ಬೆಂಗಳೂರು : ಈಗೇನೋ ಮೈ ಕೊರೆಯುವ ಚಳಿ ಇದೆ ನಿಜ. ಆದರೆ ಇನ್ನು ಕೆಲವೇ ದಿನಗಳಲ್ಲಿ ಮತ್ತೆ ಬಿರು ಬೇಸಿಗೆ ಆರಂಭವಾಗುತ್ತದೆ. ಆಗ ಫ್ಯಾನ್, ಕೂಲರ್ ಎಸಿಯ ಅಗತ್ಯ ಬೀಳುತ್ತದೆ. ಬೇಸಿಗೆಯಲ್ಲಿ ಎಸಿ ಖರೀದಿಸಬೇಕಾದರೆ ದೊಡ್ಡ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆಗ ಎಸಿಗೆ ಬೇಡಿಕೆ ಹೆಚ್ಚಿರುವುದರಿಂದ ನಿರೀಕ್ಷಿಸಿದ ಪ್ರಮಾಣದಲ್ಲಿ ರಿಯಾಯಿತಿ ಕೂಡಾ ಇರುವುದಿಲ್ಲ. ಆದರೆ ಈಗ ಅತಿ ಕಡಿಮೆ ಬೆಲೆಗೆ ಎಸಿಯನ್ನು ಖರೀದಿಸುವುದು ಸಾಧ್ಯವಾಗುತ್ತದೆ. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್‌ನಲ್ಲಿ ಎಸಿಯನ್ನು ಅರ್ಧದಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಸೇಲ್‌ನಲ್ಲಿ ಎಸಿಗಳ ಮೇಲೆ ಶೇಕಡಾ 55 ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಸೇಲ್ ನಲ್ಲಿ ಸ್ಯಾಮ್ ಸಂಗ್, ವೋಲ್ಟಾಜ್, ಹಿಟಾಚಿ, ಎಲ್ ಜಿ ಸೇರಿದಂತೆ ಹಲವು ಕಂಪನಿಗಳ ಏರ್ ಕಂಡಿಷನರ್ ಗಳನ್ನು ಅತ್ಯಂತ ಅಗ್ಗದ ಬೆಲೆಗೆ ಖರೀದಿಸುವುದು ಸಾಧ್ಯವಾಗುತ್ತದೆ.  


COMMERCIAL BREAK
SCROLL TO CONTINUE READING

ವೋಲ್ಟಾಸ್ 1.5 ಟನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ :
ವೋಲ್ಟಾಸ್ 1.5 ಟನ್ 5 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿಯ ಪ್ರಾರಂಭಿಕ ಬೆಲೆ 67,990  ರೂಪಾಯಿ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು  41,990 ರೂಪಾಯಿಗೆ ಖರೀದಿಸಬಹುದಾಗಿದೆ. ಐಸಿಐಸಿಐ ಮತ್ತು ಸಿಟಿ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಪಾವತಿಸಿದರೆ ಈ ಎಸಿ ಮೇಲೆ 1500 ರೂ.ಗಳ ರಿಯಾಯಿತಿ ಕೂಡಾ ಸಿಗುತ್ತದೆ.  


ಇದನ್ನೂ ಓದಿ : Flipkart Big Billion Days Sale: ಅತ್ಯಂತ ಕಡಿಮೆ ಬೆಲೆಗೆ Apple iPhone 14 ಖರೀದಿಸಿ


ಹಿಟಾಚಿ 1 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ :
ಹಿಟಾಚಿ 1 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿಯ ಬೆಲೆ  48,200 ರೂ. ಆಗಿದೆ. ಆದರೆ, ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು 37% ರಿಯಾಯಿತಿ ದರದಲ್ಲಿ ಖರೀದಿಸಬಹುದು. ಅಂದರೆ ಈ ಎಸಿಯನ್ನು ಫ್ಲಿಪ್‌ಕಾರ್ಟ್‌ನಿಂದ ಖರೀದಿಸುವುದಾದರೆ 29,980 ರೂಪಾಯಿ ನೀಡಬೇಕಾಗುತ್ತದೆ. ಇದರ ಜೊತೆಗೆ ಹಲವು ಬ್ಯಾಂಕ್ ಆಫರ್‌ಗಳೂ ಲಭ್ಯವಿದೆ. 


SAMSUNG ಕನ್ವರ್ಟಿಬಲ್ 1 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ AC :
ಸ್ಯಾಮ್ಸಂಗ್ ಕನ್ವರ್ಟಿಬಲ್ 1 ಟನ್ 3 ಸ್ಟಾರ್ ಸ್ಪ್ಲಿಟ್ ಇನ್ವರ್ಟರ್ ಎಸಿ ಬೆಲೆ 50,990 ರೂ ಆಗಿದ್ದರೂ,  ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು  27,999 
ರೂಪಾಯಿಗೆ ಖರೀದಿಸಬಹುದಾಗಿದೆ. 


ಇದನ್ನೂ ಓದಿ : LeEco S1 Pro: 11 ಸಾವಿರಕ್ಕೆ ಚೀನಾದಿಂದ ಐಫೋನ್ ಹೋಲುವ ಸ್ಮಾರ್ಟ್‍ಫೋನ್ ಬಿಡುಗಡೆ​
 
LG ಸೂಪರ್ ಕನ್ವರ್ಟಿಬಲ್ 6-ಇನ್-1 ಕೂಲಿಂಗ್ 1.5 ಟನ್ 5 ಸ್ಟಾರ್ ಸ್ಪ್ಲಿಟ್ ಡ್ಯುಯಲ್ ಇನ್ವರ್ಟರ್ :
ಎಲ್ ಜಿ  ಸೂಪರ್ ಕನ್ವರ್ಟಿಬಲ್ 6-ಇನ್-1 ಕೂಲಿಂಗ್ 1.5 ಟನ್ 5 ಸ್ಟಾರ್ ಸ್ಪ್ಲಿಟ್ ಡ್ಯುಯಲ್ ಇನ್ವರ್ಟರ್ ಬೆಲೆ 75,990 ರೂಪಾಯಿ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು 41,990 ರೂಪಾಯಿಗೆ ಖರೀದಿಸುವುದು ಸಾಧ್ಯವಾಗುತ್ತದೆ. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.