ನಂಬಲಾರದಷ್ಟು ಕಡಿಮೆ ಬೆಲೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ ಖರೀದಿಸುವ ಸುವರ್ಣಾವಕಾಶ, ಕೊಡುಗೆ ಸೀಮಿತಾವಧಿಗಾಗಿ ಮಾತ್ರ!

Samsung Galaxy S23 FE Offer: ಕೊರಿಯನ್ ಟೆಕ್ ದೈತ್ಯ ಸ್ಯಾಮ್ ಸಂಗ್ ತನ್ನ ಗ್ರಾಹಕರಿಗೆ ವರ್ಷಾಂತ್ಯದ ಕೊಡುಗೆಯನ್ನು (Samsung Galaxy S23 FE Year End Offer) ಪ್ರಕಟಿಸಿದೆ.  (Technology News In Kannada)

Written by - Nitin Tabib | Last Updated : Nov 28, 2023, 04:42 PM IST
  • ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ ಸರಣಿಯ ಉತ್ಪನ್ನಗಳು ಕೈಗೆಟುಕುವ ಬೆಲೆ ಮತ್ತು ಉನ್ನತ ಸಾಲಿನ ವೈಶಿಷ್ಟ್ಯಗಳ
  • ಪರಿಪೂರ್ಣ ಮಿಶ್ರಣವನ್ನು ಒದಗಿಸುತ್ತವೆ ಮತ್ತು ಗ್ಯಾಲಕ್ಷಿ ಎಸ್23 ಎಫ್ಇ ಇದು ಕಂಪನಿ ವತಿಯಿಂದ
  • ಇದುವರೆಗೆ ಬಿಡುಗಡೆ ಮಾಡಲಾದ ಅತ್ಯಂತ ಶಕ್ತಿಶಾಲಿ ಆವೃತ್ತಿಯಾಗಿದೆ.
ನಂಬಲಾರದಷ್ಟು ಕಡಿಮೆ ಬೆಲೆಗೆ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ ಖರೀದಿಸುವ ಸುವರ್ಣಾವಕಾಶ, ಕೊಡುಗೆ ಸೀಮಿತಾವಧಿಗಾಗಿ ಮಾತ್ರ! title=

Samsung Galaxy S23 FE Offer: ಕೊರಿಯನ್ ಟೆಕ್ ದೈತ್ಯ ಸ್ಯಾಮ್ ಸಂಗ್ ತನ್ನ ಗ್ರಾಹಕರಿಗೆ ವರ್ಷಾಂತ್ಯದ ಕೊಡುಗೆಯನ್ನು (Samsung Galaxy S23 FE Year End Offer) ಪ್ರಕಟಿಸಿದೆ. ಹೌದು, ಕಂಪನಿ ತನ್ನ ಫ್ಲ್ಯಾಗ್ ಶಿಪ್ ಮೊಬೈಲ್ ಆಗಿರುವ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ ಮೇಲೆ ಭಾರಿ ವರ್ಷಾಂತ್ಯದ ಕೊಡುಗೆಯನ್ನು ಪ್ರಕಟಿಸಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ ಸರಣಿಯ ಉತ್ಪನ್ನಗಳು ಕೈಗೆಟುಕುವ ಬೆಲೆ ಮತ್ತು ಉನ್ನತ ಸಾಲಿನ ವೈಶಿಷ್ಟ್ಯಗಳ ಪರಿಪೂರ್ಣ ಮಿಶ್ರಣವನ್ನು ಒದಗಿಸುತ್ತವೆ ಮತ್ತು ಗ್ಯಾಲಕ್ಷಿ ಎಸ್23 ಎಫ್ಇ  ಇದು ಕಂಪನಿ ವತಿಯಿಂದ ಇದುವರೆಗೆ ಬಿಡುಗಡೆ ಮಾಡಲಾದ ಅತ್ಯಂತ ಶಕ್ತಿಶಾಲಿ ಆವೃತ್ತಿಯಾಗಿದೆ. (Technology News In Kannada)

ಅದ್ಭುತ ಗೆಮಿಂಗ್ ಅನುಭವ
ಒಂದು ವೇಳೆ ನೀವು ಗೆಮಿಂಗ್ ಪ್ರಿಯರಾಗಿದ್ದರೆ, ಗ್ಯಾಲಕ್ಸಿ ಎಸ್ 23 ಎಫ್ಇ ಸ್ಮಾರ್ಟ್ ಫೋನ್ (Samsung Galaxy S23 FE ) ನಿಮಗೆ ಹೇಳಿ ಮಾಡಿಸಿದ ಫೋನ್ ಎಂದರೆ ತಪ್ಪಾಗಲಾರದು. ಏಕೆಂದರೆ ಇದು ಅತ್ಯಾಧುನಿಕ 4ಎನ್ಎಂ ಎಕ್ಸಿನೋಸ್ 2200 ಚಿಪ್ಸೆಟ್ ನೊಂದಿಗೆ ನಿಮಗೆ ಅದ್ಭುತ ಗೆಮಿಂಗ್ ಅನುಭವ ನೀಡುತ್ತದೆ. ಇದರಿಂದ ನೀವು ದೀರ್ಘಾವಧಿಯವರೆಗೆ ಮೊಬೈಲ್ ಗೇಮ್ ಆಡಿದರೂ ಕೂಡ ಮೊಬೈಲ್ ಬಿಸಿಯಾಗುವುದಿಲ್ಲ. ಇದರ ಜೊತೆಗೆ -3.9ಎಕ್ಸ್ ದೊಡ್ಡದಾದ ವೇಪರ್ ಚೇಂಬರ್ ಕೂಲಿಂಗ್ ತಂತ್ರಜ್ಞಾನವನ್ನು ಕೂಡ ಇದರಲ್ಲಿ ನೀಡಲಾಗಿದೆ. ಇದಲ್ಲದೆ 4500 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿ ದೀರ್ಘಾವಧಿ ಮೊಬೈಲ್ ಆಟದಲ್ಲಿ ನಿಮಗೆ ಸಹಕರಿಸುತ್ತದೆ. ಇದಲ್ಲದೆ ಈ ಮೊಬೈಲ್ ನ ಇನ್ನೊಂದು ವೈಶಿಷ್ಟ್ಯವಾಗಿರುವ ರೇ ತ್ರೇಸಿಂಗ್ ವೈಶಿಷ್ಟ್ಯ ಆಟದ ವೇಳೆ ನಿಮಗೆ ಬೆಳಕು-ನೆರಳುಗಳ ನೈಜ ಅನುಭವವನ್ನು ನೀಡುತ್ತದೆ. ಹೀಗಾಗಿ ಗೆಮಿಂಗ್ ಅನುಭವ ನಿಮ್ಮ ಕಣ್ಣುಗಳಿಗೆ ಸಾಕಷ್ಟು ಮುದವನ್ನು ನೀಡುತ್ತದೆ. 

ಅಮೂಲ್ಯ ಕ್ಷಣಗಳನ್ನು ಸೆರೆಹಿಡಿಯಲು ಅದ್ಭುತ ಕ್ಯಾಮರಾ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ (Samsung Galaxy S23 FE ) ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು 3ಎಕ್ಸ್ ಆಪ್ಟಿಕಲ್ ಝೂಮ್ ನೊಂದಿಗೆ 50 ಮೆಕಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಒಳಗೊಂಡಿದೆ. ಈ ಕ್ಯಾಮೆರಾ ಯಾವುದೇ ಶಬ್ದ ಅಥವಾ ಪಿಕ್ಸಲೇಷನ್ ಇಲ್ಲದೆ ಅದ್ಭುತ ಮತ್ತು ನಿಖರ ಸ್ಪಷ್ಟತೆಯೊಂದಿಗೆ ಸಣ್ಣ ಪುಟ್ಟ ವಿವರಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಹೊಂದಿದೆ. ಇನ್ನೊಂದೆಡೆ ಅದು ಸೇಲ್ಫಿಯಾಗಿರಲಿ ಅಥವಾ ಪೊರ್ಟ್ರೆಟ್ ಆಗಿರಲಿ ಮುಂಭಾಗದ ಕ್ಯಾಮೆರಾ ರಿಯಲ್ ಟೈಮ್ ಕಲರ್ ನಲ್ಲಿ ಚಿತ್ರಗಳನ್ನು ಸೆರೆಹಿಡಿಯುವುದನ್ನು ಖಚಿತಪಡಿಸುತ್ತದೆ. ವಿಡಿಯೋ ವಿಷಯಕ್ಕೆ ಬಂದಾಗ, ಇದರಿಂದ ನೀವು 8K ನಲ್ಲಿ ವಿಡಿಯೋ ಷೂಟ್ ಮಾಡಬಹುದು. ಇದರ ನೈಟೊಗ್ರಾಫಿ ವೈಶಿಷ್ಟ್ಯ ಮಂದ ಬೆಳಕಿನಲ್ಲಿಯೂ ಕೂಡ ಸ್ಮೂತ್ ಹಾಗೂ ಸ್ಪಷ್ಟ ಕ್ಷಣಗಳನ್ನು ಸೆರೆಹಿಡಿಯುವ ಸಾಮರ್ಥ್ಯ ಕ್ಯಾಮೆರಾಗೆ ಒದಗಿಸುತ್ತದೆ. 

6.4 ಇಂಚಿನ ಅದ್ಭುತ ಡಿಸ್ಪ್ಲೇ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ (Samsung Galaxy S23 FE ) ಫೋನ್ ನ ಮತ್ತೊಂದು ವೈಶಿಷ್ಟ್ಯ ಎಂದರೆ ಇದರ ಡಿಸ್ಪ್ಲೇ ಪರದೆ. ಎ ಫೋನ್ ಡೈನಾಮಿಕ್ ಅಮೋಲೇಡ್ 2ಎಕ್ಸ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು ಎಲ್ಲಾ ಪ್ರಮುಖ ಸಂದರ್ಭಗಳಲ್ಲಿ ವಿಷಯಗಳ ಉತ್ತಮ ವೀಕ್ಷಣೆಯ ಅನುಭವವನ್ನು ನಿಮಗೆ ಒದಗಿಸುತ್ತದೆ. 120ಹೆಚ್ಝೆಡ್ ಅಡಾಪ್ಟಿವ್ ರೀಫ್ರೇಶ್ ರೇಟ್, 1450 ನಿಟ್ಸ್ ಗರಿಷ್ಠ ಹೊಳಪು, ರೋಮಾಂಚಗೊಳಿಸುವ ಕಲರ್ ಕಾಂಟ್ರಾಸ್ಟನೊಂದಿಗೆ ಎಲ್ಲಾ ಅವಿಸ್ಮರಣೀಯ ಸಂದರ್ಭಗಳಲ್ಲಿ ಗೆಮಿಂಗ್ ಮತ್ತು ವೇದಿಯೂ ವೀಕ್ಷಣೆಯ ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ಬಂಧು ಮಿತ್ರರ ಜೊತೆಗೆ ಚಲನ ಚಿತ್ರ ವೀಕ್ಷಿಸಿ ಅಥವಾ ಸ್ನೇಹಿತರ ಜೊತೆಗೂಡಿ ಆಟವನ್ನೇ ಆನಂದಿಸಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ ಫೋನ್ ನ ಡಿಸ್ಪ್ಲೇ ನಿಮ್ಮ ಮನಸ್ಸಿನ ಮೇಲೆ ಶಾಶ್ವತ ಪ್ರಭಾವವನ್ನು ಬೀರುವುದು ಮಾತ್ರ ಗ್ಯಾರಂಟಿ. 

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ  ಫೋನ್ ಅದ್ಭುತ ವಿನ್ಯಾಸ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ (Samsung Galaxy S23 FE ) ಫೋನ್ ಕೇವಲ ಒಂದು ಉನ್ನತ ದರ್ಜೆಯ ಕಾರ್ಯಕ್ಷಮತೆಯನ್ನು ಮಾತ್ರ ನೀಡದೆ. ಇದರ ಗ್ಲಾಸ್ ಹಾಗೂ ಮೆಟಲ್ ಕಾಂಬಿನೇಷನ್ ಒಳಗೊಂಡ ವಿನ್ಯಾಸ ನಿಮ್ಮ ಮನಸೂರೆಗೊಳಿಸುತ್ತದೆ. ವಿಶೇಷ ಸಂದರ್ಭಗಳಲ್ಲಿನ ನಿಮ್ಮ ಉಡುಪುಗಳ ಹೊಂದಾಣಿಕೆಗಾಗಿ ಕಂಪನಿ ನಿಮಗೆ ಮಿಂಟ್, ಪರ್ಪಲ್ ಹಾಗೂ ಗ್ರಾಫೈಟ್ ಬಣ್ಣಗಳ ಆಯ್ಕೆಯಲ್ಲಿ ಈ ಫೋನ್ ಅನ್ನು ಮಾರುಕಟ್ಟೆಗಿಳಿಸಿದೆ. ಇದಲ್ಲದೆ ನೀವು ಇದರಲ್ಲಿ ಪ್ಯಾಲೆಟ್ ಬಣ್ಣದ ಆಯ್ಕೆಯನ್ನು ಕೂಡ ಆಯ್ದುಕೊಳ್ಳಬಹುದು. ಸುಸ್ಥಿರ ಬದ್ಧತೆಗೆ ಅನುಗುಣವಾಗಿಯೇ ಕಂಪನಿ, ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇನಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಹೊಂದಿಸಿದ್ದು, ಇದು ಎಲ್ಲಾ ಸಂದರ್ಭಗಳ್ಳಿ ನಿಮ್ಮ ಉತ್ಸಾಹಕ್ಕೆ ಹೊಂದಿಕೊಳ್ಳುವಂತಿದೆ. 

ಇದನ್ನೂ ಓದಿ-ದೇಶದ ಸಾರ್ವಜನಿಕ ವಲಯದ ಈ ಬ್ಯಾಂಕ್ ಜೊತೆ ಕೈಜೋಡಿಸಿ ಕೈತುಂಬಾ ಸಂಪಾದನೆ ಮಾಡಿ!

ದೀರ್ಘ ಬಾಳಿಕೆ 
ಸಾಮಾನ್ಯವಾಗಿ ವರ್ಷಾಂತ್ಯದ ಮತ್ತು ಹೊಸವರ್ಷದ ಆಚರಣೆಗಳು ಹೊರಾಂಗಣ ಚಟುವಟಿಕೆಗಳನ್ನು ಒಳಗೊಂಡಿರುತ್ತವೆ ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ (Samsung Galaxy S23 FE ) ನಿಮ್ಮ ಈ ಕಾರ್ಯವನ್ನು ಸುಲಭಗೊಳಿಸುತ್ತದೆ. ಇದರ ಅಲ್ಯೂಮಿನಿಯಂ ಫ್ರೇಮ್ ದೀರ್ಘಕಾಲದ ಬಾಳಿಕೆ ಮತ್ತು ಹಗುರ ತೂಕದ ನಡುವೆ ಸಮತೋಲನವನ್ನು ನೀಡುತ್ತದೆ. ಬಲಿಷ್ಠ ಗೊರಿಲ್ಲಾ ಗ್ಲಾಸ್ ರಕ್ಷಣೆ ಮೊಬೈಲ್ ಗೆ ಉಂಟಾಗುವ ಆಕಸ್ಮಿಕ ಹಾನಿಯ ನಿಮ್ಮ ಚಿಂತೆಯನ್ನು ದೂರಮಾಡುತ್ತದೆ. ಐಪಿ68 ವಾಟರ್ ಪ್ರೂಫ್ ಮತ್ತು ಡಸ್ಟ್ ಪ್ರೂಫ್ ತಂತ್ರಜ್ಞಾನ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ ಅನ್ನು ಎಲ್ಲಾ ಸಂದರ್ಭಗಳಲ್ಲಿ ಅಂದರೆ ನೀವು ಮನೆಯಲ್ಲಿಯೇ ಇರಲಿ ಅಥವಾ ಹೊರಾಂಗಣದಲ್ಲಿಯೇ ಇರಲಿ ನಿಮ್ಮ ಪರ್ಫೆಕ್ಟ್ ಸಂಗಾತಿಯನ್ನಾಗಿಸುತ್ತದೆ. 

ಇದನ್ನೂ ಓದಿ-ಅಂಚೆ ಕಚೇರಿಯ ಈ ಯೋಜನೆಯಲ್ಲಿ ಒಂದು ಬಾರಿ ಹೂಡಿಕೆ ಮಾಡಿ ತಿಂಗಳಿಗೆ ನಿಶ್ಚಿತ ಆದಾಯ ಪಡೆಯಿರಿ, ಇಲ್ಲಿದೆ ಲೆಕ್ಕಾಚಾರ!

ವರ್ಷಾಂತ್ಯದ ಕೊಡುಗೆ-ಕೈಗೆಟಕುವ ಬೆಲೆ-ಕೈಗೆಟಕುವ ಇಎಂಐ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್23 ಎಫ್ಇ (Samsung Galaxy S23 FE ) ಫೋನ್ ಮೇಲೆ ನೀಡಲಾಗುತ್ತಿರುವ ಅದ್ಭುತ ಕೊಡುಗೆಯ ಬಗ್ಗೆ ಹೇಳುವುದಾದರೆ, ಈ ಫೋನ್ ಭಾರತದಲ್ಲಿ ಒಟ್ಟು ಎರಡು ಸ್ಟೋರೇಜ್ ವೇರಿಯಂಟ್ ಗಳಲ್ಲಿ ಲಭ್ಯವಿದೆ. ಇದರ 128ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಮಾರುಕಟ್ಟೆ ಬೆಲೆ ರೂ. 59,999 ಆಗಿದ್ದರೆ, 256ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಫೋನ್ ಬೆಲೆ 64,999 ಆಗಿದೆ. ವಿಶೇಷವೆಂದರೆ ಒಂದು ವೇಳೆ ಈ ಫೋನ್ ಮೇಲೆ ನೀಡಲಾಗುತ್ತಿರುವ ಕ್ಯಾಶ್ ಬ್ಯಾಕ್ ಮತ್ತು ಎಕ್ಸ್ಛೇಂಜ್ ಬೋನಸ್ ಲಾಭವನ್ನು ಪಡೆದರೆ, ನೀವು ಈ ಫೋನ್ ಗಳನ್ನು ಕ್ರಮವಾಗಿ ರೂ. 49,999 ಮತ್ತು ರೂ. 54,999ಕ್ಕೆ ಖರೀದಿಸಬಹುದು. ಹೀಗಾಗಿ ಹೊಸವರ್ಷದ ಹೊಸ ಹುಮ್ಮಸ್ಸಿನಲ್ಲಿ ನಿಮ್ಮ ಪ್ರಿಯಪಾತ್ರರಿಗೆ ಸರ್ಪ್ರೈಜ್ ನೀಡಲು ಇದು ಸೂಕ್ತ ಸಮಯವಾಗಿದೆ. ಈ ಕೊಡುಗೆಯ ಇನ್ನೊಂದು ವಿಶೇಷತೆ ಎಂದರೆ, ಇದರಲ್ಲಿ ನೀವು 30 ತಿಂಗಳುಗಳ ಸುದೀರ್ಘ ಅವಧಿಯ ಲೋ ಕಾಸ್ಟ್ ಇಎಂಐ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು. ಅರ್ಥಾತ್ ಒಂದು ಕಪ್ ಕಾಫಿ ಬೆಲೆಯಯಷ್ಟು ಕಡಿಮೆಯಾಗಿರುವ ಒಂದು ಇಎಂಐ ನಿಮ್ಮ ಜೇಬಿಗೂ ಹೊರೆಯಾಗುವುದಿಲ್ಲ ಮತ್ತು ಅದನ್ನು ಪಾವತಿಸುವ ಮೂಲಕ ನೀವು ಅತ್ಯಾಧುನಿಕ ತಂತ್ರಜ್ಞಾನದ ಈ ಸ್ಮಾರ್ಟ್ ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಹೀಗಾಗಿ ತ್ವರೆ ಮಾಡಿ ಈ ಅದ್ಭುತ ಡೀಲ್ ಮಿಸ್ ಮಾಡಿಕೊಳ್ಳಬೇಡಿ. ಏಕೆಂದರೆ ಇದು ಸೀಮಿತಾವಧಿಯ ಡೀಲ್ ಆಗಿದೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News