Chandrayaan 3: ಚಂದಿರನ ಅಂಗಳದಲ್ಲಿ ಲ್ಯಾಂಡರ್ ಇಳಿಸುವ ಪ್ರಕ್ರಿಯೆ ಚಂದ್ರಯಾನ-3 ರಲ್ಲಿ ಅತ್ಯಂತ ಮಹತ್ವದ ಪ್ರಕ್ರಿಯೆ. ನಿನ್ನೆಯಷ್ಟೇ (ಆಗಸ್ಟ್ 23, 2023) ಇಸ್ರೋ ಚಂದ್ರಯಾನ-3 ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಮಾಡಿದೆ. ಆದರೆ, ಚಂದ್ರಯಾನಕ್ಕೂ ನಮ್ಮ ಕೋಟೆ ನಾಡು ಚಿತ್ರದುರ್ಗಕ್ಕೂ ಇರುವ ನಂಟಿನ ಬಗ್ಗೆ ನಿಮಗೆ ತಿಳಿದಿದೆಯೇ?
ಹೀಗೆ ಚಂದ್ರನ ಅಂಗಳಕ್ಕೆ ಲ್ಯಾಂಡರ್ ಇಳಿಸುವ ತರಬೇತಿ 2017ರಲ್ಲಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿತ್ತು ಎನ್ನುವುದು ಹೆಮ್ಮೆಯ ಸಂಗತಿ. ಚಳ್ಳಕೆರೆ ತಾಲೂಕಿನ ದೊಡ್ಡ ಉಳ್ಳಾರ್ತಿ ಬಳಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) 473 ಎಕರೆ ಪ್ರದೇಶದಲ್ಲಿ ನೆಲೆನಿಂತಿದೆ.
ಇದನ್ನೂ ಓದಿ- ಬಹಳ ಮುಖ್ಯ ಚಂದ್ರಯಾನ 3 ರ ಕೊನೆಯ 17 ನಿಮಿಷ ! ಹೇಗಿರಲಿದೆ ಗೊತ್ತಾ ಆ ರೋಚಕ ಕ್ಷಣ
ಈ ಪ್ರದೇಶದಲ್ಲಿ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲ್ಮೈ ಹೋಲುವಂತೆ ಭೂಮಿಯನ್ನು ಹದಗೊಳಿಸಿ, ಕುಳಿಗಳನ್ನು ನಿರ್ಮಿಸಿ ಅದರಲ್ಲಿ ಲ್ಯಾಂಡರ್ ಇಳಿಸಿ, ಅದರೊಳಗಿನಿಂದ ಪುಟಾಣಿ ರೋವರ್ ಅನ್ನು ಓಡಾಡಿಸಿದ್ದರು. ಚಂದ್ರನ ಮೇಲ್ಮೈ ಹೋಲುವ ಮಣ್ಣನ್ನು ತಮಿಳುನಾಡಿನ ಸೇಲಂನಿಂದ ತಂದು ಇಲ್ಲಿ ಹರಡಿಸಲಾಗಿತ್ತು. ಚಂದ್ರಯಾನ-3 ಸತತ 4 ವರ್ಷಗಳ ಪರಿಶ್ರಮವಾಗಿದೆ. ಇದಕ್ಕೆ ಪೂರಕವಾಗಿ, ಚಿತ್ರದುರ್ಗ ಚಳ್ಳಕೆರೆ ತಾಲೂಕಿನಲ್ಲಿರುವ ದೊಡ್ಡ ಉಳ್ಳಾರ್ತಿ ಚಂದ್ರಯಾನಕ್ಕೆ ಪೂರಕವಾಗಿ ಪ್ರಯೋಗ ಶಾಲೆಯಾಗಿತ್ತು ಎನ್ನುವುದು ಇಡೀ ಚಿತ್ರದುರ್ಗ ಹೆಮ್ಮೆಪಡುವ ಸಂಗತಿಯಾಗಿದೆ.
ಇದನ್ನೂ ಓದಿ- ಚಂದ್ರನ ದಕ್ಷಿಣ ಧ್ರುವ ತಲುಪಲು ಬಾಹ್ಯಾಕಾಶ ಸಂಸ್ಥೆಗಳ ಮಧ್ಯೆ ಇಷ್ಟೊಂದು ಪೈಪೋಟಿ ಯಾಕೆ ಗೊತ್ತಾ ? ಇಲ್ಲಿದೆ ಕಾರಣ
ಇಸ್ರೋ ಮತ್ತು ಇಂಡಿಯಾದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಯಶಸ್ವಿಯಾಗಿದೆ. ವಿಕ್ರಂ ಸಾಫ್ಟ್ ಲ್ಯಾಂಡಿಂಗ್ ಆಗುವ ಮೂಲಕ ಇಡೀ ಯೋಜನೆಗೆ ಗೆಲುವು ಸಿಕ್ಕಿದೆ. ಚಂದಿರನ ಅಂಗಳದಲ್ಲಿ ವಿಕ್ರಂ ಲ್ಯಾಂಡರ್ ನಿಧಾನವಾಗಿ ಇಳಿಯುವ ಪ್ರಕ್ರಿಯೆ ಇಡೀ ಜಗತ್ತಿನ ಗಮನ ಸೆಳೆದಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.