ನವದೆಹಲಿ: Not Filing ITR For Two Years? - ಒಂದು ವೇಳೆ ನೀವು ಆದಾಯ ತೆರಿಗೆ ರಿಟರ್ನ್ ದಾಖಲಿಸುತ್ತಿದ್ದರೆ, ಜುಲೈ 1 ರಿಂದ ಹೆಚ್ಚು TDS ಅಥವಾ ಟ್ಯಾಕ್ಸ್ ಪಾವತಿಸಬೇಕಾಗಲಿದೆ. ಹೌದು, ಫೈನಾನ್ಸ್ ಆಕ್ಟ್ 2021ರ ಪ್ರಕಾರ ಒಂದು ವೇಳೆ ತೆರಿಗೆ ಪಾವತಿದಾರರು ಕಳೆದ ಎರಡು ವರ್ಷಗಳಿಂದ ಆದಾಯ ತೆರಿಗೆ ರಿಟರ್ನ್ ಪಾವತಿಸಿಲ್ಲ ಎಂದಾದರೆ, ಹೆಚ್ಚು TDS ಹಾಗೂ TAX ಪಾವತಿಸಬೇಕು. ಈ ಎರಡು ವರ್ಷಗಳಲ್ಲಿ TDS ಅಥವಾ TCS ನ ಒಟ್ಟು ಮೊತ್ತ ರೂ.50000 ಅಥವಾ ಅದಕ್ಕಿಂತ ಹೆಚ್ಚಾಗಿದ್ದರೆ, ದರಗಳಿಗೆ ತಕ್ಕಂತೆ TDS ಪಾವತಿಸಬೇಕು. ಈ ನಿಯಮ ಜುಲೈ 1, 2021ರಿಂದ ಜಾರಿಗೆ ಬರಲಿದೆ.
ಇದನ್ನೂ ಓದಿ- Cheapest Corona Vaccine: ಭಾರತದ ಅತ್ಯಂತ ಅಗ್ಗದ ವ್ಯಾಕ್ಸಿನ್ Corbevax ಶೀಘ್ರದಲ್ಲಿಯೇ ಬಿಡುಗಡೆ
ಈ ಲೆಕ್ಕದಲ್ಲಿ TDS ಪಾವತಿಸಬೇಕಾಗಲಿದೆ
ಹೊಸ TDS ನಿಯಮಗಳ ಪ್ರಕಾರ ಇನ್ಕಮ್ ಟ್ಯಾಕ್ಸ್ ಆಕ್ಟ್ 1961 (Income Tax Act 1961) ನ ಸೆಕ್ಷನ್ 206AB ಅಡಿ ಆದಾಯ ತೆರಿಗೆ ಕಾನೂನಿನಲ್ಲಿರುವ ನಿಮಗಳ ಅನುಸಾರ ದುಪ್ಪಟ್ಟು ಅಥವ ಚಾಲ್ತಿಯಲ್ಲಿರುವ ದರಕ್ಕಿಂತ ದುಪ್ಪಟ್ಟು ಅಥವಾ ಶೇ.5 ಕ್ಕಿಂತ ಹೆಚ್ಚಾಗಿರುವ ಲೆಕ್ಕದಲ್ಲಿ TDS ಬೀಳುವ ಸಾಧ್ಯತೆ ಇರುತ್ತದೆ. TCS ವಿಷಯದಲ್ಲಿಯೂ ಕೂಡ ಪ್ರಸ್ತುತ ಇರುವ ನಿಯಮಗಳ ಪ್ರಕಾರ ಇರುವ ಪ್ರಸ್ತುತ ದರ ಅಥವಾ ಶೇ.5ಕ್ಕಿಂತ ಯಾವುದೇ ಜಾಸಿತಿ ಇರುವ ಲೆಕ್ಕದಲ್ಲಿ ಪಾವತಿಸಬೇಕಾಗಲಿದೆ.
ಇದನ್ನೂ ಓದಿ-ವಿಶ್ವದ ಅತ್ಯಂತ ದುಬಾರಿ ಅಡುಗೆ ಎಣ್ಣೆ ಯಾವುದು ನಿಮಗೆ ಗೊತ್ತಾ? ಇಲ್ಲಿದೆ ವಿವರ
ಇವರ ಮೇಲೆ ಈ ನಿಯಮ ಅನ್ವಯಿಸುವುದಿಲ್ಲ
ಆದಾಯ ತೆರಿಗೆ ಕಾನೂನಿನ ಈ ನಿಯಮ (Section 206AB), ವೇತನ, ನೌಕರರು ಬಾಕಿ ಉಳಿಸಿಕೊಂಡಿರುವ ಪಾವತಿ, ಕ್ರಾಸ್ ವರ್ಡ್ ಹಾಗೂ ಲಾಟರಿಯಲ್ಲಿ ಗಳಿಕೆ ಮಾಡಲಾಗಿರುವ ಆದಾಯ, ಹಾರ್ಸ್ ರೆಸ್ ನಿಂದ ಬಂದ ಆದಾಯ, ಸಿಕ್ಯೋರೈಟೆಶನ್ ಟ್ರಸ್ಟ್ ನಲ್ಲಿ ಮಾಡಲಾದ ಹೂಡಿಕೆಯಿಂದ ಬಂದ ಆದಾಯ ಹಾಗೂ ಕ್ಯಾಶ್ ವಿಥ್ ಡ್ರಾವಲ್ ಗಳ ಮೇಲೆ ಅನ್ವಯಿಸುವುದಿಲ್ಲ. ಸೆಕ್ಷನ್ 206 ಎಬಿ ಅಡಿಯಲ್ಲಿ ಅನಿವಾಸಿ ತೆರಿಗೆದಾರರು ಭಾರತದಲ್ಲಿ ಶಾಶ್ವತ ಪ್ರತಿಷ್ಠಾನ ಹೊಂದಿರದವರಿಗೂ ಇದು ಅನ್ವಯಿಸುವುದಿಲ್ಲ. 206 ಎಎ (ಪ್ಯಾನ್ ಅಲ್ಲದ ಸಂದರ್ಭದಲ್ಲಿ ಹೆಚ್ಚಿನ ಟಿಡಿಎಸ್ ದರ) ಮತ್ತು 206 ಎಬಿ ಎರಡೂ ವಿಭಾಗಗಳು ಅನ್ವಯವಾಗಿದ್ದರೆ, ಟಿಡಿಎಸ್ ದರವು ಮೇಲೆ ತಿಳಿಸಿದ ದರಗಳಿಗಿಂತ ಹೆಚ್ಚಿರುತ್ತದೆ. ಟಿಸಿಎಸ್‌ಗೆ ಸಂಬಂಧಿಸಿದಂತೆ, ಸೆಕ್ಷನ್ 206 ಸಿಸಿ ಮತ್ತು 206 ಸಿಸಿಎ ಅಡಿಯಲ್ಲಿ ಹೆಚ್ಚಿನ ಟಿಸಿಎಸ್ ಅನ್ವಯವಾಗುತ್ತದೆ. ಇದುವರೆಗೆ ಆದಾಯ ತೆರಿಗೆ ರಿಟರ್ನ್ (Income Tax Return) ಪಾವತಿಸಲು ಜುಲೈ 31 ಕೊನೆಯ ದಿನಾಂಕವಾಗಿತ್ತು. ಆದರೆ, ಅದನ್ನು ಇದೀಗ ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ.
ಇದನ್ನೂ ಓದಿ-Govt of India final notice to Twitter : ಕೇಂದ್ರ ಸರ್ಕಾರದಿಂದ ಟ್ವಿಟ್ಟರ್ ಗೆ ಫೈನಲ್ ನೋಟಿಸ್..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ