Affordable iPhone: ಆಪಲ್ ಕಂಪನಿ ಯಾವಾಗ ತನ್ನ ಮುಂದಿನ ಐಫೋನ್ (iPhone SE 4) ಅನ್ನು ಬಿಡುಗಡೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಹೆಚ್ಚಿದೆ. ಈ ಮಧ್ಯೆ ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ ಒಂದಿದೆ. ಆಪಲ್ ಶೀಘ್ರದಲ್ಲೇ ಕೈಗೆಟುಕುವ ಬೆಲೆಯಲ್ಲಿ ಐಫೋನ್ ಅನ್ನು ಪರಿಚಯಿಸಲಿದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

iPhone SE 4: 
iPhone SE 4 ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಸೋರಿಕೆಯಾಗಿದ್ದು, ಐಫೋನ್ SE 4 ಅನ್ನು 2024 ರ ಮೊದಲ ತ್ರೈಮಾಸಿಕದಲ್ಲಿ ಬಿಡುಗಡೆ ಮಾಡಬಹುದು ಎಂದು ವದಂತಿಗಳು ಸೂಚಿಸಿವೆ. 


ವಾಸ್ತವವಾಗಿ, ಐಫೋನ್ SE 3ನ ವೈಶಿಷ್ಟ್ಯಗಳು ಮತ್ತು ವಿನ್ಯಾಸವು ಜನರು ನಿರೀಕ್ಷಿಸಿದಷ್ಟು ಜನಪ್ರಿಯವಾಗಲಿಲ್ಲ. ಆದರೆ, ಹೊಸ ಮಾದರಿಯಲ್ಲಿ ವಿನ್ಯಾಸ ಮತ್ತು ಕೆಲವು ವಿಷಯಗಳನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ವದಂತಿಗಳು ಸೂಚಿಸಿವೆ. ಮುಖ್ಯವಾದ ವಿಷಯವೆಂದರೆ ಈ ಐಫೋನ್ ಬೆಲೆ 50 ಸಾವಿರ ರೂ.ಗಳಿಗಿಂತ ಕಡಿಮೆ ಇರಲಿದೆ ಎಂದು ನಿರೀಕ್ಷಿಸಲಾಗಿದೆ. 


ಇದನ್ನೂ ಓದಿ- ಇನ್ಮುಂದೆ ನಿಮ್ಮ ವಾಟ್ಸ್ ಆಪ್ ಸ್ಟೇಟಸ್ ಅನ್ನು ಫೆಸ್ಬುಕ್, ಇನ್ಸ್ಟಾಗ್ರಾಮ್ ಮೇಲೂ ಹಂಚಿಕೊಳ್ಳಬಹುದು!


iPhone SE 4 ವೈಶಿಷ್ಟ್ಯಗಳು: 
ಈ ಸೋರಿಕೆಯಾಗಿರುವ ಮಾಹಿತಿಯಲ್ಲಿ iPhone SE 4 ವಿನ್ಯಾಸವು ಐಫೋನ್ 14 ರಂತೆಯೇ ಇರಲಿದೆ ಎಂದು ಹೇಳಲಾಗುತ್ತಿದೆ.  ಇದರರ್ಥ ಕೆಳಭಾಗದಲ್ಲಿ ಯಾವುದೇ ಬಟನ್‌ಗಳು ಇರುವುದಿಲ್ಲ ಮತ್ತು ಪರದೆಯ ಸುತ್ತಲೂ ವಿಶಾಲವಾದ ಕಪ್ಪು ಬಾರ್‌ಗಳು ಕೂಡ ಇರುವುದಿಲ್ಲ. ಬದಲಾಗಿ ಸ್ಕ್ರೀನ್, ಸಂಪೂರ್ಣವಾಗಿ ದೇಹಕ್ಕೆ ಲಗತ್ತಿಸಲ್ಪಡುತ್ತದೆ. 


ಲಭ್ಯವಿರುವ ಮಾಹಿತಿಗಳ ಪ್ರಕಾರ, ಐಫೋನ್ SE 4 ರ ವಿನ್ಯಾಸವು ಹೆಚ್ಚು ಆಧುನಿಕವಾಗಿದ್ದು ಬಹಳ ಸೊಗಸಾಗಿರಲಿದೆ. ಆದಾಗ್ಯೂ, ಹಿಂದಿನ ಐಫೋನ್ ಮಾದರಿಗಳಂತೆಯೇ ಈ ಐಫೋನ್ SE 4 ಮೇಲ್ಭಾಗದಲ್ಲಿ ನಾಚ್ ಅನ್ನು ಹೊಂದಿರುತ್ತದೆ. ಈ ನಾಚ್ ಕ್ಯಾಮೆರಾ, ಸಂವೇದಕ ಮತ್ತು ಸ್ಪೀಕರ್‌ಗೆ ಜಾಗವನ್ನು ನೀಡುತ್ತದೆ. OLED ಡಿಸ್ಪ್ಲೇ ಉತ್ತಮ ವೀಡಿಯೊ ಮತ್ತು ಗೇಮಿಂಗ್ ಅನುಭವವನ್ನು ಒದಗಿಸುತ್ತದೆ  ಎನ್ನಲಾಗಿದೆ. 


ಇದನ್ನೂ ಓದಿ- ಆನ್‌ಲೈನ್ ವಂಚನೆಗೆ ಕಡಿವಾಣ ಹಾಕಲು ಸರ್ಕಾರದ ಮಹತ್ವದ ಹೆಜ್ಜೆ: ಇಂದಿನಿಂದ ಬದಲಾಗಲಿದೆ ಸಿಮ್ ಕಾರ್ಡ್ ನಿಯಮ


iPhone SE 4 ಬ್ಯಾಟರಿ: 
ಸೋರಿಕೆಯಾಗಿರುವ ಮಾಹಿತಿಗಳ ಪ್ರಕಾರ, ಈ iPhone SE 4ಬ್ಯಾಟರಿ ಐಫೋನ್ 14 ಬ್ಯಾಟರಿಯಂತೆಯೇ ಇರುತ್ತದೆ. ಈ ಬಜೆಟ್ ಶ್ರೇಣಿಯ ಐಫೋನ್ ಪ್ರತಿಯೊಬ್ಬರಿಗೂ ಉತ್ತಮ ಡೀಲ್ ಎಂದು ಸಾಬೀತುಪಡಿಸಲಿದೆ ಎಂದು ಹೇಳಲಾಗುತ್ತಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.