iPhone Offer: Amazon Great Freedom Day sale ಐಫೋನ್ 14 ಅಭಿಮಾನಿಗಳಿಗೆ ರಿಯಾಯಿತಿಯ ನೀಡಲು ಮುಂದಾಗಿದೆ. ಗ್ರಾಹಕರು ಈ ಸೇಲ್‌’ಗಾಗಿ ಬಹಳ ಸಮಯದಿಂದ ಕಾಯುತ್ತಿದ್ದರು. ಈಗ ಮಾರಾಟ ಪ್ರಾರಂಭವಾಗಿದ್ದು, ಇದರಲ್ಲಿ ಐಫೋನ್ 14 ಮಾದರಿಯಲ್ಲಿ ದೊಡ್ಡ ರಿಯಾಯಿತಿಯನ್ನು ಕಾಣಬಹುದು. ಊಹಿಸಲೂ ಸಾಧ್ಯವಾಗದಷ್ಟು ಕಡಿಮೆ ಬೆಲೆಗೆ ಐಫೋನ್ 14 ಲಭ್ಯವಾಗುತ್ತಿದ್ದು, ಈ ಮಾದರಿಯನ್ನು ಖರೀದಿಸಲು ಗ್ರಾಹಕರು ಮುಗಿಬೀಳುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೇವಲ 25 ಸಾವಿರ ಹೂಡಿಕೆ ಮಾಡಿದ್ರೆ 70 ಲಕ್ಷಕ್ಕೂ ಅಧಿಕ ಲಾಭ ಕೊಡುತ್ತೇ ಈ ಉದ್ಯಮ!


ಒಂದು ವೇಳೆ ನೀವು ಸಹ ಖರೀದಿಸಲು ಬಯಸಿದ್ದರೆ, ಈ ವರದಿಯನ್ನು ಓದಿ. ಇದರಿಂದ ನೀವು ಸಹ ಈ ಕೊಡುಗೆಯ ಲಾಭವನ್ನು ಪಡೆದುಕೊಳ್ಳಬಹುದು.


ರಿಯಾಯಿತಿಯ ಬಗ್ಗೆ ಮಾತನಾಡುವುದಾದರೆ, ಆಪಲ್ ಐಫೋನ್ 14 (128 ಜಿಬಿ) ನೀಲಿ ರೂಪಾಂತರದ ಮೂಲ ಬೆಲೆ ರೂ 79,900, ಆದರೆ ಗ್ರಾಹಕರಿಗೆ ಕೊಡುಗೆಯ ಅಡಿಯಲ್ಲಿ, ಈ ಮಾದರಿಯನ್ನು ರೂ 79,900 ಕ್ಕೆ ನೀಡಲಾಗುವುದಿಲ್ಲ,  ಬದಲಾಗಿ 16% ರಿಯಾಯಿತಿಯೊಂದಿಗೆ ಕೇವಲ ರೂ 67,499 ಕ್ಕೆ ನೀಡಲಾಗುತ್ತಿದೆ. ಈ ಕೊಡುಗೆಯಲ್ಲಿ ಗ್ರಾಹಕರು ಸಾಕಷ್ಟು ಉಳಿತಾಯ ಮಾಡಬಹುದು. ಇದರ ಜೊತೆಗೆ ಅನೇಕ ಆಫರ್‌’ಗಳನ್ನು ಪಡೆಯಬಹುದು.


ಇದನ್ನೂ ಓದಿ: ಈ ಐದು ಬ್ಯಾಂಕ್ ಗಳಲ್ಲಿ SB Account ಮೇಲೆಯೇ ಸಿಗುತ್ತಿದೆ ಶೇ.7.5 ರಷ್ಟು ಬಡ್ಡಿ!


ಬ್ಯಾಂಕ್ ಕೊಡುಗೆಯೂ ಇದೆ…


ಈ ರೂಪಾಂತರದಲ್ಲಿ ಬ್ಯಾಂಕ್ ಕೊಡುಗೆಗಳನ್ನು ಸಹ ಸೇರಿಸಲಾಗಿದೆ. ನೀವು SBI ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, ನಿಮಗೆ 1000 ರೂಗಳಲ್ಲಿ ಗರಿಷ್ಠ 10% ರಿಯಾಯಿತಿಯನ್ನು ನೀಡಲಾಗುತ್ತದೆ, ಈ ರಿಯಾಯಿತಿ EMI ನಲ್ಲಿ ಲಭ್ಯವಿರುತ್ತದೆ. ಇದರೊಂದಿಗೆ, ನೀವು SBI ಕ್ರೆಡಿಟ್ ಕಾರ್ಡ್‌ ನೊಂದಿಗೆ EMI ಅಲ್ಲದ ವಹಿವಾಟುಗಳನ್ನು ಮಾಡಿದಾಗ ನಿಮಗೆ 10% ಗರಿಷ್ಠ 750 ರೂಗಳ ತ್ವರಿತ ರಿಯಾಯಿತಿಯನ್ನು ನೀಡಲಾಗುತ್ತದೆ. ಹೆಚ್ಚುವರಿ ಕೊಡುಗೆಯ ಅಡಿಯಲ್ಲಿ, ನಿಮಗೆ 500 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತಿದೆ, ಇದರಲ್ಲಿ ನೀವು SBI ಕ್ರೆಡಿಟ್‌ನಿಂದ 9 ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ EMI ವಹಿವಾಟುಗಳನ್ನು ಮಾಡಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.