YouTube's new feature: ಯೂಟ್ಯೂಬ್ ಬಳಕೆದಾರರೇ ನೀವೂ ಕೂಡ ಈ ಅದ್ಭುತ ವೈಶಿಷ್ಟ್ಯವನ್ನು ಬಳಸಿದ್ದೀರಾ!

YouTube's new feature:  ಈಗ ಯೂಟ್ಯೂಬ್ ಬಳಕೆದಾರರು 100 ಕ್ಕೂ ಹೆಚ್ಚು ಭಾಷೆಗಳ ನಡುವೆ ಕಾಮೆಂಟ್‌ಗಳನ್ನು ಭಾಷಾಂತರಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಬಳಕೆದಾರರು ಕಾಮೆಂಟ್ ವಿಭಾಗಕ್ಕೆ ಹೋಗಿ ಅನುವಾದ ಆಯ್ಕೆಯನ್ನು ಕ್ಲಿಕ್ ಮಾಡಬೇಕು.

Written by - Yashaswini V | Last Updated : Sep 16, 2021, 07:35 AM IST
  • ಯೂಟ್ಯೂಬ್‌ನ ಹೊಸ ವೈಶಿಷ್ಟ್ಯ
  • ಈ ಹೊಸ ವೈಶಿಷ್ಟ್ಯದ ಸಹಾಯದಿಂದ ನೀವು ತಕ್ಷಣ ಕಾಮೆಂಟ್‌ಗಳನ್ನು ಭಾಷಾಂತರಿಸಲು ಸಾಧ್ಯವಾಗುತ್ತದೆ
  • ನಿಮ್ಮ ಸ್ವಂತ ಭಾಷೆಯಲ್ಲಿ ಎಲ್ಲಾ ಕಾಮೆಂಟ್‌ಗಳನ್ನು ಓದಬಹುದು
YouTube's new feature: ಯೂಟ್ಯೂಬ್ ಬಳಕೆದಾರರೇ ನೀವೂ ಕೂಡ ಈ ಅದ್ಭುತ ವೈಶಿಷ್ಟ್ಯವನ್ನು ಬಳಸಿದ್ದೀರಾ! title=
YouTube's new feature: ಯೂಟ್ಯೂಬ್ ಬಳಕೆದಾರರಿಗೆ ಸಿಗಲಿದೆ ಹೊಸ ಅದ್ಭುತ ವೈಶಿಷ್ಟ್ಯ

ನವದೆಹಲಿ: YouTube's new feature- ಅತಿದೊಡ್ಡ ಡಿಜಿಟಲ್ ವಿಡಿಯೋ ವೇದಿಕೆಯಾದ ಯೂಟ್ಯೂಬ್ ತನ್ನ ಬಳಕೆದಾರರ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು ಕೆಲವು ಹೊಸ ವೈಶಿಷ್ಟ್ಯಗಳನ್ನು (YouTube's new feature) ತರುತ್ತಲೇ ಇರುತ್ತದೆ. ಈ ಬಾರಿ ಯೂಟ್ಯೂಬ್ (YouTube) ತನ್ನ ಬಳಕೆದಾರರ ಭಾಷೆಯನ್ನು ನೋಡಿಕೊಂಡಿದೆ. ವಾಸ್ತವವಾಗಿ, ಈಗ ಹೊಸ ಅಪ್‌ಡೇಟ್ ನಂತರ, ಯೂಟ್ಯೂಬ್ ಬಳಕೆದಾರರು 100 ಕ್ಕೂ ಹೆಚ್ಚು ಭಾಷೆಗಳ ನಡುವೆ ಕಾಮೆಂಟ್‌ಗಳನ್ನು ಭಾಷಾಂತರಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವು ಪ್ರಸ್ತುತ ಮೊಬೈಲ್ ಬಳಕೆದಾರರಿಗೆ ಲಭ್ಯವಾಗುತ್ತಿದೆ. 

ಕಾಮೆಂಟ್ ವಿಭಾಗದಲ್ಲಿ ಹೊಸ ಆಯ್ಕೆ:
ಈ ವೈಶಿಷ್ಟ್ಯವು ಯೂಟ್ಯೂಬ್ ಮೊಬೈಲ್ ಆಪ್‌ನಲ್ಲಿ (Youtube Mobile App) ತಕ್ಷಣ ಭಾಷಾಂತರಿಸುವ ಮೂಲಕ ಇತರ ಭಾಷೆಗಳಲ್ಲಿ ಕಾಮೆಂಟ್‌ಗಳನ್ನು ಓದಲು ಬಳಕೆದಾರರನ್ನು ಶಕ್ತಗೊಳಿಸುತ್ತದೆ. ಯೂಟ್ಯೂಬ್ ಆಪ್ ಈಗ ಪ್ರತಿ ಕಾಮೆಂಟ್ ಕೆಳಗೆ ಭಾಷಾಂತರ ಬಟನ್ ಅನ್ನು ಹೊಂದಿದೆ, ಅದು ಆ ಕಾಮೆಂಟ್ ನಲ್ಲಿರುವ ಪಠ್ಯವನ್ನು ಅನುವಾದಿಸುತ್ತದೆ. ಯೂಟ್ಯೂಬ್ ಬಳಕೆದಾರರು ಅನುವಾದಿತ ಪಠ್ಯ ಮತ್ತು ಪ್ರಾದೇಶಿಕ ಭಾಷೆಯಲ್ಲಿ ಪೋಸ್ಟ್ ಮಾಡಿದ ಮೂಲ ಕಾಮೆಂಟ್ ನಡುವೆ ಸುಲಭವಾಗಿ ಫ್ಲಿಪ್ ಮಾಡಬಹುದು.

ಇದನ್ನೂ ಓದಿ- Top-4 Smartphones- 6ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಟಾಪ್ 4 ಸ್ಮಾರ್ಟ್‌ಫೋನ್‌ಗಳಿವು

ಈ ಆಯ್ಕೆಯು ಮೊಬೈಲ್‌ನಲ್ಲಿ ಮಾತ್ರ ಲಭ್ಯವಿರುತ್ತದೆ:
ಪ್ರಸ್ತುತ, ಕಂಪನಿಯು ಯೂಟ್ಯೂಬ್ (YouTube) ಮೊಬೈಲ್ ಬಳಕೆದಾರರಿಗಾಗಿ ಹೊಸ ಭಾಷಾಂತರದ ಬಟನ್ ಅನ್ನು ಪ್ರಕಟಿಸಲು ಟ್ವೀಟ್ ಮಾಡಿದೆ. ಆಂಡ್ರಾಯ್ಡ್ (Android) ಮತ್ತು ಐಒಎಸ್ (iOS) ಎರಡಕ್ಕೂ ಯೂಟ್ಯೂಬ್ ಆಪ್‌ನಲ್ಲಿ ಈ ಫೀಚರ್ ಲೈವ್ ಆಗಿದೆ ಮತ್ತು ಅನುವಾದ ಬಟನ್ ಅನ್ನು ಕಾಮೆಂಟ್‌ಗಳ ಕೆಳಗೆ ನೋಡಬಹುದು. ಉದಾಹರಣೆಗೆ, ವೀಡಿಯೊದ ಕೆಳಗೆ ಬೇರೆ ಭಾಷೆಯಲ್ಲಿ ಪೋಸ್ಟ್ ಮಾಡಿದ ಕಾಮೆಂಟ್‌ಗಳು ನಿಮ್ಮ ಮೂಲ ಭಾಷೆಯನ್ನು ಇಂಗ್ಲಿಷ್‌ಗೆ ಹೊಂದಿಸಿದರೆ ಪಠ್ಯದ ಕೆಳಗೆ 'ಇಂಗ್ಲಿಷ್‌ಗೆ ಅನುವಾದಿಸಿ' ಎಂಬ ಆಯ್ಕೆಯನ್ನು ಹೊಂದಿರುತ್ತದೆ. ಈ ಬಟನ್ ಪ್ರತಿ ಕಾಮೆಂಟ್ ಬಾಕ್ಸ್‌ನಲ್ಲಿ ತೋರಿಸಿರುವ ಲೈಕ್, ಡಿಸ್‌ಲೈಕ್ ಮತ್ತು ರಿಪ್ಲೈ ಆಯ್ಕೆಗಳ ಮೇಲೆ ಇರುತ್ತದೆ.

ಇದನ್ನೂ ಓದಿ- ದೀರ್ಘಕಾಲದ ನಿರೀಕ್ಷೆಗೆ ತೆರೆ ಎಳೆದ WhatsApp, ಮಾಸ್ ಲೆವಲ್ ನಲ್ಲಿ ಅದ್ಬುತ ವೈಶಿಷ್ಟ್ಯದ ಬಿಡುಗಡೆ

100 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಬಹುದು:
ಯೂಟ್ಯೂಬ್ ಟ್ರಾನ್ಸ್‌ಲೇಟ್ ಬಟನ್ ಕಾಮೆಂಟ್ ಅನ್ನು ತಕ್ಷಣವೇ ಅನುವಾದಿಸುತ್ತದೆ. ಯೂಟ್ಯೂಬ್ (YouTube) ಆಪ್ ಸ್ಪ್ಯಾನಿಷ್, ಪೋರ್ಚುಗೀಸ್, ಡಾಯ್ಚ್, ಫ್ರೆಂಚ್, ಬಹಾಸಾ ಮತ್ತು ಹೆಚ್ಚಿನವುಗಳನ್ನು ಒಳಗೊಂಡಂತೆ 100 ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಿಸಲು ಬೆಂಬಲಿಸುತ್ತದೆ. ಈ ಆಯ್ಕೆಯು ಕಾಮೆಂಟ್ ಅನ್ನು ಸ್ವಯಂಚಾಲಿತವಾಗಿ ಭಾಷಾಂತರಿಸುವುದಿಲ್ಲ. ನೀವು ಕಾಮೆಂಟ್‌ಗಳನ್ನು ಭಾಷಾಂತರಿಸಲು ಬಯಸಿದಾಗಲೆಲ್ಲಾ ನೀವು ಬಟನ್ ಮೇಲೆ ಕ್ಲಿಕ್ ಮಾಡಬೇಕು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News