SIM Card New Rule: ಭಾರತದ ದೂರಸಂಪರ್ಕ ಇಲಾಖೆ (DoT) ಇಂದಿನಿಂದ (01 ಡಿಸೆಂಬರ್ 2023) ಸಿಮ್ ಕಾರ್ಡ್‌ಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಮೊದಲಿಗೆ ಈ ವರ್ಷದ ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ಈ ನಿಯಮಗಳನ್ನು ಘೋಷಿಸಿತ್ತು. ಆದಾಗ್ಯೂ ಇದರ ಅನುಷ್ಠಾನವನ್ನು ಮುಂದೂಡಲಾಗಿತ್ತು. ಇದೀಗ, ಪರಿಷ್ಕೃತ ನಿಯಮಗಳು ಇಂದಿನಿಂದ ಜಾರಿಗೆ ಬರಲಿವೆ.
ಸಿಮ್ ಕಾರ್ಡ್ ಹೊಸ ನಿಯಮ:
ದೂರಸಂಪರ್ಕ ಇಲಾಖೆ (DoT) ಜಾರಿಗೊಳಿಸಿರುವ ಪರಿಷ್ಕೃತ ನಿಯಮಗಳ ಪ್ರಕಾರ, ಸರ್ಕಾರವು ಸಿಮ್ ಕಾರ್ಡ್ ಮಾರಾಟಗಾರರ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ ಮತ್ತು ಬೃಹತ್ ಸಂಪರ್ಕಗಳ ನಿಬಂಧನೆಯನ್ನು ರದ್ದುಗೊಳಿಸಿದೆ. ಆನ್‌ಲೈನ್ ಹಣಕಾಸು ವಂಚನೆಯನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಾಸ್ತವವಾಗಿ, ದೇಶಾದ್ಯಂತ ಇತ್ತೀಚಿನ ದಿನಗಳಲ್ಲಿ ನಕಲಿ ಸಿಮ್‌ಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಉಂಟಾಗುತ್ತಿರುವ ವಂಚನೆ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಹೊಸ ಸಿಮ್ ಕಾರ್ಡ್ ನಿಯಮಗಳನ್ನು ಉಲ್ಲಂಘಿಸಿದ್ದೇ ಆದಲ್ಲಿ ದಂಡದ ಜೊತೆಗೆ ಜೈಲು ಶಿಕ್ಷೆಯನ್ನು ಸಹ ಅನುಭವಿಸಬೇಕಾಗಬಹುದು.
ಇದನ್ನೂ ಓದಿ- ವಾಟ್ಸ್ ಅಪ್ಪ್ ನಲ್ಲಿ ಬಂತು ಈ ಬಹುನಿರೀಕ್ಷಿತ ವೈಶಿಷ್ಟ್ಯ, ಇನ್ಮುಂದೆ ನೀವು ಸುಲಭವಾಗಿ ಪರ್ಸನಲ್ ಚಾಟ್ ಮಾಡಬಹುದು!
ಹೊಸ ಸಿಮ್ ಕಾರ್ಡ್ ನಿಯಮದಲ್ಲಿ ಏನಿದೆ?
ಬಲ್ಕ್ ಸಿಮ್ ಕಾರ್ಡ್ ಸಂಪರ್ಕ ಸ್ಥಗಿತ:
ಆನ್‌ಲೈನ್ ವಂಚನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿರುವ ದೂರಸಂಪರ್ಕ ಇಲಾಖೆ, ಬೃಹತ್ ಸಂಪರ್ಕಗಳ ನಿಬಂಧನೆಗಳನ್ನು ಸ್ಥಗಿತಗೊಳಿಸಿದೆ.
ಆಧಾರ್ ದುರ್ಬಳಕೆಗೆ ಕಡಿವಾಣ:
ಹೊಸ ಮಾರ್ಗಸೂಚಿಗಳು ಮುದ್ರಿತ ಆಧಾರ್‌ನ ಹೆಚ್ಚಿನ ದುರುಪಯೋಗದ ಮೇಲೆ ಗಮನ ಕೇಂದ್ರೀಕರಿಸಿದ್ದು ಮುದ್ರಿತ ಆಧಾರ್‌ನಲ್ಲಿರುವ QR ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ವಿವರಗಳನ್ನು ಸೆರೆಹಿಡಿಯುವುದು ಕಡ್ಡಾಯವಾಗಿದೆ. ಮೊಬೈಲ್ ಸಂಖ್ಯೆಯನ್ನು ಕಡಿತಗೊಳಿಸುವ ಮೊದಲು, 90-ದಿನಗಳ ಕೂಲ್-ಆಫ್ ಅವಧಿಯನ್ನು ಒದಗಿಸಲಾಗುತ್ತದೆ.
ಕಡ್ಡಾಯ ನೋಂದಣಿ:
ಸಿಮ್ ಕಾರ್ಡ್ ಸಂಬಂಧಿತ ಹೊಸ ನಿಯಮಗಳನ್ವಯ ಟೆಲಿಕಾಂ ಆಪರೇಟರ್‌ಗಳು ಫ್ರಾಂಚೈಸಿಗಳು, ವಿತರಕರು ಮತ್ತು ಪಾಯಿಂಟ್-ಆಫ್-ಸೇಲ್ (ಪಿಒಎಸ್) ಏಜೆಂಟ್‌ಗಳನ್ನು ನೋಂದಾಯಿಸುವುದು ಕಡ್ಡಾಯವಾಗಿದೆ. ಪ್ರತಿ ಪಿಒಎಸ್ ಏಜೆಂಟ್ ಪರವಾನಗಿದಾರರೊಂದಿಗೆ ಲಿಖಿತ ಒಪ್ಪಂದದ ಮೂಲಕ ನೋಂದಾಯಿಸಿಕೊಳ್ಳಬೇಕು.
ಇದನ್ನೂ ಓದಿ- ಯುಟ್ಯೂಬ್ ಸಹಾಯದಿಂದ ತಿಂಗಳಿಗೆ 1 ಲಕ್ಷ ಸುಲಭವಾಗಿ ಸಂಪಾದಿಸಿ, ಮನೆಯಿಂದಲೂ ಕೆಲಸ ಮಾಡಬಹುದು!
ಇ-ಕೆವೈಸಿ:
ಪ್ರತಿ ಸಿಮ್ ಬಳಕೆದಾರರ ಡಿಜಿಟಲ್ ಪರಿಶೀಲನೆಗೆ ಅನುಕೂಲವಾಗುವಂತೆ ಡಿಜಿಟಲ್ ನೋ ಯುವರ್ ಕಸ್ಟಮರ್ ಅಥವಾ ಇ-ಕೆವೈಸಿ ಕೂಡ ಡಿಸೆಂಬರ್ 1 ರಿಂದ ಕಡ್ಡಾಯವಾಗಿದೆ. ತಿ ಸಿಮ್ ಕಾರ್ಡ್ ಡೀಲ್ ಕೂಡ ಡಿಜಿಟಲ್ ಪರಿಶೀಲನೆಗೆ ಒಳಗಾಗಬೇಕಾಗುತ್ತದೆ ಮತ್ತು ಅವುಗಳನ್ನು ಮಾರಾಟ ಮಾಡುವಾಗ ಸಿಮ್ ಕಾರ್ಡ್ ಅನ್ನು ನೋಂದಾಯಿಸಿಕೊಳ್ಳಬೇಕು. ಪೊಲೀಸ್ ಪರಿಶೀಲನೆಯು ಟೆಲಿಕಾಂ ಆಪರೇಟರ್‌ಗಳ ಜವಾಬ್ದಾರಿಯಾಗಿದೆ. ಡಿಜಿಟಲ್ KYC ಅನ್ನು ಅನುಸರಿಸಲು ವಿಫಲವಾದರೆ, ಡೀಲರ್ 10 ಲಕ್ಷದವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://youtu.be/--phA9ji8NM
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.