India's First e-Super Car: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಭಾರತದ ಮೊಟ್ಟಮೊದಲ e-Super Car, ಫುಲ್ ಚಾರ್ಜ್ ನಲ್ಲಿ 700 ಕಿ.ಮೀ ಮೈಲೇಜ್

India's First e-Super Car: ವೇಗವಾಗಿ ಚಲಿಸಬಲ್ಲ ಸೂಪರ್‌ಕಾರ್ ಅನ್ನು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಮತ್ತು ಅದರಲ್ಲೂ ಸೂಪರ್‌ಕಾರ್‌ಗಳು ಎಲೆಕ್ಟ್ರಿಕ್ ಆಗಿದ್ದರೆ, ಅದರ ಬೇಡಿಕೆ ಇನ್ನೂ ಹೆಚ್ಚಾಗುತ್ತದೆ. ಮೀನ್ ಮೆಟಲ್ ಮೋಟಾರ್ಸ್ (Mean Metal Motors), ಭಾರತೀಯ ಸ್ಟಾರ್ಟ್ಅಪ್ ಕಂಪನಿ, ಇದೇ ಯೋಜನೆ ಮೇಲೆ  ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. 

Written by - Nitin Tabib | Last Updated : Aug 6, 2021, 02:56 PM IST
  • ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಭಾರತದ ಮೊಟ್ಟಮೊದಲ ಇ-ಸೂಪರ್ ಕಾರ್.
  • ಈ ಕಾರ್ ಗೆ ಅಜಾನಿ ಎಂದು ನಾಮಕರಣ ಮಾಡಲಾಗಿದೆ.
  • Mean Metal Motors ಈ ಯೋಜನೆಯ ಮೇಲೆ ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ.
India's First e-Super Car: ಶೀಘ್ರವೇ ಮಾರುಕಟ್ಟೆಗೆ ಬರಲಿದೆ ಭಾರತದ ಮೊಟ್ಟಮೊದಲ e-Super Car, ಫುಲ್ ಚಾರ್ಜ್ ನಲ್ಲಿ 700 ಕಿ.ಮೀ ಮೈಲೇಜ್ title=
India's First e-Super Car (File Photo)

India's First e-Super Car: ವೇಗವಾಗಿ ಚಲಿಸಬಲ್ಲ ಸೂಪರ್‌ಕಾರ್ ಅನ್ನು ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ? ಮತ್ತು ಅದರಲ್ಲೂ ಸೂಪರ್‌ಕಾರ್‌ಗಳು ಎಲೆಕ್ಟ್ರಿಕ್ ಆಗಿದ್ದರೆ, ಅದರ ಬೇಡಿಕೆ ಇನ್ನೂ ಹೆಚ್ಚಾಗುತ್ತದೆ. ಮೀನ್ ಮೆಟಲ್ ಮೋಟಾರ್ಸ್ (Mean Metal Motors), ಭಾರತೀಯ ಸ್ಟಾರ್ಟ್ಅಪ್ ಕಂಪನಿ, ಇದೇ ಯೋಜನೆ ಮೇಲೆ  ಕೆಲಸ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದೆ. ಕಂಪನಿಯು ಭಾರತದ ಮೊದಲ ಎಲೆಕ್ಟ್ರಿಕ್ ಸೂಪರ್ ಕಾರ್ ಅನ್ನು ತಯಾರಿಸುತ್ತಿದೆ, ಇದಕ್ಕೆ ಅಜಾನಿ (Azani) ಎಂದು ಹೆಸರಿಸಲಾಗಿದೆ. ನೋಡಲು ಈ ಕಾರು McLaren Supercar ಗಳಂತೆ ಕಾಣುತ್ತದೆ.

ಈ ಕಾರಿನ ವಿನ್ಯಾಸದ ಕುರಿತು ಹೇಳುವುದಾದರೆ, ಇದು ನಯವಾದ ಮತ್ತು ಆಕ್ರಮಣಕಾರಿ ಫ್ರಂಟ್ ಲುಕ್ ಜೊತೆಗೆ ಸಂಪೂರ್ಣ ಕ್ವಾರ್ಡ್ ಪ್ಯಾನಲ್‌ ಹೊಂದಿದೆ.. ಕಾರಿನ ಎಲ್ ಇಡಿ ಹೆಡ್ ಲ್ಯಾಂಪ್ ಗಳನ್ನು ಅದರ ದೊಡ್ಡ ಸೈಡ್ ಏರ್ ವೆಂಟ್ ಗಳಲ್ಲಿ ಅಳವಡಿಸಲಾಗಿದೆ. ಇದು ವಿಶಾಲ ಚಕ್ರ ಆರ್ಕ್, ಸ್ವಲ್ಪ ಎತ್ತರಿಸಿದ ಶೋಲ್ದರ್ ಲೈನ್, ಆಲ್ ಬ್ಲಾಕ್  ಕಾಕ್‌ಪಿಟ್ ಮತ್ತು ಏರೋಡೈನಾಮಿಕ್ ಟೋಲ್ ಸೆಕ್ಷನ್ ಹೊಂದಿದೆ. ಇದು ಟೇಲ್‌ಲೈಟ್‌ಗಳ ರೂಪದಲ್ಲಿ ನಯವಾದ ಎಲ್‌ಇಡಿ ಸ್ಟ್ರಿಪ್ ಅನ್ನು ಹೊಂದಿದೆ.

ಇದನ್ನೂ ಓದಿ-Good News! ಈ ವಾಹನಗಳ RCಗಾಗಿ ಶುಲ್ಕ ಪಾವತಿಸಬೇಕಾಗಿಲ್ಲ, ಇದರಿಂದ ನಿಮಗೇನು ಲಾಭ?

ಕೇವಲ ಎರಡೇ ಸೆಕೆಂಡ್ ನಲ್ಲಿ 100ಕಿಮಿ ಸ್ಪೀಡ್ ಸಾಧಿಸಬಲ್ಲದು
ವೇಗ ಪ್ರಿಯರಿಗೆ ಈ ಕಾರು (Car) ಅತಿ ಹೆಚ್ಚು ಇಷ್ಟವಾಗುವ ಸಾಧ್ಯತೆ ಇದೆ. ಸ್ಪೀಡ್ ಕುರಿತು ಹೇಳಿಕೆ ನೀಡಿರುವ ಕಂಪನಿ ಅಜಾನಿ ಸೂಪರ್ ಕಾರ್ ಗಂಟೆಗೆ 350 ಕಿ.ಮೀ ಟಾಪ್ ಸ್ಪೀಡ್ ಸಾಮರ್ಥ್ಯದ ಜೊತೆಗೆ ಬರುತ್ತದೆ ಹಾಗೂ ಇದು ಕೇವಲ ಎರಡೇ ಸೆಕೆಂಡ್ ನಲ್ಲಿ 100 ಕಿ.ಮೀ /ಪ್ರತಿ ಗಂಟೆ ವೇಗ ಸಾಧಿಸಬಲ್ಲದು. ಈ ಸೂಪರ್ ಕಾರ್ ನಲ್ಲಿ 1000hp ಸಾಮರ್ಥ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್  ಅಳವಡಿಸಲಾಗಿದ್ದು, ಇದು ಒಂದು ಬಾರಿ ಚಾರ್ಜ್ ನಲ್ಲಿ ಸುಮಾರು 700 ಕಿ.ಮೀ ಸಂಚರಿಸಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ-LPG Subsidy: LPG ಮೇಲಲ್ಲ ಇದರ ಮೇಲೆ Subsidy ನೀಡಬೇಕು, ಗಡ್ಕರಿ ಉವಾಚ

ಮುಂದಿನ ವರ್ಷ ಬಿಡುಗಡೆಯಾಗಲಿದೆ ಈ ಕಾರು
ಈ ಕಾರಿನ ಮೊದಲ ಮಾದರಿಯನ್ನು 2022ರ ದ್ವಿತಿಯಾರ್ಧದಲ್ಲಿ ಬಿಡುಗಡೆ ಮಾಡುವುದಾಗಿ ಕಂಪನಿ ಹೇಳಿದೆ. ಈ ಕಾರಿನ ಬೆಲೆ ಸುಮಾರು $ 120,000 (ಸುಮಾರು ರೂ. 89 ಲಕ್ಷ ರೂ.) ಆಗಿರುವ ಸಾಧ್ಯತೆ ಇದೆ. ಈ ಎಲೆಕ್ಟ್ರಿಕ್ ಸೂಪರ್‌ಕಾರ್ ಅನ್ನು ಮೈಕ್ರೋ-ಫೆಸಿಲಿಟಿಯಲ್ಲಿ ನಿರ್ಮಿಸಲಾಗುವುದು ಎಂದು ಕಂಪನಿ ಹೇಳಿದೆ. ಸಾಂಪ್ರದಾಯಿಕ ಆಟೋಮೊಬೈಲ್ ತಯಾರಿಕಾ ಘಟಕದ ವೆಚ್ಚದ 1/5 ರಷ್ಟು ವೆಚ್ಚ ಇದಕ್ಕೆ ತಗುಲಲಿದೆ. ಕಂಪನಿಯು 2030 ರ ವೇಳೆಗೆ 34 ದಶಲಕ್ಷ EV (Electric Vehicle) ಗಳೊಂದಿಗೆ $ 750 ಶತಕೋಟಿಯಷ್ಟು ಮಾರುಕಟ್ಟೆ ವಿಭಾಗವನ್ನು ಸ್ಪರ್ಶಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ-Bajaj Chetak Electric Scooter ಬುಕಿಂಗ್ ಆರಂಭ, ಹೊಸ ಅವತಾರದಲ್ಲಿ ಅತ್ಯಂತ ಜನಪ್ರಿಯ ಸ್ಕೂಟರ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News