Gmail Latest Update: ಬಳಕೆದಾರರ ಉತ್ತಮ ಅನುಭವಕ್ಕಾಗಿ ಗೂಗಲ್ ತನ್ನ ವೈಶಿಷ್ಟ್ಯಗಳನ್ನು ನಿರಂತರವಾಗಿ ನವೀಕರಿಸುತ್ತಲೇ ಇರುತ್ತದೆ. ಇದೀಗ ಕಂಪನಿಯು ಜಿಮೇಲ್ ಮತ್ತು ಚಾಟ್‌ಗಾಗಿ ಮೂರು ಹೊಸ ವೈಶಿಷ್ಟ್ಯಗಳನ್ನು ಜಾರಿಗೆ ತಂದಿದೆ. ಈ ವೈಶಿಷ್ಟ್ಯಗಳ ಸಹಾಯದಿಂದ, ಬಳಕೆದಾರರ ಹುಡುಕಾಟ ಅನುಭವವು ಮತ್ತಷ್ಟು ಉತ್ತಮವಾಗಲಿದೆ. Google ಸರ್ಚ್ ಸಜೆಶನ್, Gmail ಲೇಬಲ್‌ಗಳು ಮತ್ತು ರಿಲೇಟೆಡ್ ರಿಸಲ್ಟ್ ಎಂಬ 3 ಹೊಸ ವೈಶಿಷ್ಟ್ಯಗಳನ್ನು ಶಾಮೀಳುಗೊಲಿಸಿದೆ. ಕಂಪನಿಯ ಪ್ರಕಾರ, ಈ ವೈಶಿಷ್ಟ್ಯಗಳ ಸಹಾಯದಿಂದ ಬಳಕೆದಾರರು ನಿಖರವಾದ ಮತ್ತು ಕಸ್ಟಮೈಸ್ ಮಾಡಿದ ಹುಡುಕಾಟ ಆಯ್ಕೆ ಮತ್ತು ಫಲಿತಾಂಶಗಳನ್ನು ಪಡೆಯಲಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

Google ಈ ವೈಶಿಷ್ಟ್ಯವನ್ನು ಸದ್ಯಕ್ಕೆ ಕೆಲವೇ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಾಗುವಂತೆ ಮಾಡಿದೆ, ಎಲ್ಲಾ ಬಳಕೆದಾರರಿಗೆ ಈ ವೈಶಿಷ್ಟ್ಯಗಳನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಮುಂದಿನ ದಿನಗಳಲ್ಲಿ, ಅವುಗಳನ್ನು ಎಲ್ಲಾ ಬಳಕೆದಾರರಿಗೆ ಲಭ್ಯವಾಗುವಂತೆ ಮಾಡಲಾಗುವುದು. ಈ ವೈಶಿಷ್ಟ್ಯಗಳು ಯಾವುದೇ ನಿರ್ವಾಹಕ ನಿಯಂತ್ರಣವನ್ನು ಹೊಂದಿರುವುದಿಲ್ಲ ಎಂದು ಗೂಗಲ್ ತನ್ನ ಬ್ಲಾಗ್ ಪೋಸ್ಟ್‌ಗಳಲ್ಲಿ ತಿಳಿಸಿದೆ. ಎಲ್ಲಾ ಮೂರು ಹೊಸ ವೈಶಿಷ್ಟ್ಯಗಳು ಎಲ್ಲಾ Google Workplace ಗ್ರಾಹಕರಿಗೆ, G Suite Basic ಮತ್ತು ಬಿಸ್ನೆಸ್ ಬಳಕೆದಾರರಿಗೆ ಲಭ್ಯವಿರಲಿವೆ. Google Chat ಸಲಹೆಗಳ ವೈಶಿಷ್ಟ್ಯವು ಈಗಾಗಲೇ Android ಸಾಧನಗಳಲ್ಲಿ ಲಭ್ಯವಿದೆ. ಆದರೆ ಈ ವಾರ ಅದನ್ನು ಐಒಎಸ್‌ನಲ್ಲಿಯೂ ಕೂಡ ಹೊರತರಲಿದೆ.


ಸರ್ಚ್ ಸಜೆಶನ್ ಪ್ರಯೋಜನಗಳು
ಹುಡುಕಾಟ ಫಲಿತಾಂಶದ
ಜೊತೆಗೆ, ಬಳಕೆದಾರರು ಹುಡುಕಾಟ ಪ್ರಶ್ನೆಯನ್ನು ಸಹ ನೋಡಲು ಇದರಿಂದ ಸಾಧ್ಯವಾಗಲಿದೆ. ಏಕೆಂದರೆ ಹೆಚ್ಚಿನ ಬಳಕೆದಾರರು ಹಿಂದಿನ ಹುಡುಕಾಟದ ಇತಿಹಾಸವನ್ನು ಆಧರಿಸಿ ಚಾಟ್ ಹುಡುಕಾಟದಲ್ಲಿ ಟೈಪ್ ಮಾಡುತ್ತಾರೆ. ಸುಲಭವಾದ ಭಾಷೆಯಲ್ಲಿ ಹೇಳುವುದಾದರೆ, ನೀವು ಏನನ್ನಾದರೂ ಟೈಪ್ ಮಾಡಿದರೆ, ನಂತರ ನೀವು ಚಾಟ್ ಹುಡುಕಾಟ ಬಾರ್‌ನಲ್ಲಿ ಅದಕ್ಕೆ ಸಂಬಂಧಿಸಿದ ಸಲಹೆಗಳನ್ನು ಪಡೆಯಲು ಪ್ರಾರಂಭಿಸುವಿರಿ. ಇದರ ಸಹಾಯದಿಂದ ಬಳಕೆದಾರರು ಮೊಬೈಲ್‌ನಲ್ಲಿ ಪ್ರಮುಖ ಸಂದೇಶಗಳು, ಫೈಲ್‌ಗಳು ಇತ್ಯಾದಿಗಳನ್ನು ಮರುಪರಿಶೀಲಿಸಲು ಸಾಧ್ಯವಾಗಲಿದೆ.


ಇದನ್ನೂ ಓದಿ-Snake: ಹಾವನ್ನು ಮನೆಗೆ ಪ್ರವೇಶಿಸದಂತೆ ಹೇಗೆ ತಡೆಯಬೇಕು? ಪ್ರವೇಶಿಸಿದರೂ ಅದನ್ನು ಹೇಗೆ ಹೊರಹಾಕಬೇಕು?


ಲೇಬಲ್ ಗಳು ನಿಮ್ಮ Gmail ನಲ್ಲಿನ ಹುಡುಕಾಟದ ಪ್ರಕ್ರಿಯೆಯನ್ನು ಸುಲಭಗೊಳಿಸಲಿದೆ
Gmail ಲೇಬಲ್ ವೈಶಿಷ್ಟ್ಯವು ಪ್ರಸ್ತುತ Android ಮತ್ತು iOS ನಲ್ಲಿ ಲಭ್ಯವಿದೆ. ಆದರೆ ಶೀಘ್ರದಲ್ಲೇ ಈ ವೈಶಿಷ್ಟ್ಯವು ವೆಬ್‌ನಲ್ಲಿಯೂ ಲಭ್ಯವಾಗಲಿದೆ. ಇದರ ಸಹಾಯದಿಂದ, ಬಳಕೆದಾರರು ತಮ್ಮ ಸಂದೇಶವನ್ನು ನಿರ್ದಿಷ್ಟ Gmail ಲೇಬಲ್ ಅಡಿಯಲ್ಲಿ ಹುಡುಕಲು ಸಾಧ್ಯವಾಗಲಿದೆ. ಸರಳ ಭಾಷೆಯಲ್ಲಿ ಅರ್ಥಮಾಡಿಕೊಳ್ಳುವುದಾದರೆ, ನೀವು ಒಂದೇ ಸ್ಥಳದಲ್ಲಿ ಒಂದೇ ರೀತಿಯ ಲೇಬಲ್‌ಗಳೊಂದಿಗೆ ಸಂದೇಶಗಳನ್ನು ಪಡೆಯುವಿರಿ. ಇದು ನಿಮ್ಮ ಪ್ರಮುಖ ಸಂದೇಶಗಳನ್ನು ಹುಡುಕಲು ನಿಮಗೆ ಸಹಾಯ ಮಾಡುತ್ತದೆ.


ಇದನ್ನೂ ಓದಿ-Smartphone: ದೇಶದಲ್ಲಿಯೇ ಅತೀ ಅಗ್ಗದ ಬೆಲೆಗೆ ಮಾರಾಟವಾಗ್ತಿದೆ ಈ ಸ್ಮಾರ್ಟ್ ಫೋನ್: ಇಂದೇ ಖರೀದಿಸಿ


'ಸಂಬಂಧಿತ ಫಲಿತಾಂಶ'ದ ಪ್ರಯೋಜನವನ್ನು ಸಹ ಪಡೆಯಬಹುದು
ಇದೇ ವೇಳೆ, ನಾವು ಸಂಬಂಧಿತ ಫಲಿತಾಂಶದ ವೈಶಿಷ್ಟ್ಯದ ಕುರಿತು ಹೇಳುವುದಾದರೆ, ಇದನ್ನು ನೀವು ವೆಬ್‌ನಲ್ಲಿ ಬಳಸಲು ಸಾಧ್ಯವಾಗಲಿದೆ. ಬಳಿಕ ಅದನ್ನು ಮೊಬೈಲ್ ಅಪ್ಲಿಕೇಶನ್‌ಗೆ ಲಿಂಕ್ ಮಾಡಲಾಗುವುದು. ಈ ವೈಶಿಷ್ಟ್ಯವು Gmail ಹುಡುಕಾಟ ಪ್ರಶ್ನೆಗಳಿಗೆ, ಯಾವುದೇ ಫಲಿತಾಂಶಗಳನ್ನು ಹಿಂತಿರುಗಿಸುವುದಿಲ್ಲ. ಇದರ ಪ್ರಯೋಜನವೆಂದರೆ ನೀವು ಜಿಮೇಲ್‌ನಲ್ಲಿ ಏನನ್ನಾದರೂ ಹುಡುಕುವಾಗ, ಅದಕ್ಕೆ ಸಂಬಂಧಿಸಿದ ಫಲಿತಾಂಶಗಳನ್ನು ಸಹ ಇದು ತೋರಿಸುತ್ತದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ