ಡೆಬಿಟ್ ಕಾರ್ಡ್ ಇಲ್ಲದೆಯೂ UPI PIN ಬದಲಿಸಬಹುದು ! ಇಲ್ಲಿದೆ ಹಂತ ಹಂತದ ವಿವರ
How to Change Your UPI PIN Without a Debit Card:ನಿಮ್ಮ UPI ಪಿನ್ ಅನ್ನು ಬದಲಾಯಿಸಬೇಕು ಎಂದು ನೀವು ಆಲೋಚಿಸುತ್ತಿದ್ದು, ನಿಮ್ಮ ಬಳಿ ಡೆಬಿಟ್ ಕಾರ್ಡ್ ಇಲ್ಲದೆ ಹೋದಾಗ ಈ ಹಂತಗಳನ್ನು ಅನುಸರಿಸುವ ಮೂಲಕ UPI ಪಿನ್ ಅನ್ನು ಸುಲಭವಾಗಿ ಬದಲಾಯಿಸಬಹುದು.
UPI PIN Change Without a Debit Card : ಇತ್ತೀಚಿನ ದಿನಗಳಲ್ಲಿ UPI ಪಾವತಿ ವ್ಯವಸ್ಥೆಯು ಭಾರತದಲ್ಲಿ ಬಹಳ ಜನಪ್ರಿಯವಾಗಿದೆ. ಇದರ ಬಳಕೆಯು ವ್ಯಾಪಕವಾಗಿ ಹೆಚ್ಚುತ್ತಿದೆ. ಈ ವ್ಯವಸ್ಥೆಯನ್ನು ಬಳಸುವ ಎಲ್ಲಾ ಬಳಕೆದಾರರಿಗೆ UPI ಪಿನ್ ಕಡ್ಡಾಯವಾಗಿದೆ. ಆದ್ದರಿಂದ, ನಿಮ್ಮ UPI ಪಿನ್ ಅನ್ನು ಬದಲಾಯಿಸುವ ಅಗತ್ಯವಿದ್ದಾಗ, ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.
ನಿಮ್ಮ UPI ಪಿನ್ ಅನ್ನು ಬದಲಾಯಿಸಬೇಕು ಎಂದು ನೀವು ಆಲೋಚಿಸುತ್ತಿದ್ದು, ನಿಮ್ಮ ಬಳಿ ಡೆಬಿಟ್ ಕಾರ್ಡ್ ಇಲ್ಲದೆ ಹೋದಾಗ ಈ ಹಂತಗಳನ್ನು ಅನುಸರಿಸುವ ಮೂಲಕ UPI ಪಿನ್ ಅನ್ನು ಸುಲಭವಾಗಿ ಬದಲಾಯಿಸಬಹುದು.
ಇದನ್ನೂ ಓದಿ : China Claim On Moon: ಚಂದ್ರನ ಮೇಲೆ ಚೀನಾ 'ಕಬ್ಜಾ', ಶೀಘ್ರದಲ್ಲೇ ವಸಾಹತ್ತು ನಿರ್ಮಾಣ ಕಾರ್ಯ ಆರಂಭ!
-ನಿಮ್ಮ ಬ್ಯಾಂಕಿನ ಮೊಬೈಲ್ ಅಪ್ಲಿಕೇಶನ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಪೋರ್ಟಲ್ ಮೂಲಕ ಲಾಗ್ ಇನ್ ಮಾಡಿ.
-ನಿಮ್ಮ ಅಕೌಂಟ್ ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು UPI ಪಿನ್ ಆಯ್ಕೆಯನ್ನು ಹುಡುಕಿ.
- ಇಲ್ಲಿ ಹೊಸ ಪಿನ್ ಅನ್ನು ನಮೂದಿಸಬೇಕು ಮತ್ತು ವೆರಿಫಿಕೆಶನ್ ಗಾಗಿ ಮತ್ತೊಮ್ಮೆ ಹೊಸ ಪಿನ್ ಅನ್ನು ಹಾಕಬೇಕಾಗುತ್ತದೆ.
- ವೆರಿಫೈ ಮಾಡಿದ ನಂತರ, UPI ಪಿನ್ ಅನ್ನು ಯಶಸ್ವಿಯಾಗಿ ಬದಲಾಯಿಸಲಾಗುತ್ತದೆ.
ನಿಮ್ಮ ಬಳಿ ಅಕೌಂಟ್ ಸಂಖ್ಯೆ ಅಥವಾ ಎಟಿಎಂ ಕಾರ್ಡ್ ಸಂಖ್ಯೆ ಇಲ್ಲದಿದ್ದರೆ, ನಿಮ್ಮ ಬ್ಯಾಂಕ್ ಅನ್ನು ಸಂಪರ್ಕಿಸಬಹುದು. ಅಲ್ಲಿ ನಿಮ್ಮ ಖಾತೆ ಸಂಖ್ಯೆ ಮತ್ತು ನಿಮ್ಮ UPI ಪಿನ್ ಅನ್ನು ಬದಲಾಯಿಸಬಹುದಾದ ಸಂಬಂಧಿತ ಮಾಹಿತಿಯನ್ನು ನೀಡುತ್ತಾರೆ. UPI ಪಿನ್ ಬದಲಾಯಿಸುವಾಗ, ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಕಂಪ್ಯೂಟರ್‌ನ ಬ್ರೌಸರ್ ಅನ್ನು ಸುರಕ್ಷಿತವಾಗಿರಿಸಿ. ನಿಮ್ಮ ಪಿನ್ ಅನ್ನು ಬೇರೆ ಯಾವುದೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳಬೇಡಿ.
ಇದನ್ನೂ ಓದಿ : ಗುರು ಗ್ರಹ, ಮತ್ತದರ ಹಿಮಾಚ್ಛಾದಿತ ಚಂದ್ರರ ಅಧ್ಯಯನ ನಡೆಸಲಿದೆ ಜ್ಯೂಸ್ ಮಿಷನ್
UPI ಪಿನ್ ಅನ್ನು ಸುರಕ್ಷಿತವಾಗಿರಿಸಲು ನೀವು ಕೆಲವು ಇತರ ಸಲಹೆಗಳನ್ನು ಅನುಸರಿಸಬೇಕು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸುರಕ್ಷಿತವಾಗಿರಿಸಲು ಸೂಕ್ತವಾದ ಆಂಟಿವೈರಸ್ ಸಾಫ್ಟ್‌ವೇರ್ ಅನ್ನು ಬಳಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೀವು ಬಳಸುವ ಎಲ್ಲಾ ಅಪ್ಲಿಕೇಶನ್‌ಗಳನ್ನು ಸುರಕ್ಷಿತವಾಗಿರಿಸಿಕೊಳ್ಳಬೇಕು. ಇದರಿಂದ ನಿಮ್ಮ ಸಿಸ್ಟಮ್ ಸುರಕ್ಷಿತವಾಗಿರುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.