ನವದೆಹಲಿ : ಕೆಲವರಿಗೆ ಪ್ರಿಪೇಯ್ಡ್ ಸಿಮ್ ಇಷ್ಟವಾದರೆ, ಮತ್ತೆ ಕೆಲವರಿಗೆ ಫೋನ್ ಮತ್ತೆ ಮತ್ತೆ ರೀಚಾರ್ಜ್ ಮಾಡಿಸುವುದು ಇಷ್ಟವಿರುವುದಿಲ್ಲ. ತಮ್ಮ ಸಿಮ್ ಅನ್ನು ಪ್ರಿಪೇಯ್ಡ್ ನಿಂದ ಪೋಸ್ಟ್ ಪೇಯ್ಡ್ ಗೆ (Post paid) ಅಥವಾ ಪೋಸ್ಟ್ ಪೇಯ್ಡ್ ನಿಂದ ಪ್ರಿಪೇಯ್ಡ್ ಗೆ ಪೋರ್ಟ್ (SIM Port) ಮಾಡಬೇಕೆಂದು ಅನೇಕ ಬಾರಿ ಅನ್ನಿಸುತ್ತಿರಬಹುದು. ಆದರೆ, ಈ ಕೆಲಸ ಬಹಳ ದೀರ್ಘ ಪ್ರೋಸೆಸ್ ತೆಗೆದುಕೊಳ್ಳುತ್ತದೆ.  ಈಗ ಸುಲಭವಾಗಿ ನಿಮ್ಮ SIM ಅನ್ನು ಪೋರ್ಟ್ ಮಾಡಬಹುದು.  ಸಿಮ್ ಪೋರ್ಟಿಂಗ್‌ಗಾಗಿ ಕೆವೈಸಿ ರಚಿಸಲು ಇಲ್ಲಿದೆ  ಕೆಲವು ಸುಲಭ ಮಾರ್ಗಗಳು.


COMMERCIAL BREAK
SCROLL TO CONTINUE READING

ಫೋನ್ ಮೂಲಕ, ಡಿಜಿಟಲ್ ಆಗಿ ಕೆವೈಸಿ ರಚಿಸಿ : 
ನೀವು ಹೊಸ ಕನೆಕ್ಷನ್ ಅಥವಾ ಸಿಮ್ ತೆಗೆದುಕೊಂಡಿದ್ದು, ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಅಥವಾ ಪೋಸ್ಟ್‌ಪೇಯ್ಡ್‌ನಿಂದ ಪ್ರಿಪೇಯ್ಡ್‌ಗೆ ಬದಲಾಯಿಸಿದರೆ, ಅದಕ್ಕಾಗಿ ಕೆವೈಸಿಯ (KYC) ಅಗತ್ಯವಿರುತ್ತದೆ. ಈಗ ಈ ಕೆವೈಸಿಯನ್ನು ಡಿಜಿಟಲ್ ಆಗಿ ರಚಿಸಬಹುದು.  ಇದು ಫಾರ್ಮ್ ಭರ್ತಿ ಮಾಡುವ ಸಮಯವನ್ನು ಉಳಿಸುತ್ತದೆ. ಈಗ ಈ ಎಲ್ಲ ಕೆಲಸಗಳಿಗೆ ಡಿಜಿಟಲ್ ಕೆವೈಸಿ (Digital KYC) ಮಾನ್ಯವಾಗಿರುತ್ತದೆ. 


ಇದನ್ನೂ ಓದಿ : ಕಡಿಮೆ ಬೆಲೆಯ ರಿಯಲ್‌ಮಿ ಸ್ಮಾರ್ಟ್‌ಫೋನ್‌ ಬಿಡುಗಡೆ, 50MP ಕ್ಯಾಮೆರಾದೊಂದಿಗೆ ಸಿಗಲಿದೆ ಈ ಈ ವೈಶಿಷ್ಟ್ಯಗಳು


ಒಮ್ಮೆ ಕೆವೈಸಿ ರಚಿಸಿದರೆ ಸಾಕು : 
ಮೊದಲು,  ನಂಬರ್ ಅನ್ನು ಪ್ರಿಪೇಯ್ಡ್‌ನಿಂದ ಪೋಸ್ಟ್‌ಪೇಯ್ಡ್‌ಗೆ ಬದಲಾಯಿಸಿದರೆ ಅಥವಾ ಸಿಮ್ ಅನ್ನು ಪೋಸ್ಟ್‌ಪೇಯ್ಡ್‌ನಿಂದ ಪ್ರಿಪೇಯ್ಡ್‌ಗೆ ಪೋರ್ಟ್ ಮಾಡಬೇಕಾದರೆ, ಪ್ರತಿ ಬಾರಿಯೂ ಕೆವೈಸಿ (KYC) ಮಾಡಬೇಕಾಗುತ್ತಿತ್ತು. ಅಂದರೆ ಸಿಮ್ ಅನ್ನು ಎಷ್ಟು ಬಾರಿ ಪೋರ್ಟ್ ಮಾಡುತ್ತೀರಿ, ಅಷ್ಟೂ ಬಾರಿ ಕೆವೈಸಿ ರಚಿಸಬೇಕಿತ್ತು. ಆದರೆ ಈಗ ಕೇವಲ ಒಂದು ಸಲ  ಕೆವೈಸಿ ಮಾಡಿದರೆ ಸಾಕು.  


ಒಂದು ರೂಪಾಯಿಯಲ್ಲಿ  KYC ಮಾಡಿ:
ನೀವೇ KYC ಮಾಡಲು ಬಯಸಿದರೆ, ಆ ಆಯ್ಕೆಯನ್ನು ಕೂಡಾ ನೀಡಲಾಗಿದೆ. ನೀವು ಸಿಮ್ ಅನ್ನು ಪೋರ್ಟ್ ಮಾಡುತ್ತಿರುವ ಕಂಪನಿಯ ಆಪ್ ಅನ್ನು ಡೌನ್‌ಲೋಡ್ ಮಾಡಿ. ನಿಮ್ಮ ಫೋನ್ ನಂಬರ್ ಅನ್ನು ಆ ಆಪ್‌ನಲ್ಲಿ ನೋಂದಾಯಿಸಿಕೊಳ್ಳಿ. ನಿಮಗೆ ಗೊತ್ತಿರುವವರ ನಂಬರ್ ಅನ್ನು ಪರ್ಯಾಯ ಸಂಖ್ಯೆಯಾಗಿ ಫೀಡ್ ಮಾಡಿ. ಕಂಪನಿಯು ಲಾಗ್-ಇನ್ ಕಳುಹಿಸಿದ ಒನ್-ಟೈಮ್ ಪಾಸ್‌ವರ್ಡ್‌ನೊಂದಿಗೆ (OTP), ಸೆಲ್ಫ್ -ಕೆವೈಸಿ ಆಯ್ಕೆಯನ್ನು ಕ್ಲಿಕ್ ಮಾಡಿ. ಅಲ್ಲಿ ಕೇಳಿದ ವಿವರಗಳನ್ನು ಭರ್ತಿ ಮಾಡಿ. ನಿಮ್ಮ ದಾಖಲೆಗಳನ್ನು ಅಪ್‌ಲೋಡ್ ಮಾಡಿ. ಹೀಗೆ ಕೇವಲ ಒಂದು ರೂಪಾಯಿಯಲ್ಲಿ ಸೆಲ್ಫ್ ಕೆವೈಸಿ (Self KYC) ಪ್ರಕ್ರಿಯೆಯನ್ನು ಪೂರ್ಣಗೊಳಿಸಬಹುದು. 


ಇದನ್ನೂ ಓದಿ : YouTube's new feature: ಯೂಟ್ಯೂಬ್ ಬಳಕೆದಾರರೇ ನೀವೂ ಕೂಡ ಈ ಅದ್ಭುತ ವೈಶಿಷ್ಟ್ಯವನ್ನು ಬಳಸಿದ್ದೀರಾ!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.