ಠಾಣೆ: Hero Splendor EV Conversion Kit - ಭಾರತದಲ್ಲಿ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಗಳ ಬಗ್ಗೆ ಚರ್ಚೆ ನಡೆದಾಗಲೆಲ್ಲಾ ಮೊದಲು ಹೀರೋ ಸ್ಪ್ಲೆಂಡರ್ ಹೆಸರು ಬರುತ್ತದೆ. ಈ ಬೈಕಿನ ಬೆಲೆ ಮತ್ತು ನಿರ್ವಹಣಾ ವೆಚ್ಚವು ತುಂಬಾ ಕಡಿಮೆಯಾಗಿದ್ದು, ಇದು ಶ್ರೀಸಾಮಾನ್ಯರ ಬಜೆಟ್‌ನಲ್ಲಿ ಸುಲಭವಾಗಿ ಹೊಂದಿಕೊಳ್ಳುತ್ತದೆ. ಆದರೆ ಕಳೆದ ಕೆಲವು ವಾರಗಳಿಂದ, ಪೆಟ್ರೋಲ್ ಬೆಲೆಯಲ್ಲಿ ವಿಪರೀತ ಏರಿಕೆಯಾದ ಕಾರಣ ಶ್ರೀಸಾಮಾನ್ಯರು ಕೂಡ ಬೈಕ್ ಓಡಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಆದರೆ, ಇದೀಗ ನಾವು ನಿಮ್ಮ ಪಾಲಿಗೆ ಒಂದು ಒಳ್ಳೆಯ ಸುದ್ದಿಯೊಂದನ್ನು ಹೊತ್ತು ತಂದಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Hero Electric: ಹೀರೋ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುವುದು ಈಗ ತುಂಬಾ ಸುಲಭ


ವಿದ್ಯುತ್ ಸಹಾಯದಿಂದ ಚಲಿಸಲಿದೆ ಸ್ಪ್ಲೆಂಡರ್ ಬೈಕ್
ಮಾರುಕಟ್ಟೆಯಲ್ಲಿ Hero Splendor ಬೈಕ್ ಗಾಗಿ EV (Electric Vehicle) Conversion Kit ಬಿಡುಗಡೆ ಮಾಡಲಾಗಿದೆ. ಹೀರೋ ಸ್ಪ್ಲೆಂಡರ್ ಖರೀದಿಸಲು ಮತ್ತು ಪೆಟ್ರೋಲ್ ಉಳಿಸಲು ಬಯಸುವವರಿಗೆ, ಇದೀಗ ತಮ್ಮ ನೆಚ್ಚಿನ ಬೈಕಿನಲ್ಲಿ ಎಲೆಕ್ಟ್ರಿಕ್ ಕಿಟ್ ಅಳವಡಿಸಿ ಹಣ ಉಳಿಸುವ ಆಯ್ಕೆ ಇದೆ. ಈ ವಿದ್ಯುತ್ ಕಿಟ್‌ನ ಬಳಕೆಯನ್ನು ಆರ್‌ಟಿಒ ಅನುಮೋದಿಸಿದೆ. ಮಹಾರಾಷ್ಟ್ರದ ಥಾಣೆ ಮೂಲದ ಇವಿ ಸ್ಟಾರ್ಟಪ್ ಕಂಪನಿ ಗೊಗೊಎ 1 ಇತ್ತೀಚೆಗೆ ಇದನ್ನು ಬಿಡುಗಡೆ ಮಾಡಿದೆ, ಇದರ ಬೆಲೆ ರೂ 35,000.


ಇದನ್ನೂ ಓದಿ-OLA e-Scooter: ಬಣ್ಣಗಳು, ಬೆಲೆ, ಮೈಲೇಜ್, ವೈಶಿಷ್ಟ್ಯ, ವಿಶೇಷತೆಗಳೆಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ


ಸಿಂಗಲ್ ಚಾರ್ಜ್ ನಲ್ಲಿ ಬೈಕ್ ಮೈಲೇಜ್ ಎಷ್ಟು?
ಆದರೆ ಈ ಮೂಲ ಬೆಲೆಯೊಂದಿಗೆ ನೀವು ರೂ.6300 GST ಪಾವತಿಸಬೇಕಾಗಲಿದೆ ಹಾಗೂ ಬ್ಯಾಟರಿ ಬೆಲೆಯನ್ನು ಕೂಡ ನೀವು ಪ್ರತ್ಯೇಕ ಪಾವತಿಸಬೇಕು. ಒಟ್ಟಾರೆ ನೀವು ಈ ಕಿಟ್ ಹಾಗೂ ಬ್ಯಾಟರಿ ಖರೀದಿಸಲು ರೂ.95,000 ಪಾವತಿಸಬೇಕು. ಇದಲ್ಲದೆ ಇದಕ್ಕೆ ನೀವು ನಿಮ್ಮ ಹಿರೋ ಸ್ಪ್ಲೆಂಡರ್ ಖರೀದಿಯ ಬೆಲೆಯನ್ನು ಕೂಡ ಜೋಡಿಸಬೇಕು. ಹೀಗಿರುವಾಗ ನಿಮಗೆ ನಿಮ್ಮ ಹೀರೋ ಸ್ಪ್ಲೆಂಡರ್ ಬೆಲೆ (Hero Splendor Price) ಜೇಬಿಗೆ ಭಾರೀ ಬೀಳುವ ಸಾಧ್ಯತೆ ಇದೆ. ಆದರೆ, ಇದು ಒನ್ ಟೈಮ್ ಇನ್ವೆಸ್ಟ್ ಮೆಂಟ್ ಆಗಲಿದೆ. ಈ ಕಿಟ್ ಜೊತೆಗೆ ನಿಮಗೆ 3 ವರ್ಷಗಳ ವಾರಂಟಿ ಕೂಡ ಸಿಗಲಿದೆ. Rushlane ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಒಮ್ಮೆ ಚಾರ್ಜ್ ಮಾಡಿ ನೀವು ನಿಮ್ಮ ಬೈಕ್ ಅನ್ನು 151 ಕಿ.ಮೀ ಓಡಿಸಬಹುದು ಎಂದು GoGoA1 ಹೇಳಿಕೊಂಡಿದೆ. 


ಇದನ್ನೂ ಓದಿ-India's First e-Super Car: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಭಾರತದ ಮೊಟ್ಟಮೊದಲ e-Super Car, ಫುಲ್ ಚಾರ್ಜ್ ನಲ್ಲಿ 700 ಕಿ.ಮೀ ಮೈಲೇಜ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.