Netflix ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್... ಟ್ಯಾರೀಫ್ ಪ್ಲಾನ್ ಹೆಚ್ಚಳದ ಸಾಧ್ಯತೆ!

Netflix: ನೆಟ್‌ಫ್ಲಿಕ್ಸ್ ತನ್ನ ಜಾಹೀರಾತು-ಮುಕ್ತ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ನೆಟ್‌ಫ್ಲಿಕ್ಸ್ ಅನೇಕ ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚುತ್ತಿರುವ ಬೆಲೆಗಳನ್ನು ಪರಿಗಣಿಸುತ್ತಿದೆ ಎನ್ನಲಾಗಿದೆ. Technology News In Kannada  

Written by - Nitin Tabib | Last Updated : Oct 4, 2023, 09:47 PM IST
  • ಟ್‌ಫ್ಲಿಕ್ಸ್, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟ್ರೀಮಿಂಗ್ ದೈತ್ಯ ಕಂಪನಿಯಾಗಿದ್ದು, ಪ್ರಸ್ತುತ ಅದು ತನ್ನ ವೆಚ್ಚವನ್ನು ಸರಿದೂಗಿಸಲು ಹೆಣಗಾಡುತ್ತಿದೆ.
  • ಕಂಪನಿಯು ಇತ್ತೀಚಿನ ವರ್ಷಗಳಲ್ಲಿ ಮೂಲ ಪ್ರದರ್ಶನಗಳು ಮತ್ತು ಚಲನಚಿತ್ರಗಳನ್ನು ಒಳಗೊಂಡಂತೆ ಹೊಸ ವಿಷಯಗಳಲ್ಲಿ ಶತಕೋಟಿ ಡಾಲರ್‌ಗಳ ಹೂಡಿಕೆ ಮಾಡಿದೆ.
  • ಇತ್ತೀಚೆಗೆ ಕಂಪನಿಯು ಲಾಭವನ್ನು ಹೆಚ್ಚಿಸಲು ಪಾಸ್‌ವರ್ಡ್ ಹಂಚಿಕೆಯನ್ನು ನಿಲ್ಲಿಸಿದೆ.
Netflix ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್... ಟ್ಯಾರೀಫ್ ಪ್ಲಾನ್ ಹೆಚ್ಚಳದ ಸಾಧ್ಯತೆ! title=

Netflix, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟ್ರೀಮಿಂಗ್ ವೇದಿಕೆಯಾಗಿದ್ದು, ಇದೀಗ ಅದು ತನ್ನ ಟ್ಯಾರೀಫ್ ಬೆಳೆಗಳನ್ನು ಹೆಚ್ಚಿಸುತ್ತಿದೆ ಎನ್ನಲಾಗಿದೆ. ಇತ್ತೀಚೆಗೆ, ಕಂಪನಿಯು ಪಾಸ್‌ವರ್ಡ್ ಹಂಚಿಕೆ ನಿಷೇಧಿಸುವುದಾಗಿ ಮತ್ತು ಜಾಹೀರಾತು-ಬೆಂಬಲಿತ ಯೋಜನೆಗಳನ್ನು ಪರಿಚಯಿಸುವುದಾಗಿ ಘೋಷಿಸಿತ್ತು. ಈಗ, ಅದರ ಜಾಹೀರಾತು-ಮುಕ್ತ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲು ಯೋಜಿಸುತ್ತಿದೆ ಎಂದು ವರದಿಯಾಗಿದೆ. ವಾಲ್ ಸ್ಟ್ರೀಟ್ ಜರ್ನಲ್ ನಲ್ಲಿ ಪರಕಟಗೊಂಡ ವರದಿಯ ಪ್ರಕಾರ, ನೆಟ್‌ಫ್ಲಿಕ್ಸ್ ಯುಎಸ್ ಮತ್ತು ಕೆನಡಾದಿಂದ ಪ್ರಾರಂಭಿಸಿ ಹಲವಾರು ಜಾಗತಿಕ ಮಾರುಕಟ್ಟೆಗಳಲ್ಲಿ ಬೆಲೆಗಳನ್ನು ಹೆಚ್ಚಿಸಲು ಪರಿಗಣಿಸುತ್ತಿದೆ.

ಯೋಜನೆಗಳ ಬೆಲೆಗಳು ಹೆಚ್ಚಾಗಬಹುದು
ಹಾಲಿವುಡ್ ನಟರ ಮುಷ್ಕರ ಮುಗಿದ ನಂತರ, ನೆಟ್‌ಫ್ಲಿಕ್ಸ್ ತನ್ನ ಚಂದಾದಾರಿಕೆ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಲು ಸಿದ್ಧತೆ ನಡೆಸುತ್ತಿದೆ ನಡೆಸುತ್ತಿದೆ. ವರದಿಗಳ ಪ್ರಕಾರ, Netflix ಕೆಲವೇ ವಾರಗಳಲ್ಲಿ ಹೊಸ ಬದಲಾವಣೆಗಳನ್ನು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದರೆ ಬೆಲೆ ಎಷ್ಟು ಏರಿಕೆಯಾಗಲಿದೆ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಮತ್ತು ನೆಟ್ ಫ್ಲಿಕ್ಸ್ ಕೂಡ ಈ ಕುರಿತು ಏನೂ ಬಹಿರಂಗಪಡಿಸಿಲ್ಲ. .

ಈಗಾಗಲೇ ತನ್ನ ಅತ್ಯುತ್ತಮ ಯೋಜನೆ ನಿಲ್ಲಿಸಿದ ನೆಟ್ ಫ್ಲಿಕ್ಸ್
ನೆಟ್‌ಫ್ಲಿಕ್ಸ್ ತನ್ನ ಅತ್ಯಂತ ಬೇಸಿಕ್ ಪ್ಲಾನ್ ಅನ್ನು US ನಲ್ಲಿ ತೆಗೆದುಹಾಕಿದೆ, ಅದು ತಿಂಗಳಿಗೆ $9.99 ಆಗಿತ್ತು. ಇದೀಗ ಅಲ್ಲಿ ಕಂಪನಿ ಕೇವಲ ಎರಡು ಯೋಜನೆಗಳನ್ನು ನೀಡುತ್ತದೆ: ತಿಂಗಳಿಗೆ $15.49 ಗೆ ಪ್ರಮಾಣಿತ ಜಾಹೀರಾತು-ಮುಕ್ತ ಯೋಜನೆ ಮತ್ತು ತಿಂಗಳಿಗೆ $6.99 ಗೆ ಜಾಹೀರಾತು-ಬೆಂಬಲಿತ ಯೋಜನೆ.

ಇದನ್ನೂ ಓದಿ-ಒಂಟಿತನ ನಿವಾರಣೆಗೆ ಸಿಕ್ಕ ದೊಡ್ಡ ಪರಿಹಾರ ಇದು! ವಿಶ್ವದಲ್ಲಿ ಕ್ರಾಂತಿ ಸೃಷ್ಟಿಸಲು ಬರಲಿದ್ದಾರೆ ವರ್ಚ್ಯುವಲ್ ಮನುಷ್ಯರು!

ಲಾಭ ಬಯಸುತ್ತಿದೆ ನೆಟ್ ಫ್ಲಿಕ್ಸ್ 
ನೆಟ್‌ಫ್ಲಿಕ್ಸ್, ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸ್ಟ್ರೀಮಿಂಗ್ ದೈತ್ಯ ಕಂಪನಿಯಾಗಿದ್ದು, ಪ್ರಸ್ತುತ ಅದು ತನ್ನ ವೆಚ್ಚವನ್ನು ಸರಿದೂಗಿಸಲು ಹೆಣಗಾಡುತ್ತಿದೆ. ಕಂಪನಿಯು ಇತ್ತೀಚಿನ ವರ್ಷಗಳಲ್ಲಿ ಮೂಲ ಪ್ರದರ್ಶನಗಳು ಮತ್ತು ಚಲನಚಿತ್ರಗಳನ್ನು ಒಳಗೊಂಡಂತೆ ಹೊಸ ವಿಷಯಗಳಲ್ಲಿ ಶತಕೋಟಿ ಡಾಲರ್‌ಗಳ ಹೂಡಿಕೆ ಮಾಡಿದೆ. ಇತ್ತೀಚೆಗೆ ಕಂಪನಿಯು ಲಾಭವನ್ನು ಹೆಚ್ಚಿಸಲು ಪಾಸ್‌ವರ್ಡ್ ಹಂಚಿಕೆಯನ್ನು ನಿಲ್ಲಿಸಿದೆ.

ಇದನ್ನೂ ಓದಿ-ಮಂಗಳನ ಅಂಗಳದಲ್ಲಿ ನಾಸಾ ಕಣ್ಣಿಗೆ ಬಿದ್ದ ದೈತ್ಯ ಸುಂಟರಗಾಳಿ, ಇಲ್ಲಿದೆ ವೀಡಿಯೋ ನೋಡಿ!

ಪಾಸ್‌ವರ್ಡ್ ಹಂಚಿಕೆಯನ್ನು ಟ್ರ್ಯಾಕ್ ಮಾಡಲು ಹೊಸ ವಿಧಾನಗಳನ್ನು ಅಳವಡಿಸಿಕೊಳ್ಳುವುದಾಗಿ ನೆಟ್‌ಫ್ಲಿಕ್ಸ್ ಹೇಳಿದೆ. ಇದಕ್ಕಾಗಿ ಕಂಪನಿಯು IP ಅಡ್ರೆಸ್, ಸಾಧನ ID ಮತ್ತು ಖಾತೆ ಚಟುವಟಿಕೆಯ ಸಂಯೋಜನೆಯನ್ನು ಬಳಸುತ್ತದೆ. ಈ ಪ್ರಕ್ರಿಯೆಯನ್ನು ಇದೀಗ US ಗ್ರಾಹಕರು ಮತ್ತು ಇತರ ಜಾಗತಿಕ ಮಾರುಕಟ್ಟೆಗಳಿಗೆ ಅನ್ವಯಿಸಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News