Organizing favorite videos on YouTube: ವಿಶ್ವದಾದ್ಯಂತ ಬಳಕೆದಾರರಿಗೆ ಮನರಂಜನೆಯ ಮೂಲವಾಗಿ ಕಾರ್ಯನಿರ್ವಹಿಸುತ್ತಿರುವ ಜನಪ್ರಿಯ  ಸ್ಟ್ರೀಮಿಂಗ್ ವೇದಿಕೆ ಎಂದರೆ ಅದುವೇ ಯೂಟ್ಯೂಬ್. ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ವೀಕ್ಷಿಸುವುದರ ಜೊತೆಗೆ ಬೇಕೆಂದಾಗ ಆ ವಿಡಿಯೋವನ್ನು ವೀಕ್ಷಿಸಲು ಅದನ್ನು ಡೌನ್ಲೋಡ್ ಮಾಡಿಯೂ ಇಡಬಹುದು. ಲಕ್ಷಾಂತರ ವಿಡಿಯೋಗಳಲ್ಲಿ ನಿಮ್ಮಿಷ್ಟದ ವಿಡಿಯೋವನ್ನು ತಕ್ಷಣ ಪಡೆಯಲು ಅದಕ್ಕಾಗಿ ನಿಮ್ಮ ನೆಚ್ಚಿನ ವಿಡಿಯೋಗಳ ಲಿಸ್ಟ್ ಅನ್ನು ಕೂಡ ರಚಿಸಬಹುದು. 


COMMERCIAL BREAK
SCROLL TO CONTINUE READING

ನೀವು ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿದರೆ ಮತ್ತು ನಿಮ್ಮ ಆಯ್ಕೆಯ ವೀಡಿಯೊಗಳ ಪ್ಲೇ ಲಿಸ್ಟ್ ಅನ್ನು ರಚಿಸಲು ಬಯಸಿದರೆ ಇದಕ್ಕಾಗಿ ಹೆಚ್ಚು ಕಷ್ಟಪಡುವ ಅಗತ್ಯವಿಲ್ಲ. ಕೆಲವೇ ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಇದನ್ನು ಸುಲಭವಾಗಿ ಮಾಡಬಹುದು.  


ಇದನ್ನೂ ಓದಿ- YouTube ವೀಡಿಯೊದಿಂದ ತಮಾಷೆಯ GIF ರಚಿಸಲು ಬಹಳ ಪ್ರಯೋಜನಕಾರಿ ಈ ಟೂಲ್ಸ್


ಯೂಟ್ಯೂಬ್‌ನಲ್ಲಿ ನೆಚ್ಚಿನ ಪ್ಲೇ ಲಿಸ್ಟ್ ರಚಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ: 
* ಮೊದಲನೆಯದಾಗಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯೂಟ್ಯೂಬ್ ಅಪ್ಲಿಕೇಶನ್ ತೆರೆಯಿರಿ.
* ಯೂಟ್ಯೂಬ್‌ನ ಕೆಳಗಿನ ಬಲ ಮೂಲೆಯಲ್ಲಿರುವ 'You' ವಿಭಾಗದ ಮೇಲೆ ಕ್ಲಿಕ್ ಮಾಡಿ.
*  ಇಲ್ಲಿ ಪ್ಲೇ ಲಿಸ್ಟ್ ವಿಭಾಗಕ್ಕೆ ಹೋಗಿ ಮತ್ತು ಹೊಸ ಪ್ಲೇಲಿಸ್ಟ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
* ಇಲ್ಲಿ ನೀವು ಇತ್ತೀಚೆಗೆ ವೀಕ್ಷಿಸಿದ ವೀಡಿಯೊಗಳನ್ನು ಕಾಣಬಹುದು. ನಿಮ್ಮ ಹೊಸ ಪ್ಲೇ ಲಿಸ್ಟ್ ನಲ್ಲಿ ನೀವು ಬಯಸಿದರೆ, ನೀವು ಯಾವುದೇ ವೀಡಿಯೊವನ್ನು ಸೇರಿಸಬಹುದು ಅಥವಾ ಹೊಸ ವೀಡಿಯೊವನ್ನು ಕೂಡ  ಸೇರಿಸಬಹುದು. ಇದಕ್ಕಾಗಿ ಮುಂದಿನ ಬಟನ್ ಕ್ಲಿಕ್ ಮಾಡಿ.
* ಇಲ್ಲಿ ನಿಮ್ಮ ನೆಚ್ಚಿನ ಪ್ಲೇ ಲಿಸ್ಟ್ ಅನ್ನು ಹೆಸರಿಸಿ. ಬಳಿಕ ಮುಂದುವರಿಯಿರಿ.
* ನಂತರ ರಚಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.
* ಹೀಗೆ ಸುಲಭ ಹಂತಗಳಲ್ಲಿ ನೀವು ಯೂಟ್ಯೂಬ್‌ನ ಪ್ಲೇ ಲಿಸ್ಟ್ ರಚಿಸಬಹುದು. 


ಇದನ್ನೂ ಓದಿ- YouTube Shorts: ಯೂಟ್ಯೂಬ್ ಶಾರ್ಟ್ಸ್'ನಲ್ಲೀಗ ರೀಮಿಕ್ಸ್‌ ಮ್ಯೂಜಿಕ್, ವೀಡಿಯೋಗಳನ್ನು ಸೇರಿಸುವುದು ಇನ್ನೂ ಸುಲಭ


ಒಂದೊಮ್ಮೆ ನೀವು ಈ ಪಟ್ಟಿಯಿಂದ ಯಾವುದೇ ವಿಡಿಯೋವನ್ನು ಡಿಲೀಟ್ ಮಾಡಲು ಬಯಸಿದರೆ ಅದನ್ನು ಕೂಡ ಸುಲಭವಾಗಿ ಮಾಡಬಹುದು. 
>> ಇದಕ್ಕಾಗಿ ಮೊದಲು ಯೂಟ್ಯೂಬ್ ಪ್ಲೇ ಲಿಸ್ಟ್ ತೆರೆಯಿರಿ. 
>> ಈ ಪಟ್ಟಿಯಲ್ಲಿ ನೀವು ತೆಗೆದುಹಾಕಲು ಬಯಸುವ ವೀಡಿಯೊದ ಮೇಲೆ ಒತ್ತಿ ಹಿಡಿಯಿರಿ. 
>> ವಿಡಿಯೋಗಳನ್ನು ಸೆಲೆಕ್ಟ್ ಮಾಡಿದಾಗ ಪ್ಲೇಪಟ್ಟಿಯಿಂದ ತೆಗೆದುಹಾಕಿ ಎಂಬ ಆಯ್ಕೆಯು ಕಾಣಿಸಿಕೊಳ್ಳುತ್ತದೆ, ಅದರ ಮೇಲೆ ಕ್ಲಿಕ್ ಮಾಡಿ.
ಈ ರೀತಿಯಾಗಿ ನೀವು ಯೂಟ್ಯೂಬ್ ಪ್ಲೇ ಲಿಸ್ಟ್ ನಿಂದ ಬೇಡ ವಿಡಿಯೋವನ್ನು ಸುಲಭವಾಗಿ ತೆಗೆದು ಹಾಕಬಹುದು.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.