ಅತಿ ಹೆಚ್ಚು ಬೇಡಿಕೆಯಲ್ಲಿರುವ 5 SUV !Brezza, Punch Cretaವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ ಈ ಕಾರು
Top-5 Best Selling SUV:ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾನ್ಯವಾಗಿ ಪ್ರತಿ ತಿಂಗಳು ಈ ಎರಡರ ಪೈಕಿಯೇ ನಂಬರ್ ಆನ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಡುತ್ತದೆ. ಸೆಪ್ಟೆಂಬರ್ನಲ್ಲಿ, ನೆಕ್ಸಾನ್ ನಂಬರ್-1 ಸ್ಥಾನಕ್ಕೆ ಏರಿದೆ.
Top-5 Best Selling SUV : ಸೆಪ್ಟೆಂಬರ್ನ ಕೊನೆಯ ತಿಂಗಳಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಎಸ್ಯುವಿಗಳು ಉತ್ತಮವಾಗಿ ಮಾರಾಟವಾಗಿವೆ. ಸೆಪ್ಟೆಂಬರ್ 2023 ರಲ್ಲಿ 15,325 ಯುನಿಟ್ಗಳು ಮಾರಾಟವಾಗಿದ್ದರೆ, ಸೆಪ್ಟೆಂಬರ್ 2022 ರಲ್ಲಿ 14,518 ಯುನಿಟ್ಗಳನ್ನು ಮಾರಾಟ ಮಾಡುವುದರೊಂದಿಗೆ ಟಾಟಾ ನೆಕ್ಸಾನ್ ಭಾರತದ ಹೆಚ್ಚು ಮಾರಾಟವಾದ SUV ಆಗಿ ಹೊರ ಹೊಮ್ಮಿದೆ. ಅಂದರೆ, ವಾರ್ಷಿಕ ಆಧಾರದ ಮೇಲೆ ಅದರ ಮಾರಾಟವು 6 ಪ್ರತಿಶತದಷ್ಟು ಹೆಚ್ಚಾಗಿದೆ. 15,001 ಯುನಿಟ್ಗಳನ್ನು ಮಾರಾಟ ಮಾಡುವ ಮೂಲಕ ಮಾರುತಿ ಸುಜುಕಿ ಬ್ರೆಝಾ ಎರಡನೇ ಸ್ಥಾನದಲ್ಲಿದೆ. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಸಾಮಾನ್ಯವಾಗಿ ಪ್ರತಿ ತಿಂಗಳು ಈ ಎರಡರ ಪೈಕಿಯೇ ನಂಬರ್ ಒನ್ ಸ್ಥಾನಕ್ಕಾಗಿ ಪೈಪೋಟಿ ಏರ್ಪಡುತ್ತದೆ. ಸೆಪ್ಟೆಂಬರ್ನಲ್ಲಿ, ನೆಕ್ಸಾನ್ ನಂಬರ್-1 ಸ್ಥಾನಕ್ಕೆ ಏರಿದೆ.
ಇದಾದ ನಂತರ ಟಾಟಾ ಪಂಚ್ ಮೂರನೇ ಸ್ಥಾನದಲ್ಲಿದೆ. ಸೆಪ್ಟೆಂಬರ್ 2023 ರಲ್ಲಿ 13,036 ಯೂನಿಟ್ ಗಳ ಮಾರಾಟದೊಂದಿಗೆ ಟಾಟಾ ಪಂಚ್ ಮೂರನೇ ಸ್ಥಾನದಲ್ಲಿದೆ. ವಾರ್ಷಿಕ ಆಧಾರದಲ್ಲಿ ನೋಡುವುದಾದರೆ ಇದರ ಮಾರಾಟವು 6 ಪ್ರತಿಶತದಷ್ಟು ಹೆಚ್ಚಾಗಿದೆ. ಇದಾದ ಬಳಿಕ ಹ್ಯುಂಡೈ ಕ್ರೆಟಾ ಸೆಪ್ಟೆಂಬರ್ 2023 ರಲ್ಲಿ ಭಾರತದ ನಾಲ್ಕನೇ ಹೆಚ್ಚು ಮಾರಾಟವಾದ SUV ಆಗಿ ಹೊರಹೊಮ್ಮಿದೆ. ದಕ್ಷಿಣ ಕೊರಿಯಾದ ವಾಹನ ತಯಾರಕ ಕ್ರೆಟಾ 12,717 ಯುನಿಟ್ಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ ಕ್ರೆಟಾದ 12,866 ಯುನಿಟ್ಗಳು ಮಾರಾಟವಾಗಿತ್ತು. ಅಂದರೆ ವಾರ್ಷಿಕ ಆಧಾರದಲ್ಲಿ ನೋಡುವುದಾದರೆ ಇದರ ಮಾರಾಟದಲ್ಲಿ ಇಳಿಮುಖ ಕಂಡು ಬಂದಿದೆ.
ಇದನ್ನೂ ಓದಿ : ಭೂಮಿಯಿಂದ 400 ಕಿಮೀ ಎತ್ತರದಲ್ಲಿ ಬಾಹ್ಯಾಕಾಶದಲ್ಲಿ ಹೇಗೆ ಕಾಫಿ ಕುಡಿಯಬೇಕು? ವಿಡಿಯೋ ನೋಡಿ ಗೊತ್ತಾಗುತ್ತೆ...!
ಇವೆಲ್ಲದರ ನಂತರ ಹ್ಯುಂಡೈ ವೆನ್ಯೂ ಐದನೇ ಸ್ಥಾನದಲ್ಲಿದೆ. ಸಬ್ಕಾಂಪ್ಯಾಕ್ಟ್ SUV ವೆನ್ಯೂ ಒಟ್ಟು 12,204 ಯುನಿಟ್ಗಳನ್ನು ಮಾರಾಟ ಮಾಡಿದೆ. ಇದರ ಮಾರಾಟದಲ್ಲಿ ಹಿಂದಿನ ವರ್ಷಕ್ಕಿಂತ 11 ಪ್ರತಿಶತದಷ್ಟು ಹೆಚ್ಚಳ ಕಂಡು ಬಂದಿದೆ.
ಸೆಪ್ಟೆಂಬರ್ನಲ್ಲಿ ಹೆಚ್ಚು ಮಾರಾಟವಾದ SUV :
-- ಟಾಟಾ ನೆಕ್ಸಾನ್- 15,325 ಯುನಿಟ್ಗಳು ಮಾರಾಟವಾಗಿವೆ
-- ಮಾರುತಿ ಬ್ರೆಝಾ- 15,001 ಯುನಿಟ್ಗಳು ಮಾರಾಟವಾಗಿವೆ
-- ಟಾಟಾ ಪಂಚ್- 13,036 ಯುನಿಟ್ಗಳು ಮಾರಾಟವಾಗಿವೆ
-- ಹ್ಯುಂಡೈ ಕ್ರೆಟಾ- 12,717 ಯುನಿಟ್ಗಳು ಮಾರಾಟವಾಗಿವೆ
-- ಹ್ಯುಂಡೈ ವೆನ್ಯೂ- 12,204 ಯುನಿಟ್ಗಳು ಮಾರಾಟವಾಗಿವೆ
ಇದನ್ನೂ ಓದಿ :ಹಣದ ತುರ್ತು ಅಗತ್ಯ ಬಿದ್ದಾಗ PF ಖಾತೆಯಿಂದ ಸುಲಭವಾಗಿ ಹಣ ಪಡೆಯಬಹುದು ! ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇದು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.