ಬೆಂಗಳೂರು : ಬಳಕೆದಾರರ ಸುರಕ್ಷತೆಗಾಗಿ Google Play Store ಹಲವಾರು ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಮಾಲ್‌ವೇರ್ ಮತ್ತು ಜಂಕ್ ಅಪ್ಲಿಕೇಶನ್‌ಗಳನ್ನು ಸ್ಕ್ಯಾನ್ ಮಾಡುವುದು ಮತ್ತು ಅವುಗಳನ್ನು ಸ್ಟೋರ್‌ನಿಂದ ತೆಗೆದುಹಾಕುವುದು ಇದರ ಮುಖ್ಯ ಉದ್ದೇಶವಾಗಿದೆ. ಇದರಿಂದ ಬಳಕೆದಾರರು ಸುರಕ್ಷಿತ ಮತ್ತು ವಿಶ್ವಾಸಾರ್ಹ ಅಪ್ಲಿಕೇಶನ್‌ಗಳನ್ನು ಬಳಸಬಹುದಾಗಿದೆ. Google ಅಪಾಯಕಾರಿ ಅಪ್ಲಿಕೇಶನ್‌ಗಳನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅವುಗಳನ್ನು  ಡಿಲೀಟ್ ಮಾಡುತ್ತದೆ. ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎನ್ನುವ ಕಾರಣಕ್ಕಾಗಿ ಇತ್ತೀಚೆಗೆ, ತಾಂತ್ರಿಕ ಪರೀಕ್ಷೆಯ ಸಮಯದಲ್ಲಿ, Google SD ಮೇಡ್ ಸೇರಿದಂತೆ ಹಲವಾರು 'ಕ್ಲೀನರ್' ಅಪ್ಲಿಕೇಶನ್‌ಗಳನ್ನು ತೆಗೆದುಹಾಕಲಾಗಿದೆ. 


COMMERCIAL BREAK
SCROLL TO CONTINUE READING

'ಕ್ಲೀನರ್' ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ ಪ್ಲೇ ಸ್ಟೋರ್ :
ಅಪ್ಲಿಕೇಶನ್‌ಗಳ ಡೆವಲಪರ್‌ಗಳು ರೆಡ್ಡಿಟ್‌ನಲ್ಲಿ  ಈ appಗಳ ಬಗ್ಗೆ ಶೇರ್ ಮಾಡಿದ್ದಾರೆ. ಇದರ ಪರಿಣಾಮವಾಗಿ ಅವರ ಸಂಪೂರ್ಣ ಖಾತೆಗಳನ್ನು ಕೊನೆಗೊಳಿಸುವ ನಿರ್ಧಾರದೊಂದಿಗೆ ಅವರ ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ನಿಂದ ಥಟ್ಟನೆ ತೆಗೆದುಹಾಕಲಾಗಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, SD ಮೇಡ್ ಅಪ್ಲಿಕೇಶನ್‌ನ ಸಂದರ್ಭದಲ್ಲಿ, ತಮ್ಮ 'ಸ್ಟಾಕರ್‌ವೇರ್ ನೀತಿ'ಯನ್ನು ಉಲ್ಲಂಘಿಸಲಾಗಿದೆ ಎಂದು Google  ಹೇಳಿದೆ.   


ಇದನ್ನೂ ಓದಿ : ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ -ಐತಿಹಾಸಿಕ ಸಾಧನೆ : ಮುಖ್ಯ ಮಂತ್ರಿ ಸಿದ್ದರಾಮಯ್ಯ


ಬಳಕೆದಾರರ ಗೌಪ್ಯತೆ ಅಥವಾ ಡೇಟಾ ಮಾನಿಟರಿಂಗ್ ಸೌಲಭ್ಯವನ್ನು appನಲ್ಲಿ ಸೇರಿಸಿಲ್ಲ ಡೆವಲಪರ್ ಗಳು ಹೇಳಿಕೊಂಡಿದ್ದಾರೆ. SD ಮೇಡ್ ಅಪ್ಲಿಕೇಶನ್‌ನ ಸೊರ್ಸ್ ಕೋಡ್ GitHub ನಲ್ಲಿ ಲಭ್ಯವಿದೆ ಎನ್ನುವುದನ್ನು ಇಂಡಿಕೇಟರ್ಸ್ ಗೆ ಸ್ಪಷ್ಟವಾಗಿ ಹೇಳಲಾಗಿದೆ. ಎಸ್‌ಡಿ ಮೇಡ್ ಆ್ಯಪ್ ಅನ್ನು ತೆಗೆದುಹಾಕುವುದರ ಹಿಂದಿನ ವಿವರವಾದ ಕಾರಣವನ್ನೂ  ಬಹಿರಂಗಪಡಿಸಲಾಗಿದೆ.  


ಪ್ಲೇ ಸ್ಟೋರ್‌ನಿಂದ ತಮ್ಮ ಅಕೌಂಟ್ ಅನ್ನು ಹಠಾತ್  ಡಿಲೀಟ್ ಮಾಡಿರುವ ಬಗ್ಗೆ ಈ ಅಪ್ಲಿಕೇಶನ್‌ಗಳ ಡೆವಲಪರ್‌ಗಳು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ.  ನಿರ್ದಿಷ್ಟವಾಗಿ SD ಮೇಡ್ ಅಪ್ಲಿಕೇಶನ್‌ ತೆಗೆದುಹಾಕಿರುವ ಹಿಂದಿನ ಕಾರಣವೆಂದರೆ Google ನ 'Stalkerware ನೀತಿ'ಯ ಉಲ್ಲಂಘನೆಯಾಗಿದೆ. ಡೆವಲಪರ್‌ನ ಕ್ಲೈಮ್ ಅನ್ನು ಪರಿಗಣಿಸಿ, ಬಳಕೆದಾರರ ಗೌಪ್ಯತೆ ಮತ್ತು ಡೇಟಾವನ್ನು ಫಾಲೋ ಮಾಡಲು ಸಾಧ್ಯವಾಗುವಂತಹ ಯಾವುದೇ ವೈಶಿಷ್ಟ್ಯ ಇದರಲ್ಲಿ ಇಲ್ಲ. ಅಲ್ಲದೆ, SD ಮೇಡ್‌ನ ಸೊರ್ಸ್ ಕೋಡ್ ಅನ್ನು GitHub ನಲ್ಲಿ ಲಿಸ್ಟ್ ಮಾಡಲಾಗಿದೆ. ಎಸ್‌ಡಿ ಮೇಡ್ ಆ್ಯಪ್ ಅನ್ನು ತೆಗೆದುಹಾಕಲು ಈ ಕಾರಣವನ್ನು ನೀಡಲಾಗಿದೆ.


ಇದನ್ನೂ ಓದಿ : Chandrayaan 3: ಚಂದ್ರಯಾನಕ್ಕೂ ಚಿತ್ರದುರ್ಗಕ್ಕೂ ಇದೆ ನಂಟು


ಟರ್ಮಿನೆಟ್ ಹಿಂದಿನ ಕಾರಣ :  
ನಿಮ್ಮ ಡೆವಲಪರ್ ಖಾತೆಯೊಂದಿಗೆ ಸಂಯೋಜಿತವಾಗಿರುವ ಅಪಾಯಕಾರಿ ಅಥವಾ ದುರುಪಯೋಗದ ಮಾದರಿಯನ್ನು ಗುರುತಿಸಲಾಗಿದೆ. ಈ ಹಿನ್ನೆಲೆಯಲ್ಲಿ Google Play ಡೆವಲಪರ್ ವಿತರಣಾ ಒಪ್ಪಂದದ ವಿಭಾಗ 8.3/10.3 ಗೆ ಅನುಗುಣವಾಗಿ ಈ ಕ್ರಮವನ್ನು ತೆಗೆದುಕೊಳ್ಳುವುದಾಗಿ ಗೂಗಲ್ ಹೇಳಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.