UPI ATM: ತಂತ್ರಜ್ಞಾನ ಬೆಳವಣಿಗೆಯಾದಂತೆ ನಮ್ಮ ಬಹುತೇಕ ಕೆಲಸಗಳೂ ಇನ್ನೂ ಸುಲಭವಾಗುತ್ತಿವೆ. ಇದೀಗ, ಜಪಾನಿನ ಹೆಸರಾಂತ ಕಂಪನಿ ಹಿಟಾಚಿಯ ಶಾಖೆಯಾದ ಹಿಟಾಚಿ ಪೇಮೆಂಟ್ ಸರ್ವಿಸಸ್, ಕಾರ್ಡ್ ಇಲ್ಲದೆ ಕಾರ್ಯನಿರ್ವಹಿಸುವ ಭಾರತದ ಮೊದಲ ಎಟಿಎಂ ಅನ್ನು ಪ್ರಾರಂಭಿಸಿದೆ. ಹಿಟಾಚಿಯ ಎನ್‌ಪಿಸಿಐ ಸಹಯೋಗದಲ್ಲಿ ಎಟಿಎಂ ಕಾರ್ಡ್ ಇಲ್ಲದೆಯೇ ಹಣ ವಿತ್ ಡ್ರಾ ಮಾಡಲು ಸಹಾಯಕವಾಗುವ ಎಟಿಎಂ ಅನ್ನು ಪರಿಚಯಿಸಿದೆ. 


COMMERCIAL BREAK
SCROLL TO CONTINUE READING

ಲಭ್ಯವಿರುವ ಮಾಹಿತಿಗಳ ಪ್ರಕಾರ, ದೇಶದ ವಿವಿಧ ಸ್ಥಳಗಳಲ್ಲಿ ಈ ಎಟಿಎಂ ಸೌಲಭ್ಯ ಲಭ್ಯವಾಗಲಿದ್ದು ಇದರ ಪ್ರಮುಖ ವಿಷಯವೆಂದರೆ ಇದರಿಂದ ಹಣ ಹಿಂಪಡೆಯಲು ಯಾವುದೇ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸುವ ಅವಶ್ಯಕತೆ ಇಲ್ಲ. ಇದರಿಂದಾಗಿ ಹಣದ ಕಳ್ಳತನದ ಅಪಾಯವೂ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತಿದೆ. ಇದರ ವೈಶಿಶ್ತ್ಯಾಗಳೇನು? ಇದು ಹೇಗೆ ಕಾರ್ಯನಿರ್ವಹಿಸುತ್ತದೆ. ಇದನ್ನು ಬಳಸುವ ಸುಲಭ ವಿಧಾನ ಹೇಗೆ ಎಂಬಿತ್ಯಾದಿ ವಿಷಯಗಳ ಬಗ್ಗೆ ಇಲ್ಲಿದೆ ಮಾಹಿತಿ. 


ಎನ್‌ಪಿ‌ಸಿ‌ಐ ಈ ನಾವೀನ್ಯತೆಯನ್ನು ಶ್ಲಾಘಿಸಿದ್ದು ಇದು ಕಾರ್ಡ್ ಇಲ್ಲದೆ ಹಣವನ್ನು ಹಿಂಪಡೆಯಲು ತ್ವರಿತ ಮತ್ತು ಅನುಕೂಲಕರ ಮಾರ್ಗವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಅದರಲ್ಲೂ ದೂರದ ಊರುಗಳಿಗೆ ಪ್ರಯಾಣಿಸುವಾಗ ತಮ್ಮ ಕಾರ್ಡುಗಳನ್ನು ಮನೆಯಲ್ಲಿಯೇ ಮರೆತು ಹೋಗಿರುವವರಿಗೆ ಈ ಯುಪಿಐ ಎಟಿಎಂ ವೈಶಿಷ್ಟ್ಯ ತುಂಬಾ ಉಪಯುಕ್ತವಾಗಲಿದೆ ಎಂದು ಅದು ಹೇಳಿದೆ. 


ಇದನ್ನೂ ಓದಿ- WhatsApp ಚಾನೆಲ್‌ನಲ್ಲಿ ಹೊಸ ವೈಶಿಷ್ಟ್ಯಗಳ ಸೇರ್ಪಡೆ


ಯುಪಿಐ ಎಟಿಎಂನ ಪ್ರಮುಖ ವೈಶಿಷ್ಟ್ಯಗಳು ಈ ಕೆಳಕಂದಂತಿವೆ:- 
ಮೊದಲೇ ತಿಳಿಸಿದಂತೆ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಇಲ್ಲದೆಯೇ ಎಟಿಎಂನಿಂದ ಹಣ ವಿತ್ ಡ್ರಾ ಮಾಡಲು ಯುಪಿಐ ಎಟಿಎಂ ತುಂಬಾ ಸಹಕಾರಿಯಾಗಿದೆ. ನಿಮ್ಮ ಫೋನ್ ಸಹಾಯದಿಂದ ನೀವು ಸುಲಭವಾಗಿ ನಿಮ್ಮ ವಹಿವಾಟನ್ನು ಪೂರ್ಣಗೊಳಿಸಬಹುದು. 


ಎಲ್ಲಾ ಬ್ಯಾಂಕ್‌ಗಳೊಂದಿಗೆ ಕೆಲಸ: 
ವಿಶೇಷವೆಂದರೆ ಈ ಯುಪಿಐ ಎಟಿಎಂ ಅನ್ನು ವ್ಯವಸ್ಥೆಯನ್ನು ಎಲ್ಲಾ ಬ್ಯಾಂಕ್‌ಗಳೊಂದಿಗೆ ಕೆಲಸ ಮಾಡಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಅರ್ಥಾತ್, ನಿಮ್ಮ ನೆಚ್ಚಿನ ಯುಪಿಐ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ನೀವು ಯಾವುದೇ ಬ್ಯಾಂಕ್‌ನ ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಬಹುದು. ಈ ನಮ್ಯತೆಯು ಬಳಕೆದಾರರ ಅನುಕೂಲತೆಯನ್ನು ಹೆಚ್ಚಿಸುತ್ತದೆ.


ವಿತ್ ಡ್ರಾ ಮಿತಿ: 
ಯುಪಿಐ ಎಟಿಎಂ ನಿಮಗೆ ಒಂದು ಬಾರಿಗೆ ₹ 10,000 ವರೆಗೆ ಹಿಂಪಡೆಯಲು ಅನುಮತಿಸುತ್ತದೆ. ಅಂದರೆ, ನಿಮ್ಮ ಅಗತ್ಯಕ್ಕೆ ಅನುಗುಣವಾಗಿ ನೀವು ಹಣವನ್ನು ವಿತ್ ಡ್ರಾ ಮಾಡಬಹುದು. 


ಇದನ್ನೂ ಓದಿ- Smartphone ಚಾರ್ಜ್ ಆಗುತ್ತಿಲ್ಲ ಎಂದಾದರೆ ಮನೆಯಲ್ಲಿಯೇ ಈ ರೀತಿ ಸರಿಮಾಡಿಕೊಳ್ಳಿ


ಯುಪಿಐ ಎಟಿಎಂನಿಂದ ಹಣವನ್ನು ಹಿಂಪಡೆಯುವುದು ಹೇಗೆ?
ಹಂತ 1: ನಿಮ್ಮ ಹತ್ತಿರವಿರುವ ಯಾವುದೇ ಯುಪಿಐ ಎಟಿಎಂ ಅನ್ನು ಹುಡುಕಿ.
ಹಂತ 2: ನೀವು ಹಿಂಪಡೆಯಲು ಬಯಸುವ ಮೊತ್ತವನ್ನು ಆಯ್ಕೆಮಾಡಿ. ನೀವು ಯಾವುದೇ ಮೊತ್ತವನ್ನು ಹಿಂಪಡೆಯಲು ಬಯಸುತ್ತೀರಿ, ನೀವು ಅದನ್ನು ಸುಲಭವಾಗಿ ಯುಪಿಐ ಎಟಿಎಂನಿಂದ ಹಿಂಪಡೆಯಬಹುದು.
ಹಂತ 3: ಮೊತ್ತವನ್ನು ಆಯ್ಕೆ ಮಾಡಿದ ನಂತರ, ಎಟಿಎಂ ಪರದೆಯ ಮೇಲೆ ಕ್ಯೂ‌ಆರ್ ಕೋಡ್ ಕಾಣಿಸಿಕೊಳ್ಳುತ್ತದೆ. ಈ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಮಾತ್ರ ನೀವು ಯುಪಿಐಯಿಂದ ಹಣವನ್ನು ಹಿಂಪಡೆಯಬಹುದು.
ಹಂತ 4: ನಿಮ್ಮ ಫೋನ್‌ನಲ್ಲಿ ಯಾವುದೇ ಯುಪಿಐ ಅಪ್ಲಿಕೇಶನ್ ತೆರೆಯಿರಿ ಮತ್ತು ಎಟಿಎಂ ಪರದೆಯಲ್ಲಿ ತೋರಿಸಿರುವ ಕ್ಯೂ‌ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ. ಇದು ನಿಮ್ಮ ಫೋನ್ ಮತ್ತು ಯುಪಿಐ ಎಟಿಎಂ ನಡುವೆ ಸಂಪರ್ಕವನ್ನು ರಚಿಸುತ್ತದೆ.
ಹಂತ 5: ವಹಿವಾಟನ್ನು ಪೂರ್ಣಗೊಳಿಸಲು ನಿಮ್ಮ ಫೋನ್‌ನಲ್ಲಿ ನಿಮ್ಮ ಯುಪಿಐ ಪಿನ್ ಅನ್ನು ನಮೂದಿಸಿ.
ಹಂತ 6: ಸರಿಯಾದ ಯುಪಿಐ ಪಿನ್ ನಮೂದಿಸಿದ ನಂತರ, ಎಟಿಎಂನಿಂದ ಹಣ ವಿತ್ ಡ್ರಾ ಮಾಡಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.