Google Accounts: ಹ್ಯಾಕರ್‌ಗಳು ಪಾಸ್‌ವರ್ಡ್ ಇಲ್ಲದೆಯೇ ನಿಮ್ಮ ಅಕೌಂಟ್‌ಗಳನ್ನು ನಿಯಂತ್ರಿಸಬಲ್ಲರು! ಹೇಗೆ ಗೊತ್ತಾ?
Google Account Hack: Google ಖಾತೆಗಳನ್ನು ಬಳಸುತ್ತಿರುವಿರಾ? ಆದರೆ, ನಿಮ್ಮ ಖಾತೆ ಸುರಕ್ಷಿತವಾಗಿದೆಯೇ? ಒಂದೊಮ್ಮೆ ಪರಿಶೀಲಿಸಿಕೊಳ್ಳಿ ಏಕೆಂದರೆ ಪಾಸ್‌ವರ್ಡ್ ಅಗತ್ಯವಿಲ್ಲದೇ Google ಖಾತೆಗಳನ್ನು ಪ್ರವೇಶಿಸಲು ಹ್ಯಾಕರ್‌ಗಳು ಸುಲಭವಾದ ಮಾರ್ಗವನ್ನು ಕಂಡುಕೊಂಡಿದ್ದಾರೆ.
Google accounts: ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದಿಂದಾಗಿ ಎಲ್ಲವೂ ಸಾಧ್ಯ ಎನ್ನುವಂತಾಗಿದೆ.. ತಂತ್ರಜ್ಞಾನದಲ್ಲಿ Google ಖಾತೆಗಳು ಸೇರಿವೆ.. ಈ Google ಅಕೌಂಟ್‌ಗಳನ್ನು ಬಳಸುತ್ತಿರುವವರು ಎಚ್ಚರವಹಿಸಬೇಕು ಏಕೆಂದರೆ ನಿಮಗೆ ತಿಳಿಯದೆ ನಿಮ್ಮ Google ಖಾತೆ ಹ್ಯಾಕ್ ಮಾಡಬಹುದು. ಇದಕ್ಕಾಗಿಯೇ ಹ್ಯಾಕರ್‌ಗಳು ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ.
ನಿಮ್ಮ Google ಖಾತೆಯ ಪಾಸ್‌ವರ್ಡ್ ಅನ್ನು ಬದಲಿಸಿದ ನಂತರವೂ ಈ Google ಖಾತೆಗಳು ಹ್ಯಾಕ್ ಆಗಬಹುದು.. ಮಾಲ್‌ವೇರ್ ಮತ್ತು ಫಿಶಿಂಗ್ ದಾಳಿಗಳಿಂದ ಬಳಕೆದಾರರನ್ನು ರಕ್ಷಿಸಲು Google ಇದೀಗ ತತ್‌ಕ್ಷಣದ ರಕ್ಷಣೆಯನ್ನು ಅಪ್‌ಗ್ರೇಡ್ ಮಾಡುತ್ತಿದೆ.
ಇದನ್ನೂ ಓದಿ-Republic Day Sale 2024: ಈ ದಿನದಿಂದ ಆರಂಭಗೊಳ್ಳಲಿದೆ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್, ದಿನಾಂಕ ಘೋಷಣೆ!
ಆದರೆ ಇದೀಗ ನಿಮ್ಮ ಅಕೌಂಟ್‌ನ ಪಾಸ್‌ವರ್ಡ್‌ನ ನೀವು ರಿಸೆಟ್ ಮಾಡಿಕೊಂಡರೂ ಅದನ್ನು ಹಿಂಪಡೆಯಲು ಹ್ಯಾಕರ್‌ಗಳು ಈಗ ಒಂದು ಮಾರ್ಗವನ್ನು ಕಂಡುಕೊಂಡಿದ್ದಾರೆ. ಬಳಕೆದಾರರು ತಮ್ಮ ಪಾಸ್‌ವರ್ಡ್ ಅನ್ನು ರಿಸೆಟ್ ಮಾಡಿದ ನಂತರವೂ Google ಖಾತೆಯನ್ನು ಹ್ಯಾಕ್ ಮಾಡಬಹುದಾಗಿದೆ..
ವರದಿಯ ಪ್ರಕಾರ, Google Chrome ಪ್ರಸ್ತುತ ಬಳಕೆದಾರರನ್ನು ಮಾಲ್‌ವೇರ್‌ನಿಂದ ಸುರಕ್ಷಿತವಾಗಿರಿಸಲು ಬ್ರೌಸರ್ ಅನ್ನು ಅಪ್‌ಗ್ರೇಡ್ ಮಾಡುವ ಪ್ರಕ್ರಿಯೆಯಲ್ಲಿದೆ. ಈ ಕುರಿತು ಗೂಗಲ್ 'ಇಂತಹ ತಂತ್ರಗಳಿಂದ Google ಖಾತೆಗಳನ್ನು ರಕ್ಷಿಸಲು ನಾವು ಬ್ರೌಸರ್ ಅನ್ನು ಅಪ್‌ಗ್ರೇಡ್ ಮಾಡುತ್ತೇವೆ. ನಾವು ಬಳಕೆದಾರರ ಖಾತೆಗಳನ್ನು ಮಾಲ್‌ವೇರ್‌ನಿಂದ ಸುರಕ್ಷಿತವಾಗಿರಿಸಿಕೊಳ್ಳುತ್ತೇವೆ. ಹ್ಯಾಕ್ ಆಗಿರುವ ಖಾತೆಗಳನ್ನು ಗುರುತಿಸಿ ಅವುಗಳನ್ನು ಸುರಕ್ಷಿತವಾಗಿರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ-ಸರ್ಕಾರದ ಆದೇಶದ ಮೇರೆಗೆ 2 appಗಳನ್ನು ಬ್ಯಾನ್ ಮಾಡಿದ Apple ಮತ್ತು Google
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ