Aadhaar ಮೂಲಕ ನಿಮಿಷಗಳಲ್ಲಿ ಉಚಿತವಾಗಿ ಪಡೆಯಿರಿ PAN Card
ಆದಾಯ ತೆರಿಗೆಯನ್ನು ಜಮಾ ಮಾಡುವಾಗ, ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸುವಾಗ, ಬ್ಯಾಂಕ್ ಖಾತೆ ತೆರೆಯುವಾಗ, ಡಿಮ್ಯಾಟ್ ಖಾತೆ ತೆರೆಯುವಾಗ ಮತ್ತು ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸುವಾಗ ಪ್ಯಾನ್ ಕಾರ್ಡ್ ಅಗತ್ಯವಿದೆ.
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಇರುವುದು ಬಹಳ ಮುಖ್ಯ. ಈ ಎರಡು ಕಾರ್ಡ್‌ಗಳಿಲ್ಲದೆ ಯಾವುದೇ ಹಣಕಾಸಿನ ವಹಿವಾಟನ್ನು ಪೂರ್ಣಗೊಳಿಸಲಾಗುವುದಿಲ್ಲ. ಹಾಗಾಗಿ ನೀವು ಎರಡೂ ಕಾರ್ಡ್ ಹೊಂದಿರುವುದು ಅತ್ಯವಶ್ಯಕವಾಗಿದೆ. ಒಂದೊಮ್ಮೆ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದು ಪ್ಯಾನ್ ಕಾರ್ಡ್ ಇಲ್ಲದಿದ್ದರೆ ಆಧಾರ್ ಕಾರ್ಡ್ ಸಹಾಯದಿಂದ ನಿಮಿಷಗಳಲ್ಲಿ ಇ-ಪ್ಯಾನ್ ಪಡೆಯಬಹುದಾಗಿದೆ. ಪ್ಯಾನ್ ಕಾರ್ಡ್ ತಯಾರಿಸುವ ಮೊದಲು ನಾವು ನಿಮಗೆ ಕೆಲವು ಪ್ರಮುಖ ವಿಷಯಗಳನ್ನು ಹೇಳಲಿದ್ದೇವೆ. ಇದರಿಂದಾಗಿ ನೀವು ಪ್ಯಾನ್ ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದಾಗಿದೆ.
ಪ್ಯಾನ್ ಕಾರ್ಡ್ ಎಂದರೇನು?
ಪ್ಯಾನ್ ಕಾರ್ಡ್‌ನಲ್ಲಿ 10 ಅಂಕಿಗಳ ಸಂಖ್ಯೆ ಇದ್ದು, ಅದನ್ನು ಆದಾಯ ತೆರಿಗೆ ಇಲಾಖೆ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಯಾವುದೇ ಹಣಕಾಸಿನ ಕೆಲಸಗಳಿಗೆ ಪ್ಯಾನ್ ಕಾರ್ಡ್ (PAN Card) ಅಗತ್ಯವಿದೆಯೆಂದು ನಮಗೆ ತಿಳಿದಿದೆ. ಹೀಗಾಗಿ ಪ್ಯಾನ್ ಕಾರ್ಡ್ ಪಡೆಯುವುದು ಅತ್ಯಗತ್ಯವಾಗಿದೆ.
ಇದನ್ನೂ ಓದಿ: ನಿಮ್ಮ ಬಳಿ ಇರುವ Pan Card ಅಸಲಿಯೇ? ಅದನ್ನು ಹೀಗಿ ಪರಿಶೀಲಿಸಿ
ಈ ರೀತಿಯಾಗಿ ನೀವು ತ್ವರಿತವಾಗಿ ಇ-ಪ್ಯಾನ್ ಕಾರ್ಡ್ ಪಡೆಯಬಹುದು:
ಆದಾಯ ತೆರಿಗೆ ಇಲಾಖೆಯ ಪ್ರಕಾರ ತ್ವರಿತ ಪ್ಯಾನ್ ಸೌಲಭ್ಯದಡಿಯಲ್ಲಿ ಆಧಾರ್ ಕಾರ್ಡ್ (Aadhaar Card) ಮೂಲಕ ಇ-ಪ್ಯಾನ್ ಕಾರ್ಡ್ ನೀಡಲು ಸುಮಾರು 10 ನಿಮಿಷಗಳು ಬೇಕಾಗುತ್ತದೆ. ಈ ಸೌಲಭ್ಯದಡಿ ಈವರೆಗೆ ಸುಮಾರು 7 ಲಕ್ಷ ಪ್ಯಾನ್ ಕಾರ್ಡ್‌ಗಳನ್ನು ನೀಡಲಾಗಿದೆ.
ಪ್ಯಾನ್ ಕಾರ್ಡ್ ಅನ್ನು ಉಚಿತವಾಗಿ ಪಡೆಯಬಹುದು:
ಪ್ಯಾನ್‌ಕಾರ್ಡ್ ಅನ್ನು ಎನ್‌ಎಸ್‌ಡಿಎಲ್ (NSDL) ಮತ್ತು ಯುಟಿಐಟಿಎಸ್ಎಲ್ ಮೂಲಕವೂ ನೀಡಲಾಗುತ್ತದೆ. ಆದರೆ ಈ ಎರಡೂ ಸಂಸ್ಥೆಗಳು ಈ ಸೌಲಭ್ಯಕ್ಕಾಗಿ ಕೆಲವು ಶುಲ್ಕವನ್ನು ವಿಧಿಸುತ್ತವೆ. ಮತ್ತೊಂದೆಡೆ ನೀವು ಆದಾಯ ತೆರಿಗೆ ಇಲಾಖೆ ಪೋರ್ಟಲ್ ಮೂಲಕ ಪ್ಯಾನ್ ಕಾರ್ಡ್ ಅನ್ನು ಪಡೆದರೆ ನೀವು ಯಾವುದೇ ಶುಲ್ಕವನ್ನು ಪಾವತಿಸಬೇಕಾಗಿಲ್ಲ.
ಇದನ್ನೂ ಓದಿ: ಪ್ಯಾನ್ ಕಾರ್ಡ್ ಕಳೆದುಹೋಗಿದೆಯೇ? ಚಿಂತೆಬಿಡಿ, ಈ ನಿಯಮ ಅನುಸರಿಸಿ ನಿಮ್ಮ PAN Card ಪಡೆಯಿರಿ
ಪ್ಯಾನ್ ಕಾರ್ಡ್ ಪಿಡಿಎಫ್ ರೂಪದಲ್ಲಿ ಲಭ್ಯವಿರುತ್ತದೆ:
ಪ್ಯಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಗೆ ಪಿಡಿಎಫ್ ರೂಪದಲ್ಲಿ ಪ್ಯಾನ್ ಕಾರ್ಡ್ ಸಿಗುತ್ತದೆ. ಇದು ಕ್ಯೂಆರ್ ಕೋಡ್ ಅನ್ನು ಸಹ ಹೊಂದಿರುತ್ತದೆ. ಇದು ನಿಮ್ಮ ಹೆಸರು, ಹುಟ್ಟಿದ ದಿನಾಂಕ, ಫೋಟೋ ಇತ್ಯಾದಿ ನಿಮ್ಮ ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತದೆ. ನಿಮ್ಮ ಇ-ಪ್ಯಾನ್ ಅನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಪ್ಲಿಕೇಶನ್ ಪ್ರಕ್ರಿಯೆ ಪೂರ್ಣಗೊಂಡ ನಂತರ ನೀವು 15-ಅಂಕಿಯ ಸ್ವೀಕೃತಿ ಸಂಖ್ಯೆಯನ್ನು ಪಡೆಯುತ್ತೀರಿ. ನಿಮ್ಮ ಪ್ಯಾನ್ ಕಾರ್ಡ್‌ನ ಸಾಫ್ಟ್ ಕಾಪಿಯನ್ನು ನಿಮ್ಮ ಮೇಲ್ ಐಡಿಗೆ ಕಳುಹಿಸಲಾಗುತ್ತದೆ.
ಪ್ಯಾನ್ ಕಾರ್ಡ್ ಅನ್ನು ಉಚಿತವಾಗಿ ಪಡೆಯುವ ಮಾರ್ಗ ಇದು:
1. ಮೊದಲನೆಯದಾಗಿ, https://www.incometaxindiaefiling.gov.in/home ಗೆ ಹೋಗಿ.
2. ಇಲ್ಲಿ ನೀವು ನಿಮ್ಮ ಎಡಭಾಗದಲ್ಲಿ ಆಧಾರ್ ಮೂಲಕ ತತ್ಕ್ಷಣದ ಪ್ಯಾನ್ (Instant PAN through Aadhaar) ಆಯ್ಕೆಯನ್ನು ನೋಡುತ್ತೀರಿ. ಅದನ್ನು ಕ್ಲಿಕ್ ಮಾಡಿ.
3. ಅದರ ನಂತರ ಹೊಸ ಪುಟ ತೆರೆಯುತ್ತದೆ ಅಲ್ಲಿ ನೀವು ಹೊಸ ಪ್ಯಾನ್ ಪಡೆಯುವ ಆಯ್ಕೆಯನ್ನು ನೋಡುತ್ತೀರಿ. ಇದನ್ನೂ ಕ್ಲಿಕ್ ಮಾಡಿ
4. ಈಗ ಹೊಸ ಪುಟದಲ್ಲಿ, ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಲು ನಿಮ್ಮನ್ನು ಕೇಳಲಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆಯನ್ನು ಇಲ್ಲಿ ನಮೂದಿಸಿ ಮತ್ತು 'I Confirm' ಮೇಲೆ ಟಿಕ್ ಮಾಡಿ.
5. ನಿಮ್ಮ ನೋಂದಾಯಿತ ಮೊಬೈಲ್ ಫೋನ್‌ನಲ್ಲಿ ಒಟಿಪಿ ಬರುತ್ತದೆ. ಅದನ್ನು ಸೈಟ್‌ನಲ್ಲಿ ಇರಿಸುವ ಮೂಲಕ ಪರಿಶೀಲಿಸಿ. ಈ ರೀತಿಯಾಗಿ ನೀವು ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಪಡೆಯಬಹುದು.
ಇದನ್ನೂ ಓದಿ: ಪ್ಯಾನ್ ಕಾರ್ಡ್‌ನಲ್ಲಿ ಹೆಸರು/ಜನ್ಮ ದಿನಾಂಕ ತಪ್ಪಾಗಿದ್ದರೆ ಅದನ್ನು ಹೀಗೆ ಸರಿಪಡಿಸಿ