Snake: ಹಾವನ್ನು ಮನೆಗೆ ಪ್ರವೇಶಿಸದಂತೆ ಹೇಗೆ ತಡೆಯಬೇಕು? ಪ್ರವೇಶಿಸಿದರೂ ಅದನ್ನು ಹೇಗೆ ಹೊರಹಾಕಬೇಕು?

Snakes In The House:ಎಲ್ಲಾ ಹಾವುಗಳು ವಿಷಕಾರಿಯಲ್ಲ ಆದರೆ ಹಾವುಗಳಿಂದ ದೂರವಿರುವುದು ಉತ್ತಮ. ಹಾವನ್ನು ಕೊಳ್ಳಬೇಡಿ ಏಕೆಂದರೆ ಆ ಹಕ್ಕು ಯಾರಿಗೂ ಇಲ್ಲ. ಆದರೆ, ಹಾವುಗಳು ಮನೆಯೊಳಗೆ ಬರದಂತೆ ತಡೆಯಲು ಕೆಲವು ಕ್ರಮಗಳನ್ನು ನೀವು ಕೈಗೊಳ್ಳಬಹುದು.  

Written by - Nitin Tabib | Last Updated : Oct 23, 2022, 10:23 PM IST
  • ತಜ್ಞರ ಪ್ರಕಾರ ಹಾವು ವಿಷಪೂರಿತವಾಗಿದ್ದು, ಅದನ್ನು ನೋಡಿದ ನಂತರ ಜನರು ಭಯಭೀತರಾಗುತ್ತಾರೆ,
  • ಆದರೂ ಅದನ್ನು ಕೊಲ್ಲುವುದು ಸರಿಯಲ್ಲ. ನಿಮ್ಮ ಮನೆಗೆ ಹಾವುಗಳು
  • ಬರುವುದನ್ನು ತಡೆಯುವ ವಿಧಾನಗಳ ಬಗ್ಗೆ ಇಂದು ನಾವು ನಿಮಗೆ ಸಲಹೆಗಳನ್ನು ನೀಡುತ್ತಿದ್ದೇವೆ,
Snake: ಹಾವನ್ನು ಮನೆಗೆ ಪ್ರವೇಶಿಸದಂತೆ ಹೇಗೆ ತಡೆಯಬೇಕು?  ಪ್ರವೇಶಿಸಿದರೂ ಅದನ್ನು ಹೇಗೆ ಹೊರಹಾಕಬೇಕು? title=

Snake: ಮಳೆಗಾಲದಲ್ಲಿ ಹಾವುಗಳು ಮನೆಗೆ ನುಗ್ಗುವ ಘಟನೆಗಳು ಹಲವೆಡೆ ಹೆಚ್ಚಾಗಿ ಕೇಳಿ ಬರುತ್ತಿವೆ. ಹಾವಿನ ಬಿಲ್‌ಗಳಲ್ಲಿ ನೀರು ತುಂಬಿಕೊಳ್ಳುವುದು ಇದಕ್ಕೆ ಕಾರಣ ಎಂದು ಉರಗ ಪ್ರೇಮಿಗಳು ಹೇಳುತ್ತಾರೆ. ಇದೇ ವೇಳೆ, ಕೆಲವು ಪ್ರದೇಶಗಳಲ್ಲಿ ಆಗಾಗ್ಗೆ ಹಾವುಗಳು ಮನೆಯೊಳಗೆ ಬರುವ ಘಟನೆಗಳು ನಡೆಯುತ್ತಲೇ ಇರುತ್ತವೆ. ತಜ್ಞರ ಪ್ರಕಾರ ಹಾವು ವಿಷಪೂರಿತವಾಗಿದ್ದು, ಅದನ್ನು ನೋಡಿದ ನಂತರ ಜನರು ಭಯಭೀತರಾಗುತ್ತಾರೆ, ಆದರೂ ಅದನ್ನು ಕೊಲ್ಲುವುದು ಸರಿಯಲ್ಲ. ನಿಮ್ಮ ಮನೆಗೆ ಹಾವುಗಳು ಬರುವುದನ್ನು ತಡೆಯುವ ವಿಧಾನಗಳ ಬಗ್ಗೆ ಇಂದು ನಾವು ನಿಮಗೆ ಸಲಹೆಗಳನ್ನು ನೀಡುತ್ತಿದ್ದೇವೆ, ಆದರೆ ಅದಕ್ಕೂ ಮೊದಲು ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯ.

ಹಾವುಗಳ ಬಗೆಗಿನ ತಪ್ಪು ಕಲ್ಪನೆಗಳು
>> ಹಾವುಗಳ ಬಗ್ಗೆ ಜನರ ಮನಸ್ಸಿನಲ್ಲಿ ಹಲವಾರು ತಪ್ಪು ಕಲ್ಪನೆಗಳಿವೆ. ಹೆಚ್ಚಿನ ಜನರು ಬಹುತೇಕ ಹಾವುಗಳನ್ನು ವಿಷಕಾರಿ ಎಂದು ಭಾವಿಸುತ್ತಾರೆ ಆದರೆ ಇದು ನಿಜವಲ್ಲ. ದೇಶದಲ್ಲಿ ಕಂಡುಬರುವ ಹಾವುಗಳಲ್ಲಿ ಶೇಕಡಾ 20 ರಷ್ಟು ಮಾತ್ರ ವಿಷಕಾರಿ ಎಂದು ತಜ್ಞರು ಹೇಳುತ್ತಾರೆ.

>> ಹಾವುಗಳ ಉಳಿವು ಇತರ ಪ್ರಾಣಿಗಳಂತೆಯೇ ಮುಖ್ಯವಾಗಿದೆ. ನಮ್ಮ ಆಹಾರ ಚಕ್ರಕ್ಕೆ ಹಾವುಗಳು ಬಹಳ ಮುಖ್ಯ. ಇಲಿಗಳು ಬೆಳೆಗಳಿಗೆ ಹೆಚ್ಚಿನ ಹಾನಿ ಉಂಟುಮಾಡುತ್ತವೆ. ಇಂತಹ ಪರಿಸ್ಥಿತಿಯಲ್ಲಿ, ಹಾವುಗಳು ಬೇಟೆಯಾಡುವ ಮೂಲಕ ಬೆಳೆಗಳನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ.

ಈ ಕ್ರಮಗಳಿಂದ ಹಾವುಗಳು ಮನೆಯೊಳಗೇ ಪ್ರವೇಶಿಸುವುದಿಲ್ಲ
>> ನಿಮ್ಮ ಮನೆಯ ಅಂಗಳದಲ್ಲಿ ಅಥವಾ ಬಾಗಿಲಲ್ಲಿ ನಾಗ್ ದೌನಾ ಎಂಬ ಸಸ್ಯವನ್ನು ನೀವು ನೆಡಬಹುದು. ಈ ಸಸ್ಯವು ವಿಶೇಷ ವಾಸನೆಯನ್ನು ಹೊಂದಿದೆ, ಇದು ಹಾವುಗಳು ಹತ್ತಿರ ಬರದಂತೆ ತಡೆಯುತ್ತದೆ. ಈ ಸಸ್ಯವು ವಿಶೇಷವಾಗಿ ಛತ್ತೀಸ್ಗಢ ರಾಜ್ಯದಲ್ಲಿ ಕಂಡುಬರುತ್ತದೆ.

>> ಗರುಡ ಹಣ್ಣನ್ನು ಮನೆಯ ಗೇಟಿನಲ್ಲಿ ನೇತು ಹಾಕುವುದರಿಂದ ಹಾವು ಮನೆಗೆ ಬರುವುದಿಲ್ಲ ಎಂಬ ನಂಬಿಕೆ ಇದೆ. ಇದನ್ನು ನೋಡಿ ಹಾವುಗಳು ಓಡಿಹೋಗುತ್ತವೆ ಎಂಬ ನಂಬಿಕೆ ಇದೆ. ಇದು ಅನೇಕ ನರ್ಸರಿಗಳಲ್ಲಿ ಕಂಡುಬಂದರೂ ಅಪರೂಪದ ಮರವಾಗಿದೆ.

>> ಸರ್ಪಗಂಧದ ಗಿಡವೂ ಹಾವುಗಳನ್ನು ಓಡಿಸಲು ಸಹಕಾರಿಯಾಗಿದೆ. ಇದನ್ನು ಮಡಕೆಯಲ್ಲಿ ಅಥವಾ ನೆಲದಲ್ಲಿ ನೆಡಬಹುದು. ಈ ಗಿಡದ ವಾಸನೆ ತುಂಬಾ ಕಟುವಾಗಿದ್ದು ಹಾವುಗಳು ಹತ್ತಿರ ಸುಳಿಯುವುದಿಲ್ಲ ಎಂದು ಹೇಳಲಾಗುತ್ತದೆ.

>> ಹಾವುಗಳನ್ನು ತಪ್ಪಿಸಲು, ಇಲಿಗಳನ್ನು ಮನೆಯಿಂದ ದೂರವಿಡಿ. ನಿಮ್ಮ ಮನೆಯು ಕೊಳ, ಕಾಡು ಅಥವಾ ತೆರೆದ ಚರಂಡಿಯ ಸುತ್ತಲೂ ಇದ್ದರೆ, ಆಗ ಇಲಿಗಳು ಮತ್ತು ಕಪ್ಪೆಗಳು ಮನೆಯಲ್ಲಿರಬಹುದು ಮತ್ತು ಹಾವುಗಳು ಸಹ ಬರಬಹುದು.

ಹಾವು ಮನೆಗೆ ಬಂದರೆ ಏನು ಮಾಡಬೇಕು
>> ಹಾವು ಮನೆಗೆ ಪ್ರವೇಶಿಸಿದರೆ, ಉದ್ದವಾದ ಕೋಲು ನಿಮಗೆ ಉಪಯುಕ್ತವಾಗಿರುತ್ತದೆ. ಹಾವನ್ನು ಕೊಲ್ಲಲು ಈ ಕೋಲನ್ನು ಬಳಸಬೇಡಿ, ಆದರೆ ಅದನ್ನು ಹಾವಿನ ಮುಂದೆ ಇರಿಸಿ. ಹಾವು ಅದರ ಮೇಲೆ ಏರುವ ಎಲ್ಲಾ ಸಾಧ್ಯತೆಗಳಿವೆ. ಇದರ ನಂತರ, ಅದನ್ನು ತೆಗೆದುಕೊಂಡು ಅದನ್ನು ಹೊರತೆಗೆಯಿರಿ ಮತ್ತು ಮನೆಯಿಂದ ದೂರವಿರುವ ಕಾಡು ಅಥವಾ ಮರಗಳ ಸುತ್ತಲೂ ಹಾವನ್ನು ಬಿಡಿ.

>> ಹೆಚ್ಚಿನ ಅಪಾಯವಿಲ್ಲದಿದ್ದರೆ, ಹಾವಿನ ಬಳಿ ಗೋಣಿಚೀಲದ ಬಾಯಿಯನ್ನು ತೆರೆಯಿರಿ. ಹಾವು ಅದರೊಳಗೆ ಹೋದರೆ, ಆ ಗೋಣಿಚೀಲವನ್ನು ಕಟ್ಟಿ ಕಾಡಿನಲ್ಲಿ ಎಸೆಯುವುದು ಸುಲಭ.

ಇದನ್ನೂ ಓದಿ-Diabetes Control Tips : ಮಧುಮೇಹ ನಿಯಂತ್ರಣಕ್ಕೆ ದೇಹದ ಈ ಭಾಗದಲ್ಲಿ ಮಸಾಜ್ ಮಾಡಿ

>> ಹಾವು ಮನೆಯೊಳಗೆ ಪ್ರವೇಶಿಸಿದರೆ, ಅದು ಹೊರಗೆ ಹೋಗುವಂತೆ ಕಿಟಕಿ ಮತ್ತು ಬಾಗಿಲು ತೆರೆಯಿರಿ.

ಇದನ್ನೂ ಓದಿ-Diwali 2022: ಈ ಬಾರಿಯ ದೀಪಾವಳಿಯ ಸಂದರ್ಭದಲ್ಲಿ ಈ ರೀತಿ ನಿಮ್ಮ ಆರೋಗ್ಯದ ಕಾಳಜಿವಹಿಸಿ

>> ಹಲವು ಪ್ರಯತ್ನಗಳ ನಂತರವೂ ಕೂಡ ಒಂದು ವೇಳೆ ಹಾವು ಮನೆಯಿಂದ ಹೊರಹೊಗದಿದ್ದರೆ, ನೀವು ಅರಣ್ಯ ಇಲಾಖೆಯನ್ನು ಸಂಪರ್ಕಿಸಬಹುದು ಎಂಬುದನ್ನು ನೆನಪಿನಲ್ಲಿಡಿ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News