Honda Activa ಗ್ರಾಹಕರನ್ನು ತನ್ನತ್ತ ಸೆಳೆಯಲು ಬಂತು Hero Xoom, ಅದ್ಭುತ ವೈಶಿಷ್ಟ್ಯಗಳು ಮತ್ತು ಬೆಲೆಯೂ 10 ಸಾವಿರ ಕಮ್ಮಿ
Hero Xoom: 110cc ಇಂಜಿನ್ ಸಾಮರ್ಥ್ಯದ ಈ ಸ್ಕೂಟರ್ ಮೂಲಕ ಜುಪಿಟರ್ ಹಾಗೂ ಹೊಂಡಾ ಆಕ್ಟಿವಾ ಸ್ಮಾರ್ಟ್ ಗಳಂತಹ ಸ್ಕೂಟರ್ ಗಳಿಗೆ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ನೀಡುವುದೇ ಹಿರೋ ಕಂಪನಿಯ ಉದ್ದೇಶವಾಗಿದೆ.
Hero Xoom Scooter Launch: ಹೀರೋ ಮೋಟೋಕಾರ್ಪ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಹೊಸ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಕೂಟರ್‌ಗೆ ಹೀರೋ ಕ್ಸೂಮ್ ಎಂದು ಹೆಸರಿಡಲಾಗಿದೆ. 110 ಸಿಸಿ ಇಂಜಿನ್ ಸಾಮರ್ತ್ಯದ ಈ ಸ್ಕೂಟರ್ ಮೂಲಕ ಟಿವಿಎಸ್ ಜೂಪಿಟರ್ ಮತ್ತು ಹೋಂಡಾ ಆಕ್ಟಿವಾ ಸ್ಮಾರ್ಟ್‌ನಂತಹ ಸ್ಕೂಟರ್‌ಗಳಿಗೆ ಪೈಪೋಟಿ ನೀಡುವುದು ಹೀರೋ ಕಂಪನಿಯ ಯೋಜನೆಯಾಗಿದೆ. ಇದನ್ನು ಮೂರು ರೂಪಾಂತರಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಕಂಪನಿಯು ಈ ಸ್ಕೂಟರ್ ಗೆ ತನ್ನ ಆರಂಭಿಕ ಬೆಲೆಯನ್ನು ರೂ 68,599 (ಎಕ್ಸ್ ಶೋ ರೂಂ) ನಲ್ಲಿ ಇರಿಸಿದೆ ಮತ್ತು ಉನ್ನತ ರೂಪಾಂತರದ ಬೆಲೆ ರೂ 76,699 (ಎಕ್ಸ್ ಶೋ ರೂಂ) ವರೆಗೆ ಹೋಗುತ್ತದೆ. ಈ ಮೂಲಕ ಹೋಂಡಾ ಆಕ್ಟಿವಾ ಸ್ಮಾರ್ಟ್‌ಗಿಂತ ಇದು ಸುಮಾರು 10 ಸಾವಿರ ಅಗ್ಗವಾಗಿದೆ.
ವಿನ್ಯಾಸ ಮತ್ತು ವೈಶಿಷ್ಟ್ಯಗಳು
ಹೋಂಡಾ Xoom ಗೆ ಶಾರ್ಪ್ ಮತ್ತು ಮಾಡರ್ನ್ ವಿನ್ಯಾಸವನ್ನು ನೀಡಲಾಗಿದೆ. ಇದು ಎಲ್ಲಾ-LED ಹೆಡ್‌ಲ್ಯಾಂಪ್‌ಗಳು ಮತ್ತು X- ಆಕಾರದ LED DRL ಗಳೊಂದಿಗೆ ಬಿಡುಗಡೆಯಾಗಿದೆ. ಇದಲ್ಲದೆ, ಬ್ಲೂಟೂತ್ ಸಂಪರ್ಕದೊಂದಿಗೆ ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, 12-ಇಂಚಿನ ಮಿಶ್ರಲೋಹದ ಚಕ್ರಗಳನ್ನು ಇದರಲ್ಲಿ ನೀಡಲಾಗಿದೆ. ಡಿಜಿಟಲ್ ಡಿಸ್ಪ್ಲೇಯನ್ನು ಬ್ಲೂಟೂತ್ ಮೂಲಕ ಸ್ಮಾರ್ಟ್ಫೋನ್ಗೆ ಸಂಪರ್ಕಿಸಬಹುದು ಮತ್ತು ಇದು ಬಹಳಷ್ಟು ಮಾಹಿತಿಯನ್ನು ಬಿತ್ತರಿಸುತ್ತದೆ.
ಕೇವಲ 30,000ಕ್ಕೆ ಮನೆಗೆ ತನ್ನಿ ಈ ಜಬರ್ದಸ್ತ್ ಹೊಂಡಾ ಬೈಕ್ !
ಸ್ಕೂಟರ್‌ನ ಟಾಪ್-ಎಂಡ್ ZS ರೂಪಾಂತರವು ಕಾರ್ನರ್ ಬೆಂಡಿಂಗ್ ಲೈಟ್‌ಗಳನ್ನು ಹೊಂದಿದೆ. ರೈಡರ್ ತಿರುವು ತೆಗೆದುಕೊಳ್ಳುವಾಗ ಕಾರ್ನರ್ ಬೆಂಡಿಂಗ್ ದೀಪಗಳು ಸ್ವಯಂಚಾಲಿತವಾಗಿ ಆನ್ ಆಗುವುದನ್ನು ಇದು ಖಚಿತಪಡಿಸುತ್ತದೆ. ಸ್ಕೂಟರ್‌ನ ಮುಂಭಾಗದ ಏಪ್ರನ್ ಕೋನೀಯವಾಗಿದೆ ಮತ್ತು ಕೌಲಿಂಗ್ ಹ್ಯಾಂಡಲ್‌ಬಾರ್‌ಗಳಲ್ಲಿ ತಿರುವು ಸೂಚಕಗಳನ್ನು ಹೊಂದಿದೆ. ಸ್ಕೂಟರ್‌ನ ಟೈಲ್‌ಲೈಟ್ ಸಹ X ಮಾದರಿಯನ್ನು ಹೊಂದಿದೆ. ಮುಂಭಾಗದಲ್ಲಿ ಡಿಸ್ಕ್ ಬ್ರೇಕಿಂಗ್ ಸಿಸ್ಟಂ ಟಾಪ್ ರೂಪಾಂತರದಲ್ಲಿ ಲಭ್ಯವಿದೆ.
ಇದನ್ನೂ ಓದಿ-ಸದ್ದಿಲ್ಲದೇ ಮಾರುಕಟ್ಟೆಗೆ ಆಲ್ಟೊ ಕೆ 10 ಎಕ್ಸ್ಟ್ರಾ ಎಡಿಶನ್ ಪರಿಚಯಿಸಿದ ಮಾರುತಿ, ವಿಶೇಷತೆ ಏನು ಗೊತ್ತಾ?
ಎಂಜಿನ್ ಮತ್ತು ಶಕ್ತಿ
ಹೊಸ ಹೀರೋ ಜೂಮ್ ಸ್ಕೂಟರ್ 110.9 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದನ್ನು ಸಿವಿಟಿಗೆ ಜೋಡಿಸಲಾಗಿದೆ. ಈ ಎಂಜಿನ್ 8.04 bhp ಶಕ್ತಿ ಮತ್ತು 8.7 Nm ಪೀಕ್ ಟಾರ್ಕ್ ಉತ್ಪಾದಿರುವ ಸಾಮರ್ಥ್ಯವನ್ನು ಹೊಂದಿದೆ. ಭಾರತೀಯ ಸ್ಕೂಟರ್ ಮಾರುಕಟ್ಟೆಯಲ್ಲಿ, 110 ಸಿಸಿ ವಿಭಾಗವು ಒಟ್ಟು ಮಾರಾಟದ ಸುಮಾರು ಶೇ.60 ರಷ್ಟಿದೆ. ಎಂಬುದು ಇಲ್ಲಿ ಉಲ್ಲೇಖನೀಯ. ಪ್ರಸ್ತುತ, ಹೋಂಡಾ ಆಕ್ಟಿವಾ ಈ ವಿಭಾಗದಲ್ಲಿ ಹೆಚ್ಚು ಮಾರಾಟಗೊಳ್ಳುವ ಸ್ಕೂಟರ್ ಆಗಿದೆ.
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.