Honda Activa H-Smart: ಹೋಂಡಾ ಮೋಟಾರ್‌ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ ಜನವರಿ 23 ರಂದು ಭಾರತದಲ್ಲಿ ತನ್ನ ಖ್ಯಾತ ಆಕ್ಟಿವಾ ಸ್ಕೂಟರ್ ನ ಹೊಸ ಮಾದರಿಯನ್ನು ಪರಿಚಯಿಸಲಿದೆ ಎನ್ನಲಾಗಿದೆ. ಕಂಪನಿಯು Honda Activa H-Smart ಹೆಸರಿನ ಸ್ಕೂಟರ್ ರೋಡಿಗಿಳಿಸಾಲಿದೆ. ಇದು ಕಂಪನಿಯ ಹೆಚ್ಚು ಮಾರಾಟವಾಗುವ ಆಕ್ಟಿವಾ 6G ಸ್ಕೂಟರ್‌ನ ನವೀಕರಿಸಿದ ಟಾಪ್-ಎಂಡ್ ಆವೃತ್ತಿಯಾಗಿದೆ. ಹೋಂಡಾ ಈಗಾಗಲೇ ಮುಂಬರುವ ಮಾದರಿಯನ್ನು 'ಹೊಸ ಸ್ಮಾರ್ಟ್' ಸ್ಕೂಟರ್ ಎಂದು ಟೀಜ್ ಮಾಡಿದೆ. ಆದರೆ ಹೊಸ ಸ್ಕೂಟರ್ ಕುರಿತು ಹೆಚ್ಚಿನ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರೂ. ಎಚ್-ಸ್ಮಾರ್ಟ್ ತಂತ್ರಜ್ಞಾನದ ರೂಪದಲ್ಲಿ ಆಂಟಿ-ಥೆಫ್ಟ್ ಸಿಸ್ಟಮ್ ಸೇರಿದಂತೆ ಹಲವಾರು ಹೊಸ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ವರದಿಗಳು ಹೇಳಿವೆ. ಹೊಸ ಆಕ್ಟಿವಾ ಹೆಚ್-ಸ್ಮಾರ್ಟ್ ಟಿವಿಎಸ್ ಜುಪಿಟರ್ ಮತ್ತು ಹೀರೋ ಮೆಸ್ಟ್ರೋ ಸ್ಕೂಟರ್‌ಗಳಿಗೆ ಭಾರಿ ಪೈಪೋಟಿ ನೀಡಲಿದೆ ಎಂಬುದು ಈ ಕ್ಷೇತ್ರ ತಜ್ಞರ ಅಭಿಪಾಯವಾಗಿದೆ.


COMMERCIAL BREAK
SCROLL TO CONTINUE READING

ಮೊದಲಿನ ಮಾದರಿಗಿಂತ ಹಗುರ ಮತ್ತು ಹೆಚ್ಚು ಶಕ್ತಿಶಾಲಿ
ವರದಿಗಳ ಪ್ರಕಾರ, ಹೋಂಡಾ ಆಕ್ಟಿವಾ ಹೆಚ್-ಸ್ಮಾರ್ಟ್ ಹಳೆಯ ಮಾದರಿಗಿಂತ ಹಗುರವಾಗಿರಲಿದೆ. ಹೊಸ ಸ್ಕೂಟರ್‌ನ ತೂಕವು DLX ರೂಪಾಂತರಕ್ಕಿಂತ ಸುಮಾರು 1KG ಕಡಿಮೆ ಇರುವ ಸಾಧ್ಯತೆ ಇದೆ. ಹೊಸ Activa H-Smart ಅನ್ನು ಹೊಸ ಗ್ರಾಫಿಕ್ಸ್ ಮತ್ತು ಬಣ್ಣ ಆಯ್ಕೆಗಳೊಂದಿಗೆ ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ಇದರ ಹೊರತಾಗಿ, ಅದರ ಪವರ್‌ಟ್ರೇನ್ ಅನ್ನು ಹೆಚ್ಚು ಶಕ್ತಿಯುತವಾಗಿಸಲು ಸಹ ಬದಲಾಯಿಸಲಾಗುತ್ತದೆ. ಇದು 110cc ಸಿಂಗಲ್-ಸಿಲಿಂಡರ್, ಏರ್ ಕೂಲ್ಡ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಇದು ಈಗ 7.68 bhp ಬದಲಿಗೆ 7.80 bhp ಶಕ್ತಿಯನ್ನು ಉತ್ಪಾದಿಸುತ್ತದೆ.


ಇದನ್ನೂ ಓದಿ-ಹೀರೋ-ಹೊಂಡಾ ಕಂಪನಿಗಳ ಸ್ಕೂಟರ್ ಗಳಿಗೆ ಭಾರಿ ಟೆನ್ಶನ್ ನೀಡುತ್ತಿದೆ ಟಿವಿಎಸ್ ಕಂಪನಿಯ ಈ ಸ್ಕೂಟರ್


ಇದನ್ನು ಕದಿಯುವುದು ಕಷ್ಟ
ನಿರೀಕ್ಷೆಯಂತೆ, ಎಚ್-ಸ್ಮಾರ್ಟ್ ತಂತ್ರಜ್ಞಾನವು ಕಂಪನಿಯ ಆಂಟಿ-ಥೆಫ್ಟ್ ಸಿಸ್ಟಮ್ ಹೊಂದಿರಲಿದೆ. ಕಂಪನಿಯು ಈಗಾಗಲೇ ತನ್ನ ಪ್ರೀಮಿಯಂ ಬೈಕ್‌ಗಳಲ್ಲಿ ಹೋಂಡಾ ಇಗ್ನಿಷನ್ ಸೆಕ್ಯುರಿಟಿ ಸಿಸ್ಟಮ್ (HISS) ಅನ್ನು ನೀಡುತ್ತಿದೆ. ಹೋಂಡಾ ಆಕ್ಟಿವಾ ಕಂಪನಿಯ ಅತ್ಯುತ್ತಮ ಮಾರಾಟದ ಸ್ಕೂಟರ್ ಮಾತ್ರವಲ್ಲದೆ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಗಿದೆ. ಹೋಂಡಾ ಆಕ್ಟಿವಾ 6G ಅನ್ನು 2020 ರಲ್ಲಿ ಪರಿಚಯಿಸಲಾಗಿತ್ತು.


ಇದನ್ನೂ ಓದಿ-ಹಳೆ ಪಿಂಚಣಿ ಯೋಜನೆಯ ಕುರಿತಾದ ಈ ಹೊಸ ಅಪ್ಡೇಟ್ ನಿಮಗೆ ತಿಳಿದಿರಲಿ!


ಹೊಸ ವೈಶಿಷ್ಟ್ಯಗಳ ಕಾರಣದಿಂದಾಗಿ, ಆಕ್ಟಿವಾದ H-ಸ್ಮಾರ್ಟ್ ಆವೃತ್ತಿಯ ಬೆಲೆಯು ಸ್ವಲ್ಪ ಹೆಚ್ಚಿರಬಹುದು ಎಂದು ನಿರೀಕ್ಷಿಸಲಾಗುತ್ತಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ Activa 6G ಬೆಲೆ 73,360 ರಿಂದ 75,860 ರೂ. ಆಗಿದೆ. ಹೊಸ ಮಾದರಿಯ ಬೆಲೆ ಅಂದಾಜು ₹ 75,000 ಮತ್ತು ₹ 80,000 ರ ನಡುವೆ ಇರಲಿದೆ ಎನ್ನಲಾಗುತ್ತಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.