಶ್ಚಿತಗೊಳ್ಳಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ- ಕೇಂದ್ರ ಸರ್ಕಾರದಿಂದ ಟ್ವಿಟ್ಟರ್ ಗೆ ಫೈನಲ್ ನೋಟಿಸ್..!
ಶೃಂಗಸಭೆಯಲ್ಲಿ ಈ ನಿರ್ಧಾರದ ಮೇಲೆ ಮುದ್ರೆ ಬೀಳಲಿದೆ
ವಿತ್ತ ಸಚಿವರುಗಳ ಈ ಸಭೆ ವಾರ್ಷಿಕ G-7 ಶೃಂಗಸಭೆಗೂ (G-7 Summit 2021) ಮುನ್ನವೇ ನಡೆದಿದೆ. ವಿತ್ತ ಸಚಿವರುಗಳು ಸಹಿ ಹಾಕಿರುವ ಈ ಐತಿಹಾಸಿಕ ಜಾಗತಿಕ ಒಪ್ಪಂದಕ್ಕೆ ಶೃಂಗಸಭೆಯಲ್ಲಿ ಅಧಿಕೃತ ಮುದ್ರೆಯೋತ್ತಲಾಗುವುದು. ಈ ಶೃಂಗ ಸಭೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ (British PM Boris Johnson) ಅವರ ಅಧ್ಯಕ್ಷತೆಯಲ್ಲಿ ಜೂನ್ 11 ರಿಂದ ಜೂನ್ 13ರವರೆಗೆ ಕಾರ್ನ್ವಲ್ ನಲ್ಲಿ ಆಯೋಜಿಸಲಾಗುತ್ತಿದೆ. ಬ್ರಿಟನ್ ಈ ಎರಡೂ ಸಭೆಗಳ ಆಯೋಜನೆಯ ಜವಾಬ್ದಾರಿ ಹೊತ್ತುಕೊಂಡಿದೆ. G-7 ರಾಷ್ಟ್ರಗಳು ಕಡಿಮೆ ಆದಾಯ ಹೊಂದಿರುವ ದೇಶಗಳಿಗೆ ಲಸಿಕೆ ನೀಡುವ ಒತ್ತಡ ಎದುರಿಸುತ್ತಿವೆ. ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್ (US President Joe Biden) ಅವರು ಜಾಗತಿಕವಾಗಿ ಶೇ.15ರ ತೆರಿಗೆ (Global Corporate Tax)ವಿಧಿಸುವ ಪರಿಕಲ್ಪನೆಗೆ ಅನುಮೋದನೆ ನೀಡಿದ ನಂತರ ಈ ತೆರಿಗೆ ವಿಷಯದ ಬಗ್ಗೆ ಅಂತಾರಾಷ್ಟ್ರೀಯ ಚರ್ಚೆ ಆರಂಭಗೊಂಡಿತ್ತು ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ- Cheapest Corona Vaccine: ಭಾರತದ ಅತ್ಯಂತ ಅಗ್ಗದ ವ್ಯಾಕ್ಸಿನ್ Corbevax ಶೀಘ್ರದಲ್ಲಿಯೇ ಬಿಡುಗಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ